Neer Dose Karnataka
Take a fresh look at your lifestyle.

ಶಿವಣ್ಣ ರವರ ನಾಗವಾರದ ಅರಮನೆಯನ್ನು ಮೊದಲ ಬಾರಿಗೆ ತೋರಿಸ್ತೇವೆ ನೋಡಿ, ಥೇಟ್ ಭೂಲೋಕದ ಸ್ವರ್ಗ

8

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರ ಎಂದು ಬಂದಾಗ ಮೂರು ಮದುವೆಗಳಲ್ಲಿ ಭಾಗವಾಗುತ್ತದೆ. ಒಂದು ರಾಜಕುಮಾರ್ ರವರ ಕಾಲ ಒಂದು ಈಗಿನ ಸ್ಟಾರ್ ನಟರ ಕಾಲ ಹಾಗೂ ಮೂರನೆಯದು ಈಗ ಉದಯೋನ್ಮುಖ ನಟರು ನಟಿಸುತ್ತಿರುವ ಕಾಲ. ನಾವು ಈಗ ಹೇಳಹೊರಟಿರುವ ನಟ ಈ ಮೂರು ಕಾಲಗಳನ್ನು ಸಹ ಇಂದಿಗೂ ಟಾಪ್ ನಟರ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ.

ಕಿಚ್ಚ ಸುದೀಪ್ ರವರು ಇವರ ಕುರಿತಂತೆ ಮಾತನಾಡುತ್ತ ಹೇಳುತ್ತಾರೆ ಇವರು ತಮ್ಮ ತಂದೆಯನ್ನು ಗೆದ್ದಂತಹ ನಟ ಎಂದು. ಹೌದು ನೀವು ಕರೆಕ್ಟಾಗಿ ಗೆಸ್ಟ್ ಮಾಡಿದ್ದೀರಾ ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಲೀಡರ್ ಹ್ಯಾಟ್ರಿಕ್ ಹೀರೋ ಶಿವಣ್ಣ ನವರ ಕುರಿತಂತೆ. ಈ ಹಿಂದೆ ಕನ್ನಡ ಚಿತ್ರ ಎಂದು ಬಂದಾಗ ಹೇಗೆ ಅಂಬರೀಶ್ ಅವರು ಮುಂದೆ ನಿಂತು ಸಮಸ್ಯೆಗಳನ್ನು ಬಗ್ಗೆ ಹರಿಸುತ್ತಿದ್ದರೋ ಹಾಗೆ ಅವರ ಕಾಲಾನಂತರ ಈಗ ಕನ್ನಡ ಚಿತ್ರರಂಗದ ನಾಯಕನಾಗಿ ಶಿವಣ್ಣನವರು ಮುಂದೆ ನಿಂತು ಕಾರ್ಯಗಳನ್ನು ನಡೆಸಿಕೊಡುತ್ತಿದ್ದಾರೆ.

ಚಿತ್ರರಂಗದಲ್ಲಿ ಶಿವಣ್ಣನ ಮಾತಿಗೆ ಇಂದಿಗೂ ಸಹ ಒಂದು ತೂಕವಿದೆ. ಶಿವಣ್ಣ ಎಂದಾಗ ನಮಗೆ ಮೊದಲು ನೆನಪು ಬರುವುದು ಅವರ ಡ್ಯಾನ್ಸ್ ನಟನೆ ಹಾಗೂ ಈ ವಯಸ್ಸಿನಲ್ಲಿ ಕೂಡ ಅವರು ನಟನೆಯಲ್ಲಿ ತೋರಿಸುತ್ತಿರುವ ಎನರ್ಜಿ. ಹೌದು ಶಿವಣ್ಣ ಈಗ ಐವತ್ತು ವರ್ಷಕ್ಕಿಂತಲೂ ಜಾಸ್ತಿ ವಯಸ್ಸಾಗಿದೆ ಆದರೂ ಕೂಡ ಅವರ ನಟನೆಯಲ್ಲಿ ಹಾಗೂ ಯಾವುದೇ ಸಾಹಸ ದೃಶ್ಯಗಳಲ್ಲಿ ಅವರು ಯಾವಾಗಲೂ ಟಾಪ್ ನಲ್ಲಿರುತ್ತಾರೆ. ಶಿವಣ್ಣ ಎಂದಾಗ ಇನ್ನೊಂದು ವಿಷಯ ಕಂಡಿತ ನೆನಪಿಗೆ ಬರುತ್ತದೆ ಅದು ಅವರ ಸಿಂಪ್ಲಿಸಿಟಿ.

ಕನ್ನಡ ಚಿತ್ರರಂಗಕ್ಕೆ ಅದೆಷ್ಟೋ ಕಿರಿಯರು ಬಂದರು ಪ್ರೋತ್ಸಾಹಿಸಿ ಅವರ ಗೆಲುವಿಗೆ ಶುಭಹಾರೈಸಿದ ನಟ ಎಂದರೆ ಅದು ಶಿವಣ್ಣ. ಚಿತ್ರರಂಗದಲ್ಲಿ ಕಾಲಿಟ್ಟ ಕ್ಷಣದಿಂದಲೇ ಹ್ಯಾಟ್ರಿಕ್ ಹೀರೋ ಎಂಬ ಬಿರುದು ಪಡೆದು ತಂದೆಗೆತಕ್ಕಮಗ ಎಂದು ಸಾಬೀತು ಮಾಡಿದರು. ತಂದೆ ಚಿತ್ರರಂಗದ ಮೇರು ನಟನಾಗಿದ್ದರೂ ತಾನು ಸ್ವಂತ ಪರಿಶ್ರಮದಲ್ಲಿ ತಮ್ಮ ನಟನೆಯ ಮೂಲಕ ತಮ್ಮದೇ ಆದಂತಹ ಅಭಿಮಾನಿ ಬಳಗವನ್ನು ಪಡೆದವರು ಶಿವಣ್ಣ. ಶಿವಣ್ಣ ಎಂದರೆ ಸ್ಯಾಂಡಲ್ವುಡ್ ಮಂದಿಗೆ ಇಂದಿಗೂ ಅದೇನೋ ಒಂಥರಾ ಪ್ರೀತಿ ತಮ್ಮ ಸ್ವಂತ ಸಹೋದರನಂತೆ ಶಿವಣ್ಣನವರನ್ನು ಕಾಣುತ್ತಾರೆ.

ಇನ್ನು ಶಿವಣ್ಣ ತಮ್ಮ ಸಹೋದರರೊಂದಿಗೆ ಒಂದೇ ಮನೆಯಲ್ಲಿ ಇಲ್ಲದಿದ್ದರೂ ತಮ್ಮ ಮನದಲ್ಲಿ ಸಹೋದರರಿಗೆ ಎಲ್ಲರಿಗಿಂತ ಹೆಚ್ಚಿನ ಸ್ಥಾನವನ್ನು ನೀಡಿದ್ದಾರೆ ಸಹೋದರರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಾರೆ. ಕರುನಾಡ ಚಕ್ರವರ್ತಿ ಶಿವಣ್ಣ ತಮ್ಮ ಕುಟುಂಬದೊಂದಿಗೆ ನಾಗವಾರದ ತಮ್ಮ ಮನೆಯಲ್ಲಿ ನೆಲೆಸಿದ್ದಾರೆ. ಶಿವಣ್ಣನವರ ಮನೆ ನೋಡಕ್ಕೆ ಎರಡು ಕಣ್ಣು ಸಾಲದು ಅಷ್ಟೊಂದು ಶ್ರೀಮಂತವಾಗಿ ಹಾಗೂ ಸುಂದರವಾಗಿ ನಿರ್ಮಿಸಲಾಗಿದೆ.

ಶಿವಣ್ಣನವರ ಮನೆ ನಾಗವಾರ ಮಾನ್ಯತಾ ಟೆಕ್ ಪಾರ್ಕ್ ಎಂಬ ಸ್ಥಳದ ಬಳಿಯಿದೆ. ಪ್ರಕೃತಿಪ್ರಿಯ ರಾಗಿರುವ ಶಿವಣ್ಣ ತಮ್ಮ ಮನೆಯ ಬಳಿಯೇ ಸುಂದರವಾದ ಗಾರ್ಡನ್ ಕೂಡ ನಿರ್ಮಿಸಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಶಿವಣ್ಣ ತಮ್ಮ ಮನೆಯನ್ನು ತಮ್ಮ ರುಚಿಗೆ ತಕ್ಕಂತೆ ಬಹುಸುಂದರವಾಗಿ ನಿರ್ಮಿಸಿದ್ದಾರೆ. ಶಿವಣ್ಣ ಅವರ ನಟನೆ ಹಾಗೂ ವ್ಯಕ್ತಿತ್ವದ ಅಭಿಮಾನಿಗಳಾಗಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಶಿವಣ್ಣನವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

Leave A Reply

Your email address will not be published.