Neer Dose Karnataka
Take a fresh look at your lifestyle.

ವಿಷ್ಣು ದಾದಾ ಸೇರಿದಂತೆ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ ಟಾಪ್ ನಟಿ, ಇದೀಗ ಜೇವನಕ್ಕಾಗಿ ಏನು ಮಾಡುತ್ತಿದ್ದಾರೆ ಗೊತ್ತಾ??

10

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಸ್ಟಾರ್ ಆಗಿ ಮಿಂಚಿದವರು ಜನರು ಅಂದರೆ ಪ್ರೇಕ್ಷಕರು ಕೈ ಹಿಡಿದಿರೋವರೆಗೆ ಮಾತ್ರ ಅವರು ಬಲವಾಗಿ ನಿಲ್ಲುತ್ತಾರೆ. ಜನರು ಅವರನ್ನು ಮರೆತರೆ ಅವರು ಎಂತಹ ದೊಡ್ಡ ಸ್ಟಾರ್ ಆದರೂ ಸರಿಯೇ ಅವರು ಪಾತಾಳಕ್ಕೆ ಕುಸಿಯುತ್ತಾರೆ ಎಂಬುದು ಹಲವಾರು ಚಿತ್ರರಂಗದಲ್ಲಿ ಸಾಬೀತಾಗಿದೆ. ಅವರು ಅದೆಂಥ ಪರಿಶ್ರಮವನ್ನೇ ಪಟ್ಟಿರಲಿ , ಅವರ ಮಟ್ಟಿಗೆ ಅವರು ಎಂತಹ ಪ್ರದರ್ಶನವನ್ನೇ ನೀಡುತ್ತಿರಲಿ ಒಮ್ಮೆ ಅಭಿಮಾನಿಗಳು ಕೈ ಬಿಟ್ಟರೆ ಮುಗೀತು.

ಈ ಕಾಲದಲ್ಲಿ ಒಬ್ಬರ ಜಾಗಕ್ಕೆ ಇನ್ನೊಬ್ಬರು ಎಂಬ ಮಾತು.ಅಕ್ಷರಶಃ ನಿಜ. ಇದು ವೇಗದ ದುನಿಯಾ ಇದರಲ್ಲಿ ಒಮ್ಮೆ ಆಯತಪ್ಪಿದರೆ ಸಾಕು ಮೇಲೆಳಲಾಗದಷ್ಟು ಕೆಳಕ್ಕೆ ಹೂತುಹೋಗುತ್ತೇವೆ. ಆದರೂ ಅದನ್ನು ಮೆಟ್ಟಿ ನಿಲ್ಲೋ ತಾಕತ್ತು ನಾವು ತೋರಿಸಬೇಕು. ಈ ಮಾತುಗಳಿಗೆ ಸೂಕ್ತ ವೆಂಬಂತಹ ನಟಿಯ ಬಗ್ಗೆ ಇಂದಿನ ಈ ವಿಷಯದಲ್ಲಿ ನಿಮಗೆ ಹೇಳಲಿದ್ದೇವೆ.

ದೇವಯಾನಿ ಎಂಬ ಬಹುಭಾಷಾ ನಟಿಯ ಕುರಿತಂತೆ ನಿಮಗೆ ತಿಳಿದಿರಬಹುದು. ಸಾಹಸಸಿಂಹ ಡಾ.ವಿಷ್ಣುವರ್ಧನ್ ಸೇರಿದಂತೆ ನೂರಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿ ಸ್ಟಾರ್ ನಟಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡ ನಟಿ ದೇವಯಾನಿ ಲೈಫ್ ಕೂಡ ಯಾರೂ ಎಣಿಸಿಕೊಳ್ಳಲಾಗದ ಹಾಗೇ ಆಗುತ್ತೆ ಅಂದರೆ ನೀವು ನಂಬುತ್ತೀರಾ. ಹೌದು ನೀವು ನಂಬದಿದ್ದರೂ ಈ ಘಟನೆ ನಿಜವಾಗಿ ನಡೆದಿದೆ. ಕೈತುಂಬಾ ಚಿತ್ರಗಳು ಹಲವಾರು ಅವಕಾಶಗಳಿದ್ದರೂ ನಟಿ ಪ್ರೇಮದ ಮಾಯೆಗೆ ಸಿಲುಕಿದರು.

ನಿರ್ದೇಶಕ ರಾಜ್ ಕುಮಾರ್ ರವರನ್ನು ಪ್ರೇಮಿಸಿದರು. ಇವರಿಬ್ಬರ ಪ್ರೇಮಕಥೆ ಮದುವೆಗೆ ತಿರುಗಲಾರಂಭಿಸಿತು. ಮನೆಯವರ ವಿರೋಧದ ನಡುವೆ ಕೂಡ ದೇವಯಾನಿ ನಿರ್ದೇಶಕ ರಾಜ್ ಕುಮಾರ್ ರವರನ್ನು ಮದುವೆಯಾದರು. ಇಲ್ಲಿಗೆ ಆರಂಭವಾಯಿತು ನಟಿ ದೇವಯಾನಿ ರವರ ಅಸಲಿ ಕಷ್ಟಗಳ ಕಹಾನಿ. ಹೌದು ಮದುವೆಯಾಗುತ್ತಿದ್ದಂತೆ ಅವರಿಗೆ ಬರುತ್ತಿದ್ದ ಅವಕಾಶಗಳು ಕಡಿಮೆಯಾಗತೊಡಗಿದವು. ಚಿತ್ರರಂಗದಲ್ಲಿ ಒಂದು ಅಲಿಖಿತ ನಿಯಮ ಒಂದಿದೆ.

ಮದುವೆಯಾದ ಮೇಲೆ ಎಷ್ಟೇ ಚಂದದ ನಟಿಯಾಗಿದ್ದರೂ ಅವರ ಬಳಿ ಸಿನಿಮಾ ಮಾಡಲು ಹಿಂದೇಟು ಹಾಕುತ್ತಾರೆ. ಆ ಶಾಪ ಇಂದಿಗೂ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ಇಲ್ಲಕ ಕೂಡ ಹೀಗೆ ಆಯಿತು. ಇತ್ತ ಗಂಡ ನಿರ್ದೇಶಕ ರಾಜ್ ಕುಮಾರ್ ರವರ ನಿರ್ದೇಶಿತ ಚಿತ್ರಗಳು ಕೂಡ ಬ್ಯಾಕ್ ಟು ಬ್ಯಾಕ್ ಫ್ಲಾಪ್ ಆದವು. ಇದರ ನಡುವೆ ಇವರಿಬ್ಬರೂ ಎರಡು ಮಕ್ಕಳು ಜನಿಸಿದವು. ಈಗ ಕುಟುಂಬ ಜವಾಬ್ದಾರಿಯನ್ನು ನಡೆಸಲು ಹಣದ ಅವಶ್ಯಕತೆ ಅಗತ್ಯಕ್ಕಿಂತ ಹೆಚ್ಚಾಗಿತ್ತು. ಆದರೆ ಇಬ್ಬರ ಬಳಿಯೂ ಅವಕಾಶಗಳಿರಲಿಲ್ಲ.

ಇಬ್ಬರೂ ತಮ್ಮ ಸಿನಿ ಜೀವನದ ಅಂತ್ಯಕ್ಕೆ ಬಂದು ತಲುಪಿದರು. ದೇವಯಾನಿ ಯಾರ ಬಳಿಯೂ ಚಿತ್ರಗಳಲ್ಲಿ ಅವಕಾಶಕ್ಕಾಗಲೀ, ಸಹಾಯಕ್ಕಾಗಲೀ ಕೈ ಚಾಚಲಿಲ್ಲ. ಬೇರೆ ಯಾರೇ ಆಗಿದ್ದರೂ ಗಂಡನಿಗೆ ನಿಮ್ಮ ಕಾರಣದಿಂದಾಗಿ ನಿಮ್ಮ ಜೀವನ ನನ್ನ ಜೀವನ ಕೂಡ ಹಾಳಾಯಿತು ಎಂದು ರಂಪಾಟ ಮಾಡುತ್ತಿದ್ದರು. ಆದರೆ ದೇವಯಾನಿ ಇದ್ಯಾವುದನ್ನು ಮಾಡದೇ ಕೂಡಲೇ ಖಾಸಗಿ ಶಾಲೆಯ ಮಕ್ಕಳ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡು ತಮ್ಮ ಮನೆಯ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡು ಯಾವ ನಾಚಿಕೆ ಅಂಜುವ ಕಾರ್ಯವನ್ನು ಮಾಡಲಿಲ್ಲ. ಇಂದಿಗೂ ಸಮಾಜದಲ್ಲಿ ಗೌರವಯುತವಾಗಿ ಜೀವನ ನಡೆಸುತ್ತಿದ್ದಾರೆ. ಬೇರೆ ಯಾರೇ ಆಗಿದ್ದರೂ ಈ ಸೋಲನ್ನು ಕಂಡು ಮೊದಲು ತಮ್ಮ ಜೀವನವನ್ನು ಕೊನೆ ಗಾಣಿಸುವ ನಿಟ್ಟಿನಲ್ಲಿ ಯೋಚಿಸುತ್ತಿದ್ದರು. ಆದರೆ ದೇವಯಾನಿ ಇದಕ್ಕೆ ತದ್ವಿರುದ್ಧವಾಗಿ ನಿಂತು ಸೋಲು ಕೊನೆಯಲ್ಲ ಸೋಲನ್ನು ಮೆಟ್ಟಿ ನಿಂತು ನಿಜವಾದ ಜೀವನವನ್ನು ಸಾಗಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ. ದೇವಯಾನಿ ರವರ ಈ ಧೈರ್ಯವನ್ನು ನಂವೂ ಕೂಡ ಮೆಚ್ಚಿದ್ರಾ ತಪ್ಪದೇ ಕಾಮೆಂಟ್ ನ ಮೂಲಕ ನಮ್ಮಲ್ಲಿ ಹಂಚಿಕೊಳ್ಳಿ.

Leave A Reply

Your email address will not be published.