Neer Dose Karnataka
Take a fresh look at your lifestyle.

ಅಯ್ಯಯ್ಯೋ ಈಗಾಗಲೇ ಮದುವೆಯಾಗಿದ್ದವರನ್ನು ಪ್ರೀತಿಸಿ ಮದುವೆಯಾಗಿದ್ದ ಜಯಪ್ರದ ರವರ ಬದುಕು ಹೇಗಿದೆ ಗೊತ್ತಾ?? ಪಾಪ.

ನಮಸ್ಕಾರ ಸ್ನೇಹಿತರೇ ಭಾರತೀಯ ಚಿತ್ರರಂಗದಲ್ಲಿ ಇಂದಿಗೂ ಕೆಲ ನಟಿಯರು ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿರುತ್ತಾರೆ. ನಟಿಯರಲ್ಲಿ ಇಂತಹವರು ಸಿಗೋದು ಬೆರಳೆಣಿಕೆಯಷ್ಟು ಜನ ಮಾತ್ರ. ನಟಿಯರ ಜೀವನದಲ್ಲಿ ಪರದೆಯ ಮುಂದಿನ ಜಗತ್ತು ಬಹಳ ರಂಗಾಗಿರುತ್ತೆ ಆದರೆ ಪರದೆಯ ಹಿಂದಿನ ಲೋಕ ಅವರ ನಿಜಜೀವನದಲ್ಲೂ ಅದೇ ರಂಗು ಮಾಸಿರುತ್ತೆ ಎಂಬುದು ಕೆಲವರಿಗೆ ಗೊತ್ತಿರೋದಿಲ್ಲ. ಅದೇ ಮಾದರಿಯಲ್ಲಿ ಬರುವ ಮೇರು ನಟಿಯೊಬ್ಬರ ಕುರಿತಂತೆ ಇಂದಿನ ವಿಷಯದಲ್ಲಿ ಹೇಳಲಿದ್ದೇವೆ.

70 ರಿಂದ 90 ರ ದಶಕದಲ್ಲಿ ಇಡೀ ಭಾರತೀಯ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದ ನಟಿ ಈಕೆ. ಕನ್ನಡ ಹಿಂದಿ ತಮಿಳು ತೆಲುಗು ಮರಾಠಿ ಮಲಯಾಳಂ ಬೆಂಗಾಳಿ ಹೀಗೆ ಸಪ್ತ ಭಾಷೆಗಳಲ್ಲಿ ತನ್ನ ಛಾಪನ್ನು ಇಡೀ ಭಾರತೀಯ ಚಿತ್ರರಂಗದಲ್ಲಿಪಸರಿಸಿಸದ್ದ ನಟಿ ಈಕೆ. ನಾವು ಮಾತನಾಡ್ತಿರೋದು ನಟಿ ಜಯಪ್ರದಾ ರವರ ಬಗ್ಗೆ. ಒಂದು ಕಾಲದಲ್ಲಿ ಭಾರತದ ಕೃಷ್ ಎಂಬ ಹಕ್ಕನ್ನು ಮೊದಲು ಸಂಪಾದಿಸಿದವರು ಈಕೆ. ಇವರು ಮೂಲತಃ ತೆಲುಗಿನವರು.

ತೆಲುಗು ಚಿತ್ರರಂಗದಲ್ಲಿ ತಮ್ಮ ಸಿನಿಜೀವನದ ಪಾದಾರ್ಪಣೆ ಪ್ರಾರಂಭಿಸಿದವರು ನಂತರದ ದಿನಗಳಲ್ಲಿ ಜಯಪ್ರದಾ ಭಾರತೀಯ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ತಮ್ಮನ್ನು ರೂಪಿಸಿಕೊಂಡವರು. ಆಗಿನ ಕಾಲಕ್ಕೆ ಪ್ರತಿಯೊಬ್ಬ ನಿರ್ಮಾಪಕನ ನಿರ್ದೇಶಕನ ಹಾಗೂ ಸ್ಟಾರ್ ನಟರ ಮೊದಲ ಆಯ್ಕೆ ಜಯಪ್ರದಾ ಆಗಿದ್ದರು. ಕಾಶ್ಮೀರದಿಂದ ಕನ್ಯಾ ಕುಮಾರಿಯವರೆಗೂ ಅಭಿಮಾನಿ ಬಳಗವನ್ನು ಹೊಂದಿದ್ದರು ನಟಿ ಜಯಪ್ರದಾ. 80ರ ದಶಕದಲ್ಲಂತೂ ಜಯಪ್ರದಾ ನಟನೆಯ ವರ್ಷಕ್ಕೆ ಹತ್ತಾರು ಚಿತ್ರಗಳು ಒಂದೇ ಬಾರಿಗೆ ಬಿಡುಗಡೆ ಆಗೋವಷ್ಟು ಬಹುಬೇಡಿಕೆಯನ್ನು ಹೊಂದಿದ್ದರು.

ಅಲ್ಲದೇ ಆ ಕಾಲದಲ್ಲಿ ಹೈಯೆಸ್ಟ್ ಪೇಯ್ಡ್ ನಟಿ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಈ ಕಾರಣದಿಂದ ಏನೋ ಒಮ್ಮೆ ಇವರ ಮನೆಗೆ ಇನ್ ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ನ ವಿಚಾರಣೆ ನಡೆಯೋದ್ರಲ್ಲಿತ್ತು. ಈ ಸಂದರ್ಭದಲ್ಲಿ ನಿರ್ದೇಶಕ ಶ್ರೀಕಾಂತ್ ರವರ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೇಮಕ್ಕೆ ತಿರುಗಿತ್ತು. ಶ್ರೀಕಾಂತ್ ರವರಿಗೆ ಈಗಾಗಲೇ ಮದುವೆಯಾಗಿ ಮೂರು ಮಕ್ಕಳೂ ಇದ್ದರು. ಆದರೂ ಜಯಪ್ರದಾ ರವರ ಗಾಢ ಪ್ರೇಮ ಇದ್ಯಾವುದೂ ಕೇಳಲಿಲ್ಲ.

ಅದಾಗಲೇ ಇವರಿಬ್ಬರ ಸಂಬಂಧದ ಕುರಿತಂತೆ ಚಿತ್ರರಂಗದಲ್ಲಿ ಗುಸುಗುಸು ಮಾತುಗಳು ಆರಂಭವಾಗಿದ್ದವು. ನಂತರ ಅವಸರ ಅವಸರವಾಗಿ ಇವರಿಬ್ಬರ ಮದುವೆ 1985ರಲ್ಲಿ ನಡೆಯಿತು. ಈಗಲೂ ಸಮಸ್ಯೆ ತಪ್ಪಿರಲಿಲ್ಲ. ಯಾಕೆಂದರೆ ಶ್ರೀಕಾಂತ್ ರವರು ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನ ನೀಡಿರಲಿಲ್ಲ. ಈ ಕಾರಣದಿಂದಾಗಿ ಜಯಪ್ರದಾ ಹಾಗೂ ಶ್ರೀಕಾಂತ್ ರವರ ವಿವಾಹ ಸಂಬಂಧ ಹಳಿ ತಪ್ಪಿತು. ಮದುವೆಯಾದರೂ ಸಹ ನಟಿ ಜಯಪ್ರದಾ ಗಂಡನ ಪ್ರೀತಿ ಕಾಣಲಿಲ್ಲ, ಮಕ್ಕಳನ್ನು ಪಡೆಯ ಲಾಗಲಿಲ್ಲ.

ಇದಾದ ನಂತರ ಜಯಪ್ರದಾ ರವರಿಗೆ ಚಿತ್ರರಂಗದಿಂದ ಅವಕಾಶ ಬರೋದು ಕೂಡ ಕಡಿಮೆಯಾಯಿತು. ನಂತರದಲ್ಲಿ ಜಯಪ್ರದಾ ತಮ್ಮ ತಂಗಿಯ ಮಗುವನ್ನು ದತ್ತು ಪಡೆದು ಅವರನ್ನೇ ತನ್ನ ಮಗುವೆಂದು ಸಾಕತೊಡಗಿದರು. ಇಂದಿಗೂ ಜಯಪ್ರದಾ ಸಿನಿರಂಗದಿಂದ ದೂರವಾದಂತಹ ಬದುಕನ್ನು ಜೀವಿಸುತ್ತಿದ್ದಾರೆ. ತನ್ನ ಸುಂದರವಾದ ವೈಯಕ್ತಿಕ ಹಾಗೂ ಸಿನಿ ಜೀವನವನ್ನು ಪ್ರೀತಿಯ ಮಾಯೆಗೆ ಸಿಲುಕಿ ನಟಿ ಜಯಪ್ರದಾ ತಮ್ಮ ಕೈಯಿಂದಲೇ ಹಾಳು ಮಾಡಿಕೊಂಡರಾ ಅಥವಾ ವಿಧಿಯ ಆಟಕ್ಕೆ ಅವರು ತಲೆಬಾಗಿದರಾ ನಿಮಗೆ ಏನನ್ನಿಸಿತು ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೇ ತಿಳಿಸಿ.

Comments are closed.