Neer Dose Karnataka
Take a fresh look at your lifestyle.

ಸಾಲು-ಸಾಲು ಅವಕಾಶ ಸಿಕ್ಕರೂ ಚಿತ್ರರಂಗ ಬಿಟ್ಟು ಹಿರಿಯ ನಟಿ ದೀಪಾ ಸಾಧಿಸಿದ್ದೇನು ಗೊತ್ತಾ? ನಿಜಕ್ಕೂ ಗ್ರೇಟ ಅನಿಸುತ್ತದೆ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರ ನಗರದಲ್ಲಿ ಅದೆಷ್ಟೋ ನಟಿಯರು ಸಾಕಷ್ಟು ಸಿನಿಮಾಗಳಲ್ಲಿ ನಟಿಸುವುದರ ಮೂಲಕ ಜನಪ್ರಿಯತೆ ಪಡೆದುಕೊಂಡರು ಕೂಡ ಅವರು ನಂತರದ ದಿನಗಳಲ್ಲಿ ಚಿತ್ರರಂಗದಿಂದ ದೂರವಾಗಿ ಹೋದರು. ಇನ್ನು ಇಂತಹ ನಟಿಯರ ಹಲವಾರು ಉದಾಹರಣೆಗಳನ್ನು ನಾವು ನೋಡಬಹುದು ಅಥವಾ ಕೇಳಬಹುದು. ಅಂತಹ ನಟಿಯರಲ್ಲಿ ದೀಪಾ ಕೂಡ ಒಬ್ಬರು. ಹೌದು ನಟಿ ದೀಪಾ ಅವರು ಕನ್ನಡ ಚಿತ್ರರಂಗದ ಒಂದಾನೊಂದು ಕಾಲದಲ್ಲಿ ಜನಪ್ರಿಯತೆ ಪಡೆದ ನಟಿ.

ತಮ್ಮ ನಟನೆಯ ಹಾಗೂ ಸೌಂದರ್ಯದ ಮೂಲಕ ಕನ್ನಡಿಗರ ಮನಸೂರೆಗೊಂಡಿದ್ದ ಈ ನಟಿ ಬೇಡಿಕೆ ಇರುವಾಗಲೇ ಕನ್ನಡ ಚಿತ್ರರಂಗದಿಂದ ದೂರವಾದವರು. ಕೇರಳದಲ್ಲಿ ಹುಟ್ಟಿ ಬೆಳೆದ ನಟಿ ದೀಪಾ ಅವರು ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದ್ದು ಕನ್ನಡ ಚಿತ್ರರಂಗದ ಮೂಲಕ. ಇನ್ನೂ ಬೇಡಿಕೆ ಇರುವಾಗಲೇ ಇವರು ಕನ್ನಡ ಚಿತ್ರರಂಗದಿಂದ ಹೊರಬಂದಿದ್ದರು. ಮತ್ತೆ ಇನ್ಮುಂದೆ ಸಿನಿಮಾರಂಗಕ್ಕೆ ಬರುವುದಿಲ್ಲ ಎಂದು ಹೇಳಿದ್ದ ಈ ನಟಿ ಇದೀಗ ಏನು ಮಾಡುತ್ತಿದ್ದಾರೆ? ಎಲ್ಲಿದ್ದಾರೆ? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ನಟಿ ದೀಪಾ ಅವರು ಒಂದಾನೊಂದು ಕಾಲದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದರು. ಇವರು ಹೆಚ್ಚಾಗಿ ಪ್ರೀತಿ ಪ್ರೇಮದ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಇವರು ಕನ್ನಡ ಚಿತ್ರರಂಗದಲ್ಲಿ ವಿಜಯ್-ವಿಕ್ರಮ್, ಇಬ್ಬನಿ ಕರಗಿತು, ನಾನಿರುವುದೇ ನಿನಗಾಗಿ ಹಾಗೂ ದೃವತಾರೆ ಸೇರಿದಂತೆ ಹತ್ತು ಹಲವಾರು ಸಿನಿಮಾಗಳಲ್ಲಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು. ಇನ್ನು ಸಿನಿಮಾರಂಗದಲ್ಲಿ ಜನಪ್ರಿಯತೆ ಪಡೆದ ನಂತರ 1982 ರಲ್ಲಿ ರಜೋಯ್ ಎಂಬುವವರನ್ನು ಮದುವೆಯಾದರು. ಇವರ ಪತಿ ಕಾಲೇಜ್ ಉಪನ್ಯಾಸಕರಾಗಿದ್ದಾರೆ. ಈ ದಂಪತಿಗಳಿಗೆ ಒಬ್ಬ ಮಗ ಕೂಡ ಇದ್ದು, ಆತನ ಮದುವೆ ಕೂಡ ಆಗಿದೆ. ಇನ್ನು ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅವರು ದಿನಗಳು ಕಳೆದಂತೆ ಚಿತ್ರರಂಗದಿಂದ ದೂರವಾಗಿ ಉಳಿದುಬಿಟ್ಟರು.

ಹೌದು ನಟಿ ದೀಪ ಅವರು ಮದುವೆಯಾಗಿ ಕೆಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ತೊಡಗಿಕೊಂಡರಾದರೂ 1992 ರಲ್ಲಿ ಚಿತ್ರರಂಗಕ್ಕೆ ವಿದಾಯ ಹೇಳಿ, ಮತ್ತೊಂದು ಚಿತ್ರರಂಗಕ್ಕೆ ಮರಳುವುದಿಲ್ಲ ಎಂದು ಹೇಳಿ ಜೀವನದಲ್ಲಿ ಮತ್ತೊಂದು ಹಾದಿ ಹಿಡಿದರು. ಹೌದು ನಟಿ ದೀಪಾ ಅವರು ಬೇರೆಯವರಿಗೆ ಉಪಯೋಗವಾಗುವಂತಹ ಏನಾದರೂ ಕೆಲಸ ಮಾಡಬೇಕೆಂದು ನಿಶ್ಚಯಮಾಡಿದರು. ಇನ್ನು ತಮ್ಮ ನಿರ್ಧಾರದಂತೆ ಅವರು ಹಳ್ಳಿ ಹಾಗೂ ಬುಡಕಟ್ಟಿನ ಜನಾಂಗದೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸುತ್ತಾ. ಅವರಿಗೆ ಮೆಡಿಕಲ್ ಕ್ಯಾಂಪ್ ಏರ್ಪಡಿಸುತ್ತಾ. ಶಾಲೆಗಳಿಂದ ದೂರವುಳಿದಿರುವ ಮಕ್ಕಳನ್ನು ಶಾಲೆಗೆ ಕರೆತರುವ, ಹೀಗೆ ಹತ್ತು ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡರು. ಇದೀಗ ಸುತ್ತಮುತ್ತಲಿನ ಹಳ್ಳಿಗಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದ್ದಾರೆ.

ಇನ್ನು ನಟಿ ದೀಪಾ ಅವರು ಕೇರಳದ ಎರ್ನಾಕುಲಂ ಎಂಬಲ್ಲಿ ಪರಿಸರ ಪ್ರಕೃತಿಯ ಮಧ್ಯೆ ಒಂದು ಸುಂದರವಾದ ಮನೆಯನ್ನು ಕಟ್ಟಿಕೊಂಡಿದ್ದಾರೆ. ಮನೆಯ ಸುತ್ತಮುತ್ತ ಗಿಡಮರಗಳನ್ನು, ಹೂವುಗಳನ್ನು ಹಾಗೂ ಗಾರ್ಡನ್ ನಿರ್ಮಾಣ ಮಾಡಲಾಗಿದ್ದು, ಸುತ್ತಮುತ್ತ ಹಚ್ಚ ಹಸಿರಿನ ಪರಿಸರ ಆವರಿಸಿದಂತಿದೆ. ಇನ್ನು ಇವರ ಮನೆಯ ಫೋಟೋವನ್ನು ನೀವು ಇಲ್ಲಿ ವೀಕ್ಷಿಸಬಹುದು. ಇನ್ನು ನಟಿ ದೀಪಾ ಅವರು ಇಂದಿಗೂ ಕೂಡ ಹಳ್ಳಿ ಬಡಜನರ ಹಾಗೂ ಬುಡಕಟ್ಟು ಜನಾಂಗದ ಅಭಿವೃದ್ಧಿಗಾಗಿ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಅಭಿವೃದ್ಧಿಗಾಗಿಯೇ ಹಾಗೂ ಅವರ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಅವರು ಇಂದಿಗೂ ಕೂಡ ಅದೇ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನು ಈ ರೀತಿ ಚಿತ್ರರಂಗವನ್ನು ತೊರೆದು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಸುಲಭವಲ್ಲ. ಆದರೆ ದೀಪ ಅವರ ನಿರ್ಧಾರವನ್ನು ನಾವು ಮೆಚ್ಚಲೇಬೇಕು. ಇನ್ನು ಈ ಬಗ್ಗೆ ನೀವು ಏನು ಹೇಳುತ್ತೀರಾ.

Comments are closed.