Neer Dose Karnataka
Take a fresh look at your lifestyle.

ಬಾಲಿವುಡ್ ನ ಟಾಪ್ ಸೆಲೆಬ್ರೆಟಿಗಳು ಶಾಪಿಂಗ್ ಗೆ ಹೋದಾಗ ಏನನ್ನು ಖರೀದಿ ಮಾಡುತ್ತಾರೆ ಗೊತ್ತಾ???

ನಮಸ್ಕಾರ ಸ್ನೇಹಿತರೇ ಕೈಯಲ್ಲಿ ದುಡ್ಡಿದ್ದರೆ ಶಾಪಿಂಗ್ ಹೋಗೋಣ ಅಂತ ಎಂಥವರಿಗೆ ಕೂಡ ಅನಿಸುತ್ತೆ. ಶಾಪಿಂಗ್ ಅನ್ನೋದು 1000ದಿಂದ ಒಂದು ಲಕ್ಷದವರೆಗೆ ಕೂಡ ಮಾಡಬಹುದು. ಶಾಪಿಂಗ್ ಅನ್ನೋದು ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳಿಗೆ ಹೆಚ್ಚು ಇಷ್ಟವಾಗುವ ಒಂದು ಕೆಲಸ ಎಂದು ಹೇಳಬಹುದು. ಮನಮೆಚ್ಚಿದ ವಸ್ತುಗಳನ್ನು ಹಣ ಕೊಟ್ಟು ಖರೀದಿಸುವ ಈ ಕ್ರಿಯೆಗೆ ಶಾಪಿಂಗ್ ಅಂತಾನೆ ಹೇಳೋದು. ಬನ್ನಿ ಇಂದಿನ ವಿಚಾರದಲ್ಲಿ ನಾವು ಸೆಲೆಬ್ರಿಟಿಗಳು ಶಾಪಿಂಗ್ ಗೆ ಹೋದರೆ ಏನೇನನ್ನು ಖರೀದಿಸುತ್ತಾರೆ ಎಂದು ಹೇಳುತ್ತೇವೆ ಬನ್ನಿ.

ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯದ್ಭುತ ಬ್ಯಾಟ್ಸ್ಮನ್ ಆಗಿ ಹಾಗೂ ತಂಡದ ಕಪ್ತಾನನಾಗಿ ಖ್ಯಾತಿಯನ್ನು ಪಡೆದಿರುವ ವಿರಾಟ್ ಕೊಹ್ಲಿ ಕೂಡ ಶಾಪಿಂಗ್ ಪ್ರಿಯರೆ. ವಿರಾಟ್ ಕೊಹ್ಲಿ ಶಾಪಿಂಗ್ಗೆ ಹೋದರೆ ಅವರು ಬ್ರಾಂಡೆಡ್ ವಾಚುಗಳನ್ನು ಖರೀದಿಸಲು ಬಹಳ ಇಷ್ಟಪಡುತ್ತಾರೆ. ಬ್ರಾಂಡೆಡ್ ವಾಚುಗಳು ವಿರಾಟ್ ಕೊಹ್ಲಿ ಅವರ ಫೇವರಿಟ್ ಶಾಪಿಂಗ್ ವಸ್ತುಗಳೆಂದು ಹೇಳಬಹುದು.

ಅನುಷ್ಕ ಶರ್ಮ ಬಾಲಿವುಡ್ ನ ಖ್ಯಾತ ನಟಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ರವರ ಪತ್ನಿ ಅನುಷ್ಕಾ ಶರ್ಮಾ ಕೂಡಾ ಶಾಪಿಂಗ್ ಗೆ ಆಗಾಗ ಹೋಗುತ್ತಾರೆ. ಶಾಪಿಂಗ್ ಗೆ ಹೋದಾಗಲೆಲ್ಲ ಅನುಷ್ಕ ಶರ್ಮ ಬ್ರಾಂಡೆಡ್ ಹಾಗೂ ಬೆಲೆಬಾಳುವ ಬ್ಯಾಗ್ಗಳನ್ನು ಹ್ಯಾಂಡ್ ಬ್ಯಾಗ್ ಗಳನ್ನು ಖರೀದಿಸುವುದು ಅವರ ನೆಚ್ಚಿನ ಶಾಪಿಂಗ್ ಎಂದು ಹೇಳಬಹುದು.

ಸಲ್ಮಾನ್ ಖಾನ್ ಬಾಲಿವುಡ್ನ ಮೆಗಾಸ್ಟಾರ್ ಎಲ್ಲರ ಮೆಚ್ಚಿನ ಭಾಯಿಜಾನ್ ಎಂದೇ ಖ್ಯಾತರಾಗಿರುವ ನಟ ಸಲ್ಮಾನ್ ಖಾನ್ ಅವರು ಕೂಡ ವಿದೇಶಕ್ಕೆ ಹೋದಾಗ ಶಾಪಿಂಗ್ ಮಾಡುತ್ತಾರೆ. ಅವರ ನೆಚ್ಚಿನ ಶಾಪಿಂಗ್ ವಸ್ತುವೆಂದರೆ ಬೆಲೆಬಾಳುವ ಸೋಪುಗಳು. ಹೌದು ಅಚ್ಚರಿ ಎಂದೆನಿಸಿದರು ಸಲ್ಮಾನ್ ಖಾನ್ ರವರ ನೆಚ್ಚಿನ ಶಾಪಿಂಗ್ ವಸ್ತುಗಳು ಬೆಲೆಬಾಳುವ ಸೋಪುಗಳು. ವಿದೇಶದಿಂದ ಸೋಪುಗಳನ್ನು ಖರೀದಿಸಿ ಭಾರತಕ್ಕೆ ತರುತ್ತಾರೆ.

ಪ್ರಿಯಾಂಕ ಚೋಪ್ರಾ ಬಾಲಿವುಡ್ ನ ಖ್ಯಾತ ನಟಿ ಹಾಗೂ ಈಗ ಹಾಲಿವುಡ್ ನಲ್ಲೂ ಕೂಡ ಬಹು ಬೇಡಿಕೆ ಇರುವ ಪ್ರಿಯಾಂಕ ಚೋಪ್ರಾ ರವರು ಇತ್ತೀಚಿನ ವರ್ಷಗಳಷ್ಟೇ ಅಮೆರಿಕದ ಖ್ಯಾತ ನಟ ಹಾಗೂ ಸಿಂಗರ್ ನಿಕ್ ಜೋನಸ್ ರವರನ್ನು ಮದುವೆಯಾಗಿದ್ದರು. ಇನ್ನು ಪ್ರಿಯಾಂಕಾ ಚೋಪ್ರಾ ರವರು ಶಾಪಿಂಗ್ ಹೊರಟರೆ ಅವರು ಖರೀದಿಸುವ ನೆಚ್ಚಿನ ವಸ್ತುವೆಂದರೆ ಅದು ಪಾದರಕ್ಷೆ. ಹೌದು ಪ್ರಿಯಾಂಕಾ ಚೋಪ್ರಾ ರವರು ವಿಭಿನ್ನವಾದ ಬೆಲೆಬಾಳುವ ಪಾದರಕ್ಷೆಗಳ ಶಾಪಿಂಗ್ಗೆ ಹೆಸರಾದವರು. ಪ್ರಿಯಾಂಕ ಚೋಪ್ರಾ ಅವರ ಬಳಿ ಇಲ್ಲಿಯವರೆಗೆ 400ಕ್ಕೂ ಅಧಿಕ ಬಗೆಯ ಬೆಲೆಬಾಳುವ ಪಾದರಕ್ಷೆ ಗಳಿವೆ.

ಕರೀನಾ ಕಪೂರ್ ಖಾನ್ ಬಾಲಿವುಡ್ ನ ಬಹು ಬೇಡಿಕೆಯ ನಟಿ ಆಗೋಯ್ತು ಈಚೆಗೆ ನಟ ಸೈಫ್ ಆಲಿಖಾನ್ ರವರನ್ನು ಮದುವೆಯಾಗಿ ಈಗಾಗಲೇ ಎರಡು ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್ ಅವರಿಗೆ ಬೆಲೆಬಾಳುವ ಹ್ಯಾಂಡ್ ಬ್ಯಾಗ್ ಗಳನ್ನು ಖರೀದಿಸುವುದು ಅಂದರೆ ತುಂಬಾ ಇಷ್ಟ. ಕರೀನಾ ಕಪೂರ್ ಅವರ ಬಳಿ ಈಗಾಗಲೇ ಪ್ರಪಂಚದಲ್ಲಿ ಅತ್ಯಂತ ಬೆಲೆಬಾಳುವ 200ಕ್ಕೂ ಅಧಿಕ ಬಗೆಯ ಹ್ಯಾಂಡ್ ಬ್ಯಾಗ್ ಗಳಿವೆ.

ಶಾರುಖ್ ಖಾನ್ ಬಾಲಿವುಡ್ ನ ಕಿಂಗ್ ಖಾನ್ ಎಂದೇ ಪ್ರಸಿದ್ಧರಾಗಿರುವ ಶಾರುಖ್ ಖಾನ್ ರವರು ಕೂಡ ಆಗಾಗ ವಿದೇಶಕ್ಕೆ ಹೋದಾಗ ಶಾಪಿಂಗ್ ಗೆ ಹೋಗುತ್ತಾರೆ. ಹೀಗೆ ಶಾಪಿಂಗ್ಗೆ ಹೋಗುವ ಕಿಂಗ್ ಖಾನ್ ಶಾರುಖ್ ಖಾನ್ ಶಾಪಿಂಗ್ ಮಾಡುವ ಮೊದಲ ವಸ್ತುವೆಂದರೆ ಅದು ಜೀನ್ಸ್. ಹೌದು ಶಾರುಖ್ ಖಾನ್ ರವರಿಗೆ ಜೀನ್ಸ್ ಪ್ಯಾಂಟ್ ಅಂದರೆ ತುಂಬಾ ಇಷ್ಟ. ಅವರ ಬಳಿ ಈಗಾಗಲೇ ಒಂದುವರೆ ಸಾವಿರಕ್ಕೂ ಹೆಚ್ಚು ಜೀನ್ಸ್ ಪ್ಯಾಂಟ್ ಗಳ ವಿಧಗಳಿವೆ. ಅವರು ಸದಾ ಯಾವುದೇ ಪ್ರೋಗ್ರಾಮ್ ನಲ್ಲಿ ಕೂಡ ಜೀನ್ಸ್ ಪ್ಯಾಂಟ್ ಹಾಕಿಕೊಂಡು ಹೋಗಲು ಇಷ್ಟಪಡುತ್ತಾರೆ.

ಅಕ್ಷಯ್ ಕುಮಾರ್ ಬಾಲಿವುಡ್ ನ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಅಕ್ಷಯ್ ಕುಮಾರ್ ರವರು ಕೂಡ ಶಾಪಿಂಗ್ಗೆ ಹೋಗಲು ಇಷ್ಟಪಡುತ್ತಾರೆ. ಬಾಲಿವುಡ್ನಲ್ಲಿ ಆಕ್ಷನ್ ಹೀರೋ ಆಗಿ ಹೆಸರು ಮಾಡಿರುವ ಅಕ್ಷಯ್ ಕುಮಾರ್ ರವರಿಗೆ ಶಾಪಿಂಗ್ ಮಾಡುವಾಗ ಶೂಗಳನ್ನು ಖರೀದಿಸುವುದು ಅಂದರೆ ತುಂಬಾ ಇಷ್ಟ. ಅದಕ್ಕಾಗಿ ಪ್ರತಿಬಾರಿ ಚಿತ್ರೀಕರಣ ಮುಗಿಸಿದಾಗ ಹೆಚ್ಚಿನ ಬಾರಿ ಅವರು ಶೂ ಗಳನ್ನು ಖರೀದಿಸುತ್ತಾರೆ. ಶಾಪಿಂಗ್ ನಲ್ಲಿ ಅಕ್ಷಯ್ ಕುಮಾರ್ ಅವರು ಹೆಚ್ಚಾಗಿ ಖರೀದಿಸುವಷ್ಟು ಸ್ಫೋರ್ಟ್ಸ್ ಶೂ.

ನೋಡಿದ್ರಲ್ಲ ಸ್ನೇಹಿತರೇ ನಮ್ಮ ಸೆಲೆಬ್ರಿಟಿಗಳು ಶಾಪಿಂಗ್ ಗೆ ಹೋದಾಗ ಯಾವ ಬೆಲೆಬಾಳುವ ವಸ್ತುವನ್ನು ಹೆಚ್ಚಾಗಿ ಖರೀದಿಸುತ್ತಾರೆ ಎಂದು ನಿಮಗೆ ಇಂದಿನ ವಿಚಾರದಲ್ಲಿ ನಾವು ಸವಿಸ್ತಾರವಾಗಿ ಹೇಳಿ ಕೊಟ್ಟಿದ್ದೇವೆ. ನಿಮ್ಮ ನೆಚ್ಚಿನ ಸೆಲೆಬ್ರಿಟಿ ಏನನ್ನು ಖರೀದಿಸುತ್ತಿದ್ದಾರೆ ಎಂದು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಪ್ಪದೆ ತಿಳಿಸಿ ಹಾಗೂ ನಿಮ್ಮ ಫೇವರಿಟ್ ಶಾಪಿಂಗ್ ಯಾವುದೆಂದು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Comments are closed.