Neer Dose Karnataka
Take a fresh look at your lifestyle.

ಮತ್ತೆ ಹಾಡಿತು ಕೋಗಿಲೆ ಚಿತ್ರದ ನಾಯಕಿ ರೂಪಿಣಿ ರವರು ವಿಚ್ಚೇದನ ಪಡೆದು ಈಗ ಏನು ಮಾಡುತ್ತಿದ್ದಾರೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೊಡಗಿನಲ್ಲಿ ಉದಯಿಸುವ ಕಾವೇರಿ ಹರಿದು ತಮಿಳುನಾಡಿನ ಜನರ ಬಾಯಾರಿಕೆ ತಣಿಸಿದಂತೆ ಎಲ್ಲೋ ಹುಟ್ಟಿರುವವರು ನಂತರ ಯಾವುದೋ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿ ನಂತರ ಕನ್ನಡ ಚಿತ್ರರಂಗದಲ್ಲಿ ಬಂದು ನಟಿಸಿ ಕನ್ನಡಿಗರಿಗೂ ಮನೋರಂಜನೆ ನೀಡುತ್ತಾರೆ. ಕನ್ನಡ ಚಿತ್ರರಂಗ ಮೊದಲಿನಿಂದಲೂ ಈಗಲೂ ಸಹ ಹೊರಗಿನರು ಯಾರೇ ಬಂದರೂ ಕೈಬಿಸಿ ಕರೆದು ಅವಕಾಶದ ಅಪ್ಪುಗೆ ನೀಡಿದ್ದು ಹಲವಾರು ಸಾಬೀತಾಗಿದೆ.

ಇದೇ ಕ್ಯಾಟಗರಿಯಲ್ಲಿ ಬರುವವರೇ ಈ ನಟಿ. ಅವರು ಬೇರೆ ಯಾರೂ ಅಲ್ಲ ಕನ್ನಡದ ಸೂಪರ್ ಹಿಟ್ ಚಿತ್ರ ಮತ್ತೆ ಹಾಡಿತು ಕೋಗಿಲೆ ಚಿತ್ರದ ನಟಿ ರೂಪಿಣಿ. ಹೌದು ನಟಿ ರೂಪಿಣಿಯವರ ಕುರಿತಂತೆ ಇಂದಿನ ಈ ವಿಷಯದಲ್ಲಿ ನಾವು ಹೇಳಲಿದ್ದೇವೆ. 1969ರಲ್ಲಿ ಮುಂಬೈನಲ್ಲಿ ಗುಜರಾತಿ ಕುಟುಂಬದಲ್ಲಿ ಜನಿಸಿದವರು ರೂಪಿಣಿ. ರೂಪಿಣಿಯವರ ಹುಟ್ಟು ಹೆಸರು ಕೋಮಲ್ ಮಹುವಕರ್ ಎಂದು. ಮನೆಯಲ್ಲಿ ತಂದೆ ತಾಯಿ ಅನುಕೂಲಸ್ಥರೇ ಆಗಿದ್ದರು. ತಂದೆ ವಕೀಲರಾಗಿದ್ದರೆ ತಾಯಿ ವೈದ್ಯರಾಗಿದ್ದರು. ಚಿಕ್ಕ ವಯಸ್ಸಿನಲ್ಲೇ ಬಾಲಿವುಡ್ ನ ರಾಜ ಅಮಿತಾಬ್ ಬಚ್ಚನ್ ರವರ ಮಿಲಿ ಚಿತ್ರದಲ್ಲಿ ಬಾಲನಟಿಯಾಗಿ ಕೂಡ ನಟಿಸಿದ್ದರು.

ಬಾಲ್ಯದಿಂದಲೇ ನೃತ್ಯ ಹಾಗೂ ನಟನೆಯಲ್ಲಿ ಅಪಾರವಾದ ಆಸಕ್ತಿಯನ್ನು ಬೆಳೆಸಿಕೊಂಡಿದ್ದರು ನಟಿ ರೂಪಿಣಿ. ಎಲ್ಲಾ ಕಲಿತು ಪ್ರವೀಣರಾದಮೇಲೆ ರೂಪಿಣಿ ಚಿತ್ರರಂಗಕ್ಕೆ 1980 ರಲ್ಲಿ ಪಾದಾರ್ಪಣೆ ಮಾಡುತ್ತಾರೆ. ಎಲ್ಲಾ ಬಗೆಯ ಪಾತ್ರಗಳನ್ನು ಸಲೀಸಾಗಿ ಮಾಡೋ ಛಾತಿ ಅವರಲ್ಲಿತ್ತು. ಅಂದಿನ ಎಲ್ಲಾ ಟಾಪ್ ಸ್ಟಾರ್ ಗಳ ಜೊತೆ ಕೂಡ ನಟಿಸಿದ್ದರು ರೂಪಿಣಿ. ಕನ್ನಡಕ್ಕೆ ರೂಪಿಣಿ ಎಂಟ್ರಿ ಕೊಟ್ಟಿದ್ದು 1988ರ ಸಾಹಸಸಿಂಹ ಡಾ ವಿಷ್ಣುವರ್ಧನ್ ರವರ ಒಲವಿನ ಆಸರೆ ಚಿತ್ರದ ಮೂಲಕ. ನಂತರವೂ ರೂಪಿಣಿ.ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

ಅದರಲ್ಲಿ ಪ್ರಮುಖ ಚಿತ್ರಗಳೆಂದರೆ ದೇವ, ಮತ್ತೇ ಹಾಡಿತು ಕೋಗಿಲೆ, ನೀನು ನಕ್ಕರೆ ಹಾಲು ಸಕ್ಕರೆ, ರವಿವರ್ಮ, ಗೋಪಿ ಕೃಷ್ಣ, ಸಪ್ತಪದಿ. ದಕ್ಷಿಣ ಭಾರತದ ಸ್ಟಾರ್ ನಟಿಯಾಗಿ ಮೆರೆದವರು ರೂಪಿಣಿ. ಕಮಲ್ ಹಾಸನ್, ರಜನಿಕಾಂತ್, ವಿಷ್ಣು ದಾದ, ರವಿಚಂದ್ರನ್ ಹೀಗೆ ಎಲ್ಲಾ ಟಾಪ್ ನಟರ ಚಿತ್ರಗಳಲ್ಲಿ ತಾರೆಯಾಗಿದ್ದವರು. ರೂಪಿಣಿಯವರ ವಿವಾಹ 1995 ರಲ್ಲಿ ಏನೋ ನಡೆಯಿತು ಆದರೆ ನೀವೆಲ್ಲ ಅಂದುಕೊಂಡಂತೆ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರು ದಂಪತಿಗಳು 2005 ರಲ್ಲಿ ವಿವಾಹ ವಿಚ್ಛೇದನ ಪಡೆದರು.

ನಂತರದಲ್ಲಿ ರೂಪಿಣಿಯವರು ಚೆನ್ನೈನಲ್ಲಿ ನೆಲೆಸಿ ಸ್ಪರ್ಶ ಫೌಂಡೇಶನ್ ಎಂಬ ಟೃಸ್ಟ್ ನ ಮೂಲಕ ವಿಕಲ ಚೇತನ ಮಕ್ಕಳ ಬದುಕಿನಲ್ಲಿ ದಾರಿದೀಪವಾಗಿದ್ದಾರೆ. ರೂಪಿಣಿಯವರಿಗೆ ಅನಿಶಾ ಎಂಬ ಒಬ್ಬ ಹೆಣ್ಣು ಮಗಳಿದ್ದಾಳೆ. ರೂಪಿಣಿಯವರು ಸಮಾಜಮುಖಿ ಸೇವೆಯಲ್ಲಿ ಇಂದಿಗೂ ಬದುಕಿನ ಸಾರ್ಥಕತೆಯನ್ನು ಕಂಡು ಕೊಂಡಿದ್ದಾರೆ. ನಮಗಂತೂ ನಟಿ ರೂಪಿಣಿಯವರು ಈಗ ಮಾಡುತ್ತಿರುವ ಸಮಾಜ ಮುಖಿ ಕಾರ್ಯಗಳ ಬಗ್ಗೆ ಹೆಮ್ಮೆ ಇದೆ. ನಿಮಗೆ ಇವರ ಕಥೆ ಕೇಳಿ ಏನನ್ನಿಸಿತು ಎಂದು ಮರೆಯದೇ ಕಾಮೆಂಟ್ ಮಾಡಿ ತಿಳಿಸಿ.

Comments are closed.