Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಜೋಗಿ ಚಿತ್ರದ ಜೆನಿಫರ್ ಈಗ ಎಲ್ಲಿದ್ದಾರೆ ಹಾಗೂ ಏನು ಮಾಡುತ್ತಿದ್ದಾರೆ ಗೊತ್ತಾ?

59

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗಕ್ಕೆ ಹಿಂದಿನಿಂದಲೂ ನಟಿಯರು ಪರಭಾಷೆಯಲ್ಲಿ ಬಂದು ಇಲ್ಲಿ ಜನರ ಮೆಚ್ಚುಗೆ ಗಳಿಸಿ ಸ್ಟಾರ್ ನಟಿಯಾಗಿ ರೂಪಗೊಂಡಿರುವುದು ನೀವು ನೋಡಿರುತ್ತೀರಿ. ಅಂಥವರಲ್ಲಿ ಹಲವಾರು ಜನ ಇಲ್ಲಿ ಇಂದಿಗೂ ಇರುವುದನ್ನು ನೀವು ನೋಡುತ್ತಿರಬಹುದು. ಇಂದು ನಾವು ಹೇಳಹೊರಟಿರುವ ನಟಿಯ ಬಗ್ಗೆ ಹೇಳಿದರೆ ಇವರು ಕೂಡ ಮೊದಲು ಬೇರೆ ಭಾಷೆಯಿಂದ ಇಲ್ಲಿಗೆ ಬಂದು ನಂತರದ ದಿನಗಳಲ್ಲಿ ಟಾಪ್ ನಟಿಯಾಗಿ ಕನ್ನಡಿಗರ ಮನದಲ್ಲಿ ನೆಲೆಸಿದವರು.

ಯಾರು ಅಂತ ಕನ್ಫ್ಯೂಸ್ ಆಯ್ತಾ ಡೋಂಟ್ ವರಿ ಹೇಳ್ತೀವಿ ಬನ್ನಿ. ಹೌದು ನಾವು ಮಾತನಾಡಲು ಹೊರಟಿರುವುದು ಡೆಲ್ಲಿಯ ಮೂಲದಿಂದ ಕರ್ನಾಟಕಕ್ಕೆ ಬಂದು ನಂತರ ದಿನಗಳಲ್ಲಿ ಇಲ್ಲಿನ ಚಿತ್ರಗಳಲ್ಲಿ ನಡೆಸಿ ಖ್ಯಾತಿಯನ್ನು ಪಡೆದ ಜೆನ್ನಿಫರ್ ಕೊತ್ವಾಲ್ ರವರ ಬಗ್ಗೆ. ಹೌದು ಜನಿಫರ್ ಕೋತ್ವಾಲ್ ರವರು ಕನ್ನಡದ ಚಿತ್ರನಟಿ ಕಾಲಿಡಿದು ಹ್ಯಾಟ್ರಿಕ್ ಹೀರೋ ಶಿವಣ್ಣ ಹಾಗೂ ಹ್ಯಾಟ್ರಿಕ್ ನಿರ್ದೇಶಕ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿಬಂದ ಎವರ್ಗ್ರೀನ್ ಇಂಡಸ್ಟ್ರಿ ಚಿತ್ರ ಜೋಗಿಯ ಮೂಲಕ.

ಹೌದು ಜೆನ್ನಿಫರ್ ಕೊತ್ವಾಲ್ ರವರು ಚಂದನವನಕ್ಕೆ ಎಂಟ್ರಿ ಕೊಟ್ಟಿದ್ದು ಇದೇ ಐಕಾನಿಕ್ ಜೋಗಿ ಚಿತ್ರದ ಮೂಲಕ. ಇವರು ಮೊದಲ ಬಾರಿಗೆ ಟೆಲಿವಿಷನ್ ನಲ್ಲಿ ನಡೆಸಿದ್ದು ಹಿಂದಿಯ ಮೋಹಬ್ಬಾತೆ ಎಂಬ ಧಾರಾವಾಹಿ ಮೂಲಕ. ಅಲ್ಲಿಂದ ಬಂದಾಗ ಮೊದಲ ಬಾರಿ ನಟಿಸಿದ್ದೆ ಜೋಗಿ ಚಿತ್ರದ ಮೂಲಕ. ಜೋಗಿ ಚಿತ್ರದ ಅಭೂತಪೂರ್ವ ಯಶಸ್ಸು ಇವರನ್ನು ಕನ್ನಡದ ಬಹುಬೇಡಿಕೆಯ ನಟಿ ಯನ್ನಾಗಿ ಮಾಡಿದ್ದು. ಎಲ್ಲೇ ನೋಡಿದರೂ ಯಾವ ನಿರ್ದೇಶಕನ ಬಳಿಗೆ ಹೇಳಿದರು ತಮ್ಮ ಮೊದಲ ಆಯ್ಕೆ ಜನಿಫರ್ ಕೋತ್ವಾಲ್ ಎಂಬಷ್ಟರ ಮಟ್ಟಿಗೆ ಹೆಸರನ್ನು ಮಾಡಿದ್ದರು.

ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದರು. ಅವುಗಳು ಯಾವುವೆಂದರೆ ಯುಗಾದಿ ಸತ್ಯವಾನ್ ಸಾವಿತ್ರಿ ಮಾಸ್ತಿ ಲವಕುಶ ಈ ಬಂಧನ ನೀ ಟಾಟ ನಾ ಬಿರ್ಲ ಮಸ್ತ್ ಮಜಾ ಮಾಡಿ ಪ್ರಿನ್ಸ್ ಹೀಗೆ ಹಲವಾರು ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ನಟಿಸಿ ಯಶಸ್ವಿಯನ್ನು ಪಡೆದುಕೊಂಡರು. ಜನಿಫರ್ ಕೋತ್ವಾಲ್ ಕೊನೆಯ ಬಾರಿಗೆ ಕನ್ನಡದಲ್ಲಿ ನಟಿಸಿದ್ದು ಕಿಶೋರ್ ರವರ ಹುಲಿ ಚಿತ್ರದಲ್ಲಿ ಈ ಚಿತ್ರ ಬಿಡುಗಡೆಯಾಗಿದ್ದು 2012ರಲ್ಲಿ. ಅದಾದ ನಂತರ ಯಾವುದೇ ಚಿತ್ರಗಳಲ್ಲಿ ಅವರು ಕಂಡುಬಂದಿಲ್ಲ. ಈಗ ನಟಿ ಜನಿಫರ್ ಕೋತ್ವಾಲ್ ಅವರು ಏನು ಮಾಡುತ್ತಿದ್ದಾರೆ ಎಂದು ಗೊತ್ತೇ. ಅದರ ವಿವರವನ್ನು ಕೂಡ ನಿಮಗೆ ಸಂಪೂರ್ಣವಾಗಿ ತಿಳಿಸುತ್ತೇವೆ ಬನ್ನಿ.

ಹೌದು ನಟಿ ಜನಿಫರ್ ಕೋತ್ವಾಲ್ ರವರು ಈಗ ಚಿತ್ರರಂಗದ ಸಹವಾಸವನ್ನು ಬಿಟ್ಟು ಮಾಡಲಿಂಗ್ ಹಾಗೂ ತಮ್ಮ ಯುಟ್ಯೂಬ್ ಚಾನೆಲ್ನ ಮೂಲಕ ಟ್ರಾವೆಲ್ ಬ್ಲಾಗಿಂಗ್ ಮಾಡುತ್ತಾರೆ. ಹೌದು ತಮ್ಮ ಯುಟ್ಯೂಬ್ ಚಾನೆಲ್ ನ ಮೂಲಕ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಅದರ ವಿಶೇಷತೆ ಹಾಗೂ ಸೌಂದರ್ಯವನ್ನು ತೋರಿಸಿ ತಿಳಿಸಿಕೊಡುತ್ತಾರೆ ನಟಿ ಜನಿಫರ್ ಕೋತ್ವಾಲ್. ನಟಿ ಜನಿಫರ್ ಕೋತ್ವಾಲ್ ರವರ ಕಂಬ್ಯಾಕ್ ಗೋಸ್ಕರ ಯಾರೆಲ್ಲ ಕಾಯುತ್ತಿದ್ದೀರಾ ಕಾಮೆಂಟ್ ಬಾಕ್ಸಲ್ಲಿ ತಪ್ಪದೆ ನಮಗೆ ಕಾಮೆಂಟ್ ಮಾಡುವುದರ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave A Reply

Your email address will not be published.