Neer Dose Karnataka
Take a fresh look at your lifestyle.

ಕೊನೆಗೂ ಗುಡ್ ನ್ಯೂಸ್ ನೀಡಿದ ಅಗ್ನಿಸಾಕ್ಷಿ ಧಾರಾವಾಹಿ ಮಾಯಾ ಪಾತ್ರದಾರಿ ಇಶಿತ ವರ್ಷ! ಅದು ಏನು ಗೊತ್ತಾ??

14

ನಮಸ್ಕಾರ ಸ್ನೇಹಿತರೇ ಕಿರುತೆರೆಯ ಹಲವಾರು ಕಲಾವಿದರು ಒಂದು ಧಾರವಾಹಿಯ ನಂತರ ಮತ್ತೊಂದು ಧಾರವಾಹಿಗೆ ಅಥವಾ ಚಿತ್ರರಂಗದಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆಯುತ್ತಿರುವ ವಿಚಾರ ನಿಮಗೆ ಈಗಾಗಲೇ ತಿಳಿದಿದೆ. ಇನ್ನು ಕನ್ನಡ ಕಿರುತೆರೆಯ ಖ್ಯಾತ ಧಾರಾವಾಹಿ ಅಗ್ನಿಸಾಕ್ಷಿ ಧಾರವಾಹಿ ಅಂದಿನ ದಿನಗಳಲ್ಲಿ ಕನ್ನಡ ಕಿರುತೆರೆಯ ಟಾಪ್ ಧಾರಾವಾಹಿ ಆಗಿತ್ತು. ಇನ್ನು ಈ ಧಾರಾವಾಹಿಯಲ್ಲಿ ಚಂದ್ರಿಕಾಳ ತಂಗಿ ಮಾಯಾ ಪಾತ್ರ ಕೂಡ ಸಾಕಷ್ಟು ಜನರಿಗೆ ಇಷ್ಟವಾಗಿತ್ತು.

ಮಾಯಾ ಪಾತ್ರದಲ್ಲಿ ನಟಿಸಿದ್ದ ನಟಿಯ ಹೆಸರು ಇಶಿತ ವರ್ಷ. ಇನ್ನು ಈ ಧಾರಾವಾಹಿಯ ನಂತರ ಇಶಿತ ಕಿರುತೆರೆಯಿಂದ ಸ್ವಲ್ಪ ಸಮಯ ದೂರ ಉಳಿದಿದ್ದರು. ಇನ್ನು ಇಶಿತ ವರ್ಷ ಅವರು ಹೊಸ ಬಾಳಿಗೆ ನೀ ಜೊತೆಯಾದೆ, ತಂಗಾಳಿ ಮತ್ತು ಅಸಂಭವ ಎಂಬ ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದರು. ಹೀಗೆ ಅನೇಕ ಧಾರವಾಹಿಗಳಲ್ಲಿ ನಟಿಸುವುದರ ಮೂಲಕ ಅವರು ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಆದರೆ ಅಗ್ನಿಸಾಕ್ಷಿ ಧಾರವಾಹಿಯ ನಂತರ ಅವರು ಕಿರುತೆರೆಯಿಂದ ದೂರ ಸರಿದಿದ್ದರು.

ಇನ್ನು ಹೆಚ್ಚಿನ ಧಾರವಾಹಿಗಳಲ್ಲಿ ಇಶಿತಾ ಅವರು ಖಳನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪಾತ್ರದ ಬಗ್ಗೆ ಮಾತನಾಡಿದ ಅವರು, ಕಲಾವಿದೆ ಎಂದ ಮೇಲೆ ಯಾವುದೇ ಪಾತ್ರ ನೀಡಿದರೂ ಕೂಡ ಅದಕ್ಕೆ ಜೀವತುಂಬಲು ತಯಾರಿರಬೇಕು. ನನಗೂ ಅಷ್ಟೇ. ಇಂತಹದೇ ಪಾತ್ರ ಬೇಕು ಎಂದೇನಿಲ್ಲ. ಆದರೆ ಜನರು ಗುರುತಿಸುವಂತಹ ಪಾತ್ರ ಬೇಕು. ಅದಕ್ಕಿಂತಲೂ ಹೆಚ್ಚಾಗಿ ಒಂದೇ ರೀತಿಯ ಪಾತ್ರಕ್ಕೆ ಬ್ರಾಂಡ್ ಆಗದೆ ಎಲ್ಲ ರೀತಿಯ ಪಾತ್ರಗಳನ್ನು ಮಾಡಬೇಕೆಂಬುದು ನನ್ನ ಆಸೆ ಎಂದು ಹೇಳಿದ್ದಾರೆ. ಇನ್ನು ಇದೆಲ್ಲದರ ಹೊರತಾಗಿ ನಟಿ ಆಶಿತಾ ವರ್ಷ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇತ್ತೀಚಿಗಷ್ಟೇ ಆರಂಭವಾದ ‘ಕುಕ್ಕು ವಿತ್ ಕಿರಿಕ್ಕು’ ಎಂಬ ಹೊಚ್ಚ ಹೊಸ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದಾರೆ.

ಹೌದು ನಟಿ ಇಶಿತ ವರ್ಷ ಅವರು ಅಗ್ನಿಸಾಕ್ಷಿ ಧಾರಾವಾಹಿ ಇಂದ ದೂರವಾದ ಬಳಿಕ ಮದುವೆಯಾಗಿದ್ದರು. ಅಂದಿನಿಂದ ಇಲ್ಲಿಯವರೆಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ಅವರು ಕುಕ್ಕು ವಿತ್ ಕಿರಿಕ್ಕು ಎಂಬ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಇದೀಗ ಮತ್ತೆ ಕಿರುತೆರೆಯ ಧಾರವಾಹಿಗಳಿಗೆ ಮರಳಿ ಬಂದಿರುವ ಇಶಿತ ವರ್ಷ ಅವರು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಸರಸು’ ಎಂಬ ಧಾರಾವಾಹಿಯಲ್ಲಿ ಕಾಣಿಸಿ ಕೊಳ್ಳಲಿದ್ದಾರೆ. ಹೌದು ಈ ಧಾರಾವಾಹಿಯಲ್ಲಿ ನಟಿ ಇಶಿತ ವರ್ಷ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಹೌದು ಇದೀಗ ಸರಸು ಧಾರಾವಾಹಿಯಲ್ಲಿ ಗೆಸ್ಟ್ ಅಪಿಯರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಅವರ ಪಾತ್ರ ಹೇಗಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave A Reply

Your email address will not be published.