Neer Dose Karnataka
Take a fresh look at your lifestyle.

ಒಂದೇ ದಿನದಲ್ಲಿ ಭೇಟಿ, ಪ್ರೀತಿ ಹಾಗೂ ಸಂಜೆ ಮದುವೆ ಮಾಡಿಕೊಂಡ ಕನ್ನಡದ ಖ್ಯಾತ ನಟಿ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಾವು ಹಲವಾರು ಚಿತ್ರವಿಚಿತ್ರವಾದ ಪ್ರೇಮ ವಿವಾಹಗಳನ್ನು ನೋಡಿದ್ದೇವೆ. ಹೌದು ಒಂದೇ ದಿನದಲ್ಲಿ ಪ್ರೀತಿ ಮಾಡಿ ಮದುವೆಯಾಗಿ ಮರುದಿನವೇ ದೂರವಾದ ಜೋಡಿಗಳನ್ನು ಕೂಡ ನೋಡಿದ್ದೇವೆ. ಅಷ್ಟೇ ಅಲ್ಲದೆ ಒಂದೇ ದಿನದಲ್ಲಿ ಪ್ರೀತಿಸಿ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿರುವ ಪ್ರೇಮಿಗಳನ್ನು ಕೂಡ ನಾವು ನೋಡಿದ್ದೇವೆ. ಇನ್ನು ಇದು ಸಾಮಾನ್ಯರ ಜೀವನದಲ್ಲಿ ಸಾಕಷ್ಟು ಬಾರಿ ನಡೆದ ಉದಾಹರಣೆಗಳು ನಮಗೆ ಸಿಗುತ್ತವೆ. ಆದರೆ ಚಿತ್ರರಂಗದ ಖ್ಯಾತ ನಟಿ ಒಬ್ಬರು ಈ ರೀತಿ ಮಾಡುವುದು ತೀರ ವಿರಳ.

ಆದರೆ ಕನ್ನಡ ಚಿತ್ರರಂಗದ ಖ್ಯಾತ ರಂಗ ಒಬ್ಬರು ಒಂದೇ ದಿನದಲ್ಲಿ ಮುಂಜಾನೆ ಭೇಟಿ, ಮಧ್ಯಾಹ್ನ ಪ್ರೀತಿ ಹಾಗೂ ಸಾಯಂಕಾಲ ಮದುವೆಯಾಗಿದ್ದಾರೆ. ಇದು ಎಲ್ಲರಲ್ಲಿ ಕೂಡ ಅಚ್ಚರಿ ಮೂಡಿಸಿದರೂ ನಿಜವಾದ ಸಂಗತಿ. ಹೌದು ಒಂದೇ ದಿನದಲ್ಲಿ ಪ್ರೀತಿ ಮಾಡಿ ಮದುವೆಯಾಗಿತ್ತು ಇಂದಿನವರೆಗೂ ಕೂಡ ಸಂಸಾರ ನಡೆಸುತ್ತಿದ್ದಾರೆ. ಹಾಗಾದರೆ ಆ ನಟಿ ಯಾರು? ಯಾರನ್ನು ಮದುವೆಯಾದರು ಎಂಬುದರ ಬಗ್ಗೆ ಸಂಪೂರ್ಣವಾಗಿ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಹೌದು ಕನ್ನಡದ ಖ್ಯಾತ ನಟಿಯ ಒಬ್ಬರು ಮುಂಜಾನೆ ಭೇಟಿಯಾದ ನಿರ್ದೇಶಕರು ಒಬ್ಬರನ್ನು ಮಧ್ಯಾಹ್ನ ಪ್ರೀತಿಸಿ ಸಂಜೆ ವೇಳೆಗೆ ಮದುವೆ ಮಾಡಿಕೊಂಡಿದ್ದಾರೆ. ಆ ನಟಿ ಮತ್ತ್ಯಾರು ಅಲ್ಲ ಕನ್ನಡದ ಅನೇಕ ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ತುಳಸಿ. ಹೌದು ಇವರು ಇದೀಗ ಕನ್ನಡ ಚಿತ್ರಂಗದಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇವರು 90ರ ದಶಕದಲ್ಲಿ ಖ್ಯಾತ ನಾಯಕನಟಿ. ಒಂದು ದಿನ ನಟ ದೇವರಾಜ್ ಅಭಿನಯದ ‘ಮದರ್ ಇಂಡಿಯಾ’ ಎಂಬ ಸಿನಿಮಾದ ಚಿತ್ರೀಕರಣದ ಸಮಯ. ಇನ್ನು ಆ ಚಿತ್ರವನ್ನು ನಿರ್ದೇಶಿಸಿದವರು ನಿರ್ದೇಶಕ ಶಿವಮಣಿ.

ಆ ಸಿನಿಮಾದಲ್ಲಿ ಒಂದು ಪಾತ್ರಕ್ಕೆ ನಟಿ ತುಳಸಿ ಅವರು ಆಯ್ಕೆಯಾಗಿದ್ದರು. ಇನ್ನು ತಮ್ಮ ಪಾತ್ರದ ದೃಶ್ಯದ ಚಿತ್ರೀಕರಣಕ್ಕೆ ನಟಿ ತಿಳಿಸಿ ಬಂದಿದ್ದರು. ಆ ಸಮಯದಲ್ಲಿ ನಿರ್ದೇಶಕ ಶಿವಮಣಿ ಅವರು ಸಿ-ಗ-ರೇ-ಟ್ ಸೇದುತ್ತಿದ್ದರು. ಅದರ ಹೊಗೆ ನಟಿ ತುಳಸಿ ಅವರು ಕೆಮ್ಮುವಂತೆ ಮಾಡಿದ್ದು, ನಿರ್ದೇಶಕರನ್ನು ನಟಿ ತುಳಸಿ ಅವರ ಕಡೆಗೆ ನೋಡುವಂತೆ ಕೂಡ ಮಾಡಿತ್ತು. ಇದೇ ಕ್ಷಣದಲ್ಲಿ ನಟಿ ತುಳಸಿ ಹಾಗೂ ನಿರ್ದೇಶಕ ಶಿವಮಣಿ ಅವರ ಮಧ್ಯೆ ಕಣ್ಣಿನಲ್ಲಿ ಪ್ರೇಮ ಉಂಟಾಗಿದೆ.

ಇನ್ನು ಅದೇ ತಾನೇ ಒಬ್ಬರನ್ನೊಬ್ಬರು ನೋಡಿದವರು ಮಧ್ಯಾಹ್ನದ ಊಟದ ಸಮಯಕ್ಕೆ ಒಳ್ಳೆಯ ಸ್ನೇಹಿತರಾಗಿದ್ದರು. ನಂತರ ಸಂಜೆ ವೇಳೆಗೆ ಶಿವಮಣಿ ಅವರು ಮನೆಗೆ ಹೋಗಿ ತಂದೆ ತಾಯಿ ಆಶೀರ್ವಾದ ಪಡೆದು ಮಾಂಗಲ್ಯವನ್ನು ತಂದುಬಿಟ್ಟರು. ನಂತರ ಅವರು ನಟಿ ತಿಳಿಸಿ ಬಳಿಬಂದು ನಾನು ನಿಮ್ಮನ್ನು ಮದುವೆಯಾಗುತ್ತೇನೆ ಎಂದು ಹೇಳಿದರು. ಆಗ ನಟಿ ತುಳಸಿ ಅವರಿಗೆ ಇದೆಲ್ಲಾ ಗೊತ್ತಿತ್ತು. ಹೀಗಾಗಿ ಅವರು ಕೂಡ ಶಿವಮಣಿ ಅವರಿಗೆ ಮನಸೋತು ಸಂಜೆ ಒಂದು ದೇವಸ್ಥಾನದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಇನ್ನು ನಟಿ ತುಳಸಿ ಹಾಗೂ ನಿರ್ದೇಶಕ ಶಿವಮಣಿ ಅವರು ಮದುವೆಯಾಗಿರುವ ವಿಚಾರ ಯಾರಿಗೂ ಕೂಡ ತಿಳಿದಿರಲಿಲ್ಲ. ರಾತ್ರಿ ಸಮಯದಲ್ಲಿ ಮನೆಗೆ ಹೋದ ನವದಂಪತಿಗಳು ಎಲ್ಲ ವಿಷಯವನ್ನು ಹೇಳಿದ್ದಾರೆ. ಆಗ ಇವರು ಮದುವೆಯಾಗಿರುವ ವಿಚಾರ ಎಲ್ಲರಿಗೂ ತಿಳಿಯಿತು. ಆಗ ಎಲ್ಲರೂ ಒಂದು ಕ್ಷಣ ಚಕಿತರಾಗಿದ್ದರು. ಇದೆಲ್ಲ ನಡೆದಿದ್ದು 1995 ರಲ್ಲಿ ಅಂದಿನ ದಿನ ಹೀಗೆ ಏಕಾಏಕಿ ಮದುವೆಯಾದ ಈ ಜೋಡಿ ಇಂದಿನವರೆಗೆ ಸುಖ ಸಂಸಾರ ನಡೆಸುತ್ತಿದ್ದಾರೆ. ಇನ್ನು ಪ್ರೇಮ ವಿವಾಹಕ್ಕೆ ಇವರ ನಿದರ್ಶನವನ್ನು ನಾವು ನೀಡಬಹುದು. ಇನ್ನು ಈ ರೀತಿಯ ಪ್ರೇಮ ವಿವಾಹಕ್ಕೆ ನೀವು ಏನು ಹೇಳುತ್ತೀರಿ ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.