Neer Dose Karnataka
Take a fresh look at your lifestyle.

ಕಲ್ಕಿಯ ಜನನ ಸಮಯದ ಬರುತ್ತಿದೆ ಎಂದು ತಿಳಿಸುತ್ತಿದೆ ಈ ಕುದುರೆ, ಕಾಯಿತ್ತಿರುವ ಕುದುರೆ ಹೇಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಪುರಾಣ ಹಾಗೂ ಪ್ರಾಚೀನ ವಿಷಯಗಳ ಕುರಿತಂತೆ ಅಧ್ಯಯನ ಮಾಡಿದವರಿಗೆ ವಿಷ್ಣುವಿನ ದಶಾವತಾರಗಳು ಬಗ್ಗೆ ತಿಳಿದಿರುತ್ತದೆ. ಈಗಾಗಲೇ ಒಂಬತ್ತು ಅವತಾರಗಳನ್ನು ಸತ್ಯಯುಗ ತ್ರೇತಾಯುಗ ಹಾಗೂ ದ್ವಾಪರಯುಗದಲ್ಲಿ ಮಹಾವಿಷ್ಣು ಅವತಾರ ತಾಳಿ ಧರ್ಮವನ್ನು ರಕ್ಷಿಸಿದರೆ ಎಂಬುದು ನಿಮಗೆ ತಿಳಿದಿದೆ. ಈ ಪ್ರಾಚೀನ ಕಾಲದ ಗ್ರಂಥಗಳ ಪ್ರಕಾರ ಮಹಾವಿಷ್ಣು ತನ್ನ ದಶಾವತಾರದ ಕೊನೆಯ ಅವತಾರವಾದ ಕಲ್ಕಿ ಅವತಾರದಲ್ಲಿ ಈ ಕಲಿಯುಗದಲ್ಲಿ ಜನಿಸಿ ಧರ್ಮವನ್ನು ಸ್ಥಾಪಿಸಿ ಅಧರ್ಮವನ್ನು ಮುಕ್ತಗೊಳಿಸುತ್ತಾನೆ ಎಂಬ ಪ್ರತೀತಿ ಇದೆ. ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ತಿಳಿಯೋಣ ಬನ್ನಿ.

ಹೌದು ಈಗ ಕೆಲ ಮಾಹಿತಿಗಳು ಪ್ರಕಾರ ವಿಷ್ಣುವಿನ ದಶಾವತಾರದ ಕೊನೆಯ ಅವತಾರ ಕಲ್ಕಿ ಉತ್ತರ ಪ್ರದೇಶದ ಶಾಂಬಲ ಎಂಬ ಗ್ರಾಮದಲ್ಲಿ ಜನಿಸುತ್ತಾನೆ ಎಂಬ ಪ್ರತೀತಿ ಇದೆ. ಹಾಗೂ ಈ ಕಲ್ಕಿಯ ಕುದುರೆ ದೇವದತ್ತ ರಾಜಸ್ಥಾನದ ಜೈಪುರದ ಒಂದು ದೇವಸ್ಥಾನದಲ್ಲಿ ಮೂರ್ತಿಯಾಗಿ ಇದೆ ಎಂಬುದು ಈಗ ಎಲ್ಲರೂ ನಂಬಿರುವ ಮಾಹಿತಿ. ಜೈಪುರದ ಕಲ್ಕಿ ದೇವಸ್ಥಾನದಲ್ಲಿರುವ ಈ ಕುದುರೆ ಮೂರ್ತಿ ರಜಪೂತ ಮಹಾರಾಜರಿಂದ ನಿರ್ಮಿಸಲ್ಪಟ್ಟಿದೆ. ಅಂದು ಕೂಡ ಅವರಲ್ಲಿ ಕಲ್ಕಿ ಅವತಾರ ಭರವಸೆಯ ಹಾಗೂ ನಂಬಿಕೆಗಳಿದ್ದವು.

ಈಗ ಕಲ್ಕಿ ಅತಿ ಶೀಘ್ರದಲ್ಲೇ ಜನ್ಮ ತಾಳುತ್ತಾನೆ, ನಮ್ಮ ಮಾಹಿತಿಗೆ ಪೂರಕವಾಗಿ ಎಂಬಂತೆ ಒಂದು ಘಟನೆ ನಡೆಯುತ್ತಿದೆ. ಹೌದು ರಾಜಸ್ಥಾನದ ಜೈಪುರದಲ್ಲಿರುವ ಈ ಕಲ್ಕಿ ದೇವಸ್ಥಾನದ ದೇವದತ್ತ ಕುದುರೆ ಮೂರ್ತಿಯ ಕಾಡಿನಲ್ಲಿ ಒಂದು ತೂತು ಇದೆ. ಅದು ಈಗ ಕಾಲಕ್ರ ಮೇಣವಾಗಿ ಬರಬರುತ್ತ ಮುಚ್ಚುತ್ತ ಬರುತ್ತಿದೆ. ಎಲ್ಲರೂ ನಂಬುವ ಪ್ರಕಾರ ಈ ಕುದುರೆಯ ಕಾಲಿನ ಗೊರಸಿನಲ್ಲಿರುವ ತೂತು ಯಾವಾಗ ಮುಚ್ಚತ್ತೋ ಆಗ ಉತ್ತರ ಪ್ರದೇಶದ ಶಾಂಬಲ ಗ್ರಾಮದಲ್ಲಿ ಕಲ್ಕಿ ಜನಿಸಿ ಬರುತ್ತಾನೆ ಎಂದು ಅಲ್ಲಿನ ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗೆ ಬರುವ ಕಲ್ಕಿ ಏನು ಮಾಡುತ್ತಾನೆ ಅಂತ ಗೊತ್ತಾ??

ಹೌದು ಶ್ರೀ ಮಹಾ ವಿಷ್ಣುವಿನ ದಶಾವತಾರದ ಕೊನೆಯ ಅವತಾರ ವಾಗಿರುವ ಕಲ್ಕಿ ದೇವದತ್ತ ಕುದುರೆ ಏರಿ ಈಗಾಗಲೇ ಪುರಾಣಗಳ ಪ್ರಕಾರ ನಂಬಿಕೊಂಡಿರುವ ಚಿರಂಜೀವಿ ವೀರರಾದ ಪರಶುರಾಮ ಹನುಮಂತ ಅಶ್ವತ್ಥಾಮ ರಂತಹ ವೀರರೊಂದಿಗೆ ಈ ಭೂಲೋಕದಲ್ಲಿರುವ ಅಧರ್ಮಿಗಳನ್ನು ಹಾಗೂ ದುಷ್ಟರನ್ನು ಶಿಕ್ಷಿಸುವ ಕಾರ್ಯದ ಮೂಲಕ ಭೂಲೋಕದಲ್ಲಿ ಧರ್ಮ ಸ್ಥಾಪನೆ ಮಾಡುತ್ತಾನೆ ಎಂಬ ನಂಬಿಕೆ ಇದೆ.

ಈ ವಿಷಯದ ಕುರಿತಂತೆ ನೀವು ಕೂಡ ತಿಳಿದಿದ್ದೀರಾ ಅಥವಾ ಇದರ ಬಗ್ಗೆ ನಿಮಗೆ ನಂಬಿಕೆ ಇದೆಯೇ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ. ಪೂರ್ವಜರು ಅಥವಾ ಪುರಾತನ ಕಾಲದಲ್ಲಿ ಇರುವ ಋಷಿಗಳು ಈ ಕುರಿತಂತೆ ಬರೆದಿದ್ದಾರೆ ಅಥವಾ ಆಗುತ್ತದೆ ಎಂದು ಪುರಾಣಗಳು ಗ್ರಂಥಗಳು ಹೇಳುತ್ತವೆ ಎಂದರೆ ಅದರಲ್ಲಿ ಏನಾದರೂ ಸತ್ಯ ಇರಲೇಬೇಕಲ್ಲವೇ. ಅದೇ ಏನಾದರಾಗಲಿ ನಾವು ಬದುಕುವ ತನಕ ಧರ್ಮ ಮಾರ್ಗದಿಂದ ಬದುಕಲು ಪ್ರಯತ್ನಿಸೋಣ.

Comments are closed.