Neer Dose Karnataka
Take a fresh look at your lifestyle.

ರೋಹಿಣಿ ವಿರುದ್ಧ ನಿಂತಿರುವ ಆಯುಕ್ತೆ ಶಿಲ್ಪಾ ನಾಗ್ ಗೆ ಬಿಗ್ ಶಾಕ್, ಮುಖ್ಯ ಕಾರ್ಯದರ್ಶಿ ಹೇಳಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಮೈಸೂರು ಜಿಲ್ಲೆ ಸದ್ಯ ಹೆಚ್ಚು ಸುದ್ದಿಯಲ್ಲಿರುವ ಜಿಲ್ಲೆ. ಕಾರಣ ಬೇರೆನೂ ಇಲ್ಲ, ಇಬ್ಬರೂ ಹಿರಿಯ IAS ಅಧಿಕಾರಿಗಳ ನಡುವಿನ ಜಗಳಕ್ಕೆ ಮಾಧ್ಯಮಗಳು ದಿನವಿಡಿ ಸುದ್ದಿ ಮಾಡುತ್ತಿವೆ. ಅಷ್ಟಕ್ಕೂ ನಡೆದದ್ದೇನು ಎಂದು ನೋಡಿದರೇ, ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಹಾಗೂ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮಧ್ಯೆ ನಡೆಯುತ್ತಿದ್ದ ಜಗಳ ಈಗ ತಾರಕಕ್ಕೇರಿದೆ. ಆಯುಕ್ತೆ ಶಿಲ್ಪಾ ನಾಗ್ ಮಾಧ್ಯಮಗಳ ಮುಂದೆ ಬಂದು, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿನಾಕಾರಣ ನನ್ನನ್ನ ಟಾರ್ಗೇಟ್ ಮಾಡುತ್ತಿದ್ದಾರೆ, ಈ ಕಾರಣಕ್ಕಾಗಿ ನಾನು ಈ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೆನೆ ಎಂದು ಹೇಳಿದ್ದರು.

ಈ ಹೇಳಿಕೆ ರಾಜ್ಯಾದ್ಯಂತ ಸಂಚಲನ ಸೃಷ್ಠಿಸಿತ್ತು. ರಾಜ್ಯದ ಇತಿಹಾಸದಲ್ಲಿ ಇಂತಹ ಘಟನೆ ಎಂದು ನಡೆದಿರಲಿಲ್ಲ. ಹಿರಿಯ ಅಧಿಕಾರಿ ವಲಯ ಮಾಧ್ಯಮದ ಎದುರಿಗೆ ಬಂದು ಹೀಗೆ ಬಹಿರಂಗವಾಗಿ ದೂರು ನೀಡಿರಲಿಲ್ಲ. ಇದನ್ನ ರಾಜ್ಯದ ಮುಖ್ಯ ಕಾರ್ಯದರ್ಶಿಗಳಾದ ಪಿ.ರವಿಕುಮಾರ್ ನಿಭಾಯಿಸುತ್ತಾರೆಂದು ತಿಳಿದು ಬಂದಿತ್ತು. ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾದ ದಿನದಿಂದಲೂ ಜನನಾಯಕರು ಈ ಅಧಿಕಾರಿಯ ಮೇಲೆ ಬಹಿರಂಗವಾಗಿಯೇ ದೂರುಗಳ ಸರಮಾಲೆಯನ್ನ ಪೋಣಿಸುತ್ತಿದ್ದಾರೆ. ಇದೇ ಮೊದಲೆಂಬಂತೆ ಎಲ್ಲಾ ಪಕ್ಷದ ಜನನಾಯಕರುಗಳು ಜಿಲ್ಲಾಧಿಕಾರಿಯನ್ನ ಕೂಡಲೇ ವರ್ಗಾವಣೆ ಮಾಡಬೇಕೆಂಬ ಓಕ್ಕೋರಲ ಆಗ್ರಹವನ್ನ ಮಾಡುತ್ತಿದ್ದಾರೆ. ಅದರ ಮುಂದುವರಿದ ಭಾಗದಂತೆ ಶಿಲ್ಪಾ ನಾಗ್ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸಿದ್ದಾರೆ.

ಈ ಮಧ್ಯೆ ನಿನ್ನೆ ಪರಿವೀಕ್ಷಣೆಗೆಂದು ಮೈಸೂರಿಗೆ ತೆರಳಿದ್ದ ಮುಖ್ಯ ಕಾರ್ಯದರ್ಶಿ ರವಿಕುಮಾರ್ , ಆಯುಕ್ತೆ ಶಿಲ್ಪಾ ನಾಗ್ ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡರೆಂದು ಮೂಲಗಳು ಹೇಳುತ್ತಿವೆ. ರವಿಕುಮಾರ್ ರವರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೇ ತಬ್ಬಿಬ್ಬಾದ ಘಟನೆ ಸಹ ನಡೆದಿದೆಯಂತೆ. ರವಿಕುಮಾರ್ ಕೇಳಿದ ಪ್ರಶ್ನೆಗಳು ಈ ಕೆಳಗಿನಂತಿವೆ. ಮೊದಲನೆಯದಾಗಿ ನೀವು ಜಿಲ್ಲಾಧಿಕಾರಿಗಳ ಮೇಲೆ ಮಾಡಿರುವ ಆರೋಪಕ್ಕೆ ನಿಮ್ಮ ಬಳಿ ಸಾಕ್ಷಿ ಇದೆಯೇ ಎಂದು ಪ್ರಶ್ನೆ ಆರಂಭಿಸಿ, ನಿಮಗೆ ಜಿಲ್ಲಾಧಿಕಾರಿ ಟಾರ್ಗೆಟ್ ಮಾಡುತ್ತಿದ್ದರೇ ಎಂದರೇ ಅದರ ಬಗ್ಗೆ ದೂರನ್ನ ಮುಖ್ಯ ಕಾರ್ಯದರ್ಶಿಗಳಿಗಾಗಲಿ ಅಥವಾ ವಲಯ ಆಯುಕ್ತರಿಗಾಗಲಿ ಸಲ್ಲಿಸಬೇಕಿತ್ತು..ಏಕೆ ಸಲ್ಲಿಸಲಿಲ್ಲ,

ಅಷ್ಟೇ ಅಲ್ಲ, ಒಂದು ಪಾಲಿಕೆಯ ಆಯುಕ್ತರಾದ ನಿಮಗೆ ಶಿಷ್ಟಾಚಾರ ತಿಳಿದಿಲ್ಲವೇ..ತಿಳಿದಿದ್ದರೂ ನೀವೇಕೆ ಅದನ್ನ ಪಾಲಿಸಲಿಲ್ಲ ಹಾಗೂ ಮಾಧ್ಯಮಗಳ ಮುಂದೆ ಹೋಗಿ ದೂರು ನೀಡುವ ಔಚಿತ್ಯವಾದರೂ ಏನಿತ್ತು..ಅದರ ಪರಿಣಾಮ ಏನಾಗಬಹುದೆಂಬ ಗಮನ ನಿಮಗೆ ಬರಲಿಲ್ಲವೇ..? ಈಗ ನೀವು ಜಿಲ್ಲಾಧಿಕಾರಿಗಳ ಮೇಲೆ ಮಾಡಿರುವ ಆರೋಪಗಳಿಗೆ ದಾಖಲೆ ತೋರಿಸಿ. ಮೈಸೂರಿನಲ್ಲಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಗಮನಿಸಿದ ಮೇಲೆಯೂ, ನೀವು ಬಹಿರಂಗವಾಗಿ ಪತ್ರಿಕಾಗೋಷ್ಠಿ ನಡೆಸಿದ್ದಿರೆಂದರೇ, ನಿಮ್ಮ ಹಿಂದೆ ಯಾರಿದ್ದಾರೆ ಹೇಳಿ. ನಿಯಮಗಳ ಪ್ರಕಾರ, ಅಧಿಕಾರಾ ವಲಯದಲ್ಲಿ ಏನೇ ದೂರು, ಆಕ್ಷೇಪಣೆಗಳಿದ್ದರೇ, ಅಂತಹ ಸಂದರ್ಭದಲ್ಲಿ ಲಿಖಿತ ದೂರನ್ನ ಮೇಲಧಿಕಾರಿಗಳಿಗೆ ಸಲ್ಲಿಸಬೇಕು.

ಅವರ ಆಂತರಿಕ ವಿಚಾರಣೆ ನಂತರವೂ ನ್ಯಾಯ ದೊರೆಯದಿದ್ದರೇ, KAT (ಕರ್ನಾಟಕ ಆಡಳಿತ ನ್ಯಾಯ ಮಂಡಳಿ) ಗೆ ಹೋಗಬಹುದು. ಆದರೇ ಮೈಸೂರಿನ ಪ್ರಕರಣದಲ್ಲಿ ಈ ಯಾವ ನಿಯಮಗಳು ಪಾಲನೆಯಾಗದಿರುವುದು ಸ್ಪಷ್ಠವಾಗಿ ಗೋಚರಿಸುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಾರ್ವಜನಿಕರು ಪಕ್ಷಭೇದ ಮರೆತು ರೋಹಿಣಿ ಸಿಂಧೂರಿಯವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೇ ಈ ಘಟನೆಯಿಂದ ಇಮೇಜ್ ಕೊಂಚ ಡ್ಯಾಮೇಜ್ ಆಗಿರುವುದಂತು ಸತ್ಯ. ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾ ನಾಗ್ ಮತ್ತು ಮೈಸೂರಿನ ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.