Neer Dose Karnataka
Take a fresh look at your lifestyle.

ಈ ಟಾಪ್ ನಟಿಗೆ ಯಾವುದೇ ಹೋಟೆಲ್ ನಲ್ಲಿ ರೂಮ್ ನೀಡದೆ ಹೊರದಬ್ಬಲಾಗುತ್ತಿದೆಯಂತೆ. ಯಾಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಹಲವಾರು ನಟಿಯರು ಪರದೆ ಮೇಲೆ ಒಂದು ರೀತಿಯ ವ್ಯಕ್ತಿತ್ವ ಹಾಗೂ ನಿಜ ಜೀವನದಲ್ಲಿ ಒಂದು ರೀತಿಯ ತತ್ವವನ್ನು ಹೊಂದಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ ಕೇಳಿದ್ದೇವೆ. ಇನ್ನು ನಟಿಯರು ಸಿನಿಮಾ ಚಿತ್ರಿಕರಣಕ್ಕೆ ಬೇರೆ ಪ್ರದೇಶಗಳಿಗೆ ಹೋದಾಗ ಅವರು ಫೈವ್ ಸ್ಟಾರ್ ಹೋಟೆಲ್ಲಿನಲ್ಲಿ ಅಥವಾ ಇತರೆ ಐಷಾರಾಮಿ ಹೋಟೆಲಿನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಬೇಕಾಗುತ್ತದೆ. ಇದು ಅಂತಹ ನಟಿಯರ ಶರತ್ತುಗಳಲ್ಲಿ ಒಂದಾಗಿರಬಹುದು.

ಅದೇ ರೀತಿ ಸಾಕಷ್ಟು ನಟಿಯರು ಹೋಟೆಲಿನಲ್ಲಿ ಉಳಿದುಕೊಳ್ಳುವಾಗ ಸಾಕಷ್ಟು ಜನ ನಮ್ಮ ಹೋಟೆಲಿಗೆ ಬರಬೇಕು ಎಂದು ವಿನಂತಿಸಿಕೊಳ್ಳುತ್ತಾರೆ. ಇದರಿಂದ ಆ ಹೋಟೆಲ್ ಬೇಡಿಕೆಯು ಕೂಡ ಹೆಚ್ಚುತ್ತದೆ ಎಂಬ ಭಾವನೆ ಮಾಲೀಕರಲ್ಲಿ ಇರುತ್ತದೆ. ಇನ್ನು ತಮ್ಮ ಹೋಟೆಲಿಗೆ ಉಳಿದುಕೊಳ್ಳಲು ನಟಿಯರು ಬಂದರೆ ಸಾಕು ಎನ್ನುವ ಈ ಕಾಲದಲ್ಲಿ ಈ ನಟಿಗೆ ಮಾತ್ರ ನಮ್ಮ ಹೋಟೆಲಿಗೆ ಬರಬಾರದು ಎಂದು ದೇವರಲ್ಲಿ ಹೋಟೆಲಿನ ಮಾಲಕರು ಬೇಡಿಕೊಳ್ಳುತ್ತಾರಂತೆ. ಹಾಗಾದರೆ ಇದರ ಹಿಂದೆ ಇರುವ ಕಾರಣ ಏನು ಗೊತ್ತಾ..? ಕೇಳಿದರೆ ನೀವು ಕೂಡ ಶಾಕ್ ಆಗ್ತೀರಾ. ಹಾಗಾದರೆ ಆ ನಟಿ ಯಾರು? ಇದರ ಹಿಂದೆ ಇರುವ ಸತ್ಯವೇನು ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಲು ಬನ್ನಿ.

ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ನಟಿಮಣಿಯರು ತಮ್ಮ ನಟನೆಯ ಮೂಲಕ ಹಾಗೂ ತಮ್ಮ ಸೌಂದರ್ಯದ ಮೂಲಕ ಸಾಕಷ್ಟು ಸಿನಿಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ. ಅಂತಹ ಬ್ಯೂಟಿ ಕ್ವೀನ್ ಗಳಲ್ಲಿ ನಯನತಾರಾ ಕೂಡ ಒಬ್ಬರು. ಹೌದು ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಅಭಿನಯಿಸುವುದರ ಮೂಲಕ ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರಾಗಿ ಗುರುಸಿಕೊಂಡಿದ್ದಾರೆ.

ಇನ್ನು ಇವರ ಸಿನಿಮಾಗಳಲ್ಲಿ ಪಾತ್ರ ನೋಡಿದರೆ ಸಾಕಷ್ಟು ಜನರಿಗೆ ಅವರ ಸ್ವಭಾವ ತುಂಬಾ ಇಷ್ಟವಾಗುತ್ತದೆ. ಆದರೆ ಈ ನಟಿಗೆ ಮಾತ್ರ ಹೈದರಾಬಾದಿನ ಯಾವ ಐಷಾರಾಮಿ ಹೋಟೆಲಗಳು ನಮ್ಮ ಹೋಟೆಲಿಗೆ ಬರಬಾರದು ಎಂದು ಬಯಸುತ್ತಾರಂತೆ. ಹೌದು ಇಂತಹ ಖ್ಯಾತ ನಟಿಯರಿಗೆ ಸಾಕಷ್ಟು ಹೋಟೆಲಗಳು ತಮ್ಮ ಬಾಗಿಲನ್ನು ತೆರೆದಿರುತ್ತವೆ. ಆದರೆ ಈ ನಟಿಗೆ ಮಾತ್ರ ಯಾವ ಹೋಟೆಲ್ ನಲ್ಲಿ ರೂಮ್ ಕೂಡ ಸಿಗುವುದಿಲ್ಲವಂತೆ. ಹೌದು ನಟಿ ನಯನತಾರಾ ಅವರಿಗೆ ಸ್ವಲ್ಪ ಕೋಪ ಜಾಸ್ತಿ. ಇನ್ನು ಕೋಪ ಬಂದಾಗ ತಮ್ಮ ಅಕ್ಕಪಕ್ಕದಲ್ಲಿರುವ ಸಾಮಾನುಗಳನ್ನು ಒಡೆದುಹಾಕುತ್ತಾರೆ.

ಅದೇ ರೀತಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಅವರು ರೂಮ್ ಮಾಡಿದಾಗ ಒಂದು ವೇಳೆ ಅವರಿಗೆ ಕೋಪ ಬಂದರೆ ಆ ರೂಮಿನಲ್ಲಿರುವ ಎಲ್ಲ ವಸ್ತುಗಳನ್ನು ಒಡೆದು ಹಾಕಿ ಬಿಡುತ್ತಾರಂತೆ. ಅಷ್ಟೇ ಅಲ್ಲದೆ ಅವರು ರೂಮ್ ಬಿಟ್ಟು ಹೋಗುವಾಗ ಎಲ್ಲ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಇರುತ್ತವಂತೆ. ಅವರು ಅಲ್ಲಿಂದ ಹೋದ ಬಳಿಕ ಆ ರೂಮ್ ಸ್ವಚ್ಛ ಮಾಡಲು ಸುಮಾರು ಎರಡು ದಿನಗಳು ಬೇಕಂತೆ. ಅಷ್ಟೇ ಅಲ್ಲದೆ ಫೈವ್ ಸ್ಟಾರ್ ಹೋಟೆಲ್ ಗಳು ತಮ್ಮ ಹೋಟೆಲ್ ರೂಮ್ ಚಂದವನ್ನು ಹೆಚ್ಚಿಸಲು ದೇಶ-ವಿದೇಶಗಳಿಂದ ದುಬಾರಿ ವಸ್ತುಗಳನ್ನು ರೂಮಿನಲ್ಲಿ ಇಟ್ಟಿರುತ್ತಾರೆ. ಆದರೆ ನಯನತಾರಾ ಅಂತಹ ವಸ್ತುಗಳನ್ನು ಒಡೆದು ಹಾಕಿಬಿಡುತ್ತಾರೆ.

ಇನ್ನು ಅಂತಹ ವಸ್ತುಗಳನ್ನು ಒಡೆದು ಹಾಕಿದ ನಂತರ ಅವರು ಆ ವಸ್ತುವಿನ ಬೆಲೆಯನ್ನು ಆ ಹೋಟೆಲ್ಲಿಗೆ ನೀಡುತ್ತಾರೆ. ಆದರೆ ಅಂತಹ ವಸ್ತುಗಳನ್ನು ಮತ್ತೆ ಮರಳಿ ವಿದೇಶದಿಂದ ತೋರಿಸಬೇಕೆಂದರೆ ಅಂತಹ ವಸ್ತುಗಳು ಮತ್ತೆ ಸಿಗುವುದಿಲ್ಲ. ಇದು ಹೈದರಾಬಾದಿನ ಹೋಟೆಲ್ ಮಾಲೀಕರ ಚಿಂತೆ. ಹೀಗಾಗಿ ಹೈದರಾಬಾದಿನಲ್ಲಿ ಶೂಟಿಂಗ್ ಇದ್ದಾಗ ಒಂದೊಂದು ಸಾರಿ ನಯನತಾರಾ ಅವರಿಗೆ ರೂಮ್ ಸಿಗದೇ ವಾಪಸ್ ಚೆನ್ನೈ ಗೆ ಹೋಗಿದ್ದ ಪ್ರಸಂಗಗಳು ಕೂಡ ನಡೆದಿವೆಯಂತೆ. ಆದರೆ ಇದೀಗ ಬಂದ ಸುದ್ದಿಗಳ ಪ್ರಕಾರ ಅವರ ಈ ಕೋಪ ಸ್ವಲ್ಪ ಮಟ್ಟಿಗೆ ತಣ್ಣಗಾಗಿದೆಯಂತೆ. ಏನೇ ಆದರೂ ಅವರ ಈ ಕೋಪ ಅವರಿಗೆ ಹೋಟೆಲ್ ರೂಮ್ ಸಿಗದೇ ಇರುವುದಕ್ಕೆ ಕಾರಣವಾಗಿದೆ ಎಂದು ಹೇಳಬಹುದು.

Comments are closed.