Neer Dose Karnataka
Take a fresh look at your lifestyle.

ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಅವರ ಅಣ್ಣ ಮತ್ತು ತಂಗಿ ಯಾರು ಗೊತ್ತಾ? ಅವರು ಈಗ ಹೇಗಿದ್ದಾರೆ ನೀವೇ ನೋಡಿ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟು ನಟರು ಒಳ್ಳೆಯ ಒಳ್ಳೆಯ ಕಥೆಗಳುಳ್ಳ ಸಿನಿಮಾಗಳನ್ನು ಆಯ್ಕೆ ಮಾಡಿ ಕೆಲವೇ ಕೆಲವು ಸಿನಿಮಾಗಳಲ್ಲಿ ನಟಿಸಿದರು ಕೂಡ ಅವರ ಅಭಿನಯ ಕನ್ನಡಿಗರ ಮನಸ್ಸಿಗೆ ತುಂಬಾ ಇಷ್ಟವಾಗಿದೆ. ಅಂತಹ ನಟರಲ್ಲಿ ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ ಕೂಡ ಒಬ್ಬರು. ಹೌದು ಇದೀಗಾಗಲೇ ಸಾಕಷ್ಟು ಸಿಂಪಲ್ ಕಥೆಗಳು ಸಿನಿಮಾಗಳಲ್ಲಿ ಕಾಣಿಸಿಕೊಂಡ ರಕ್ಷಿತ್ ಶೆಟ್ಟಿ ಅವರು ಅಭಿನಯದ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಕೂಡ ಹೊಂದಿದ್ದಾರೆ.

ಇನ್ನು ಇವರು 1983 ನಲ್ಲಿ ಉಡುಪಿನಲ್ಲಿ ಜನಿಸಿದರು. ಇದೀಗ ಇವರಿಗೆ 37 ವರ್ಷ ವಯಸ್ಸು. ಇವರು ಎನ್.ಎಮ್.ಎ.ಎಮ್ ಇಂಜಿನಿಯರಿಂಗ್ ಮಹಾ ವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ನಂತರ ಅವರು ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ವೃತ್ತಿಜೀವನವನ್ನು ಆರಂಭಿಸಿದರು. ಇನ್ನೂ ಒಳ್ಳೆಯ ಹುದ್ದೆ ಇದ್ದರೂ ಕೂಡ ನಟ ರಕ್ಷಿತ್ ಅವರಿಗೆ ಸಿನಿಮಾರಂಗದಲ್ಲಿ ನಿರ್ದೇಶಕರಾಗುವ ಆಸೆ ಇದ್ದುದರಿಂದ ಅವರು ಆ ಕೆಲಸವನ್ನು ಬಿಟ್ಟು ಸಿನಿಮಾ ರಂಗದಲ್ಲಿ ತೊಡಗಿ ಕೊಂಡರು.

ಸುಮಾರು ಎರಡು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾ ತುಂಬಾ ಕಷ್ಟಗಳನ್ನು ಎದುರಿಸಿದರು. ಆಗ ಅವರ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದಿದ್ದುರ ಕಾರಣ ಅವರು ಒಂದು ರೂಮಿನಲ್ಲಿ 8 ಕೂಡಿ ಮಲಗುತ್ತಿದ್ದರಂತೆ. ಆಗವರು ಒಪ್ಪತ್ತಿನ ಊಟಕ್ಕಾಗಿ ಕೂಡ ಪರದಾಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ ಸಿನಿಮಾರಂಗದಲ್ಲಿ ಯಾವ ಉತ್ತಮ ಅವಕಾಶಗಳು ಕೂಡ ಅವರಿಗೆ ದೊರೆಯಲಿಲ್ಲ. ಹೀಗಾಗಿ ಅವರು ಡೆಬಿ ಹೀರೋ ಆಗಿ ತುಗಲಕ್ ಸಿನಿಮಾದಲ್ಲಿ ಕೆಲಸ ಮಾಡಿದರು. ಆದರೆ ಆ ಸಿನಿಮಾ ಹೆಚ್ಚು ವೀಕ್ಷಕರನ್ನು ಪಡೆಯಲಿಲ್ಲ. ಹೀಗಾಗಿ ಅವರು ಚಿತ್ರಮಂದಿರದಲ್ಲಿ ಸಿನಿಮಾ ನೋಡುವಾಗ ಕಣ್ಣೀರು ಹಾಕಿದ್ದಾರಂತೆ.

ಇನ್ನು ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಅವರನ್ನು ಕೈಹಿಡಿದಿದ್ದು ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಸಿನಿಮಾ. ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಪಡೆದ ನಟ ರಕ್ಷಿತ್ ಶೆಟ್ಟಿ ಅವರು ಮುಂದಿನ ದಿನಗಳಲ್ಲಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಭಿನಯಿಸಿ ಮತ್ತಷ್ಟು ಜನಪ್ರಿಯತೆ ಪಡೆದರು. ಇನ್ನು ಕಿರಿಕ್ ಪಾರ್ಟಿ ಸಿನಿಮಾ ಅಂದಿನ ದಿನಗಳಲ್ಲಿ ಸುಮಾರು 50 ಕೋಟಿ ಎಷ್ಟು ಕಲೆಕ್ಷನ್ ಮಾಡಿದೆ.

ಈ ಸಿನಿಮಾದ ಮೂಲಕ ಅವರು ಯಶಸ್ವಿ ಪಡೆದು ನಂತರ ಅನೇಕ ಸಿನಿಮಾಗಳಲ್ಲಿ ನಾಯಕ ನಟರಾಗಿ ಅಭಿನಯಿಸಿ ಕನ್ನಡ ಚಿತ್ರರಂಗದ ಸ್ಟಾರ್ ನಟರಾಗಿದ್ದಾರೆ. ಇನ್ನೂ ರಕ್ಷಿತ್ ಶೆಟ್ಟಿ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಅವರಿಗೆ ಒಬ್ಬ ಅಣ್ಣ ಹಾಗೂ ಒಬ್ಬಳು ತಂಗಿ ಇದ್ದಾರೆ. ಇವರ ಅಣ್ಣನ ಹೆಸರು ರಂಜಿತ್. ಇವರು ಬೆಂಗಳೂರಿನಲ್ಲಿ ಪ್ರಾಪರ್ಟಿ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದು ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಇನ್ನು ರಕ್ಷಿತ್ ಶೆಟ್ಟಿ ಅವರ ತಂಗಿ ಹೆಸರು ರಶ್ಮಿ. ಇವರಿಗೆ ಈಗಾಗಲೇ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಇದೀಗ ಉಳಿದಿದ್ದು ಮಾತ್ರ ರಕ್ಷಿತ್ ಶೆಟ್ಟಿ ಅವರ ಮದುವೆ. ಆದರೆ ಅವರು ನಟಿ ರಶ್ಮಿಕ ಮಂದಣ್ಣ ಅವರೊಂದಿಗೆ ನಿಶ್ಚಿತಾರ್ಥ ಮಾಡಿ ಕೊಂಡಿದ್ದರು. ಆದರೆ ಕಾರಣಾಂತರಗಳಿಂದ ಅದು ಮುರಿದುಬಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವರು ಮದುವೆಯ ಬಗ್ಗೆ ಯಾವುದೇ ವಿಚಾರಗಳನ್ನು ಪ್ರಸ್ತಾಪ ಮಾಡಿಲ್ಲ. ಇನ್ನು ಅವರು ಯಾರನ್ನು ಮದುವೆಯಾಗುತ್ತಾರೆ ಎಂಬುದನ್ನು ಕಾದು ನೋಡ ಬೇಕಾಗಿದೆ.

Comments are closed.