Neer Dose Karnataka
Take a fresh look at your lifestyle.

ಅಣ್ಣಯ್ಯ ಚಿತ್ರದ ನಟಿ ಮಧುಬಾಲ ರವರು ಇದೀಗ ಏನು ಮಾಡುತ್ತಿದ್ದಾರೆ ಹಾಗೂ ಹೇಗಿದ್ದಾರೆ ಗೊತ್ತಾ??

11

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ಕಾಲಿಟ್ಟು ಬೆಳೆಯೋದು ಅಷ್ಟೊಂದು ಸುಲಭವಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ಟಾರ್ ಆದವರು ನಮ್ಮ ಕಣ್ಮುಂದೆ ಇರಬಹುದು ಆದರೆ , ಅವರು ಈ ಸ್ಥಾನಕ್ಕೆ ಬರಲು ಪಟ್ಟಂತಹ ಕಷ್ಟ ನಮಗೆ ಗೊತ್ತಿರಲಿಕ್ಕಿಲ್ಲ. ಯಾಕೆಂದರೆ ಅವರ ಯಶಸ್ಸಷ್ಟೇ ನೋಡಿರುವ ನಾವು ಚಿತ್ರರಂಗಕ್ಕೆ ಎಂಟ್ರಿ ನೀಡೋದು ಸುಲಭ , ಸ್ಟಾರ್ ಆದ್ರೆ ಇವರ ತರಹ ಆಗಬೇಕು ಎಂದೆಲ್ಲಾ ಅಂದು ಕೊಳ್ಳುತ್ತೇವೆ. ಆದರೆ ಈ ಬಣ್ಣದ ಲೋಕದಲ್ಲಿ ಕಾಲಿಡೋದು ಅಷ್ಟೊಂದು ಸುಲಭದ ಮಾತಲ್ಲ ಎಂಬುದು ಎಲ್ಲರೂ ತಿಳಿದು ಕೊಳ್ಳಬೇಕು.

ಅದೆಷ್ಟೋ ಜನರ ಪ್ರತಿ ವರ್ಷ ಈ ಬಣ್ಣದ ಲೋಕದ ಪರೀಕ್ಷೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇದರಲ್ಲಿ ಯಶಸ್ವಿಯಾಗೋದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೆಲವೊಮ್ಮೆ ಪೋಷಕರು ಶ್ರೀಮಂತ ರಾಗಿದ್ದರೂ ಸಹ ಜನರ ಪ್ರೀತಿ ಸಿಗದೇ ಸೋಲುವವರಿದ್ದಾರೆ. ಕೆಲವೊಮ್ಮೆ ಪ್ರತಿಭಾನ್ವಿತರಾಗಿದ್ದೂ ನಿರ್ಮಾಪಕ ಹಾಗೂ ನಿರ್ದೇಶಕ ರಿಂದ ಗುರುತಿಸಲ್ಪಡಲು ವಿಫಲರಾಗುತ್ತಾರೆ.

ಇದೇ ಸಾಲಿಗೆ ಸೇರುತ್ತಾರೆ ನಟಿ ಮಧುಬಾಲ. ತಂದೆ ನಿರ್ಮಾಪಕರಾಗಿದ್ದರು , ಸೋದರತ್ತೆ ಹೇಮಮಾಲಿನಿ ಖ್ಯಾತ ನಟಿ , ತಾಯಿ ಖ್ಯಾತ ಭರತ ನಾಟ್ಯ ಪಟು ಹೀಗಿದ್ದರೂ ಅವಕಾಶ ದೊರಕದೆ ಕಾದಿದ್ದರು. 13 ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡು ತಾಯಿ ಕಳೆದಿಕೊಂಡ ದುಃಖ ಒಂದು ಕಡೆಯಾದರೆ ಜೀವನದಲ್ಲಿ ಏನಾಧರೂ ಸಾಧಿಸಬೇಕು ಎಂಬ ಛಲ ಇನ್ನೊಂದು ಕಡೆ. ಈ ನಟಿ ಬೇರಾರೂ ಅಲ್ಲ ಖ್ಯಾತ ನಟಿ ಹೇಮಾಮಾಲಿನ ಯವರ ಸೋದರ ಸೊಸೆ ನಟಿ ಮಧುಬಾಲ.

ತಮ್ಮ ಅತ್ತೆ ಹೇಮಮಾಲಿನಿಯಂತೆ ತಾನು ಕೂಡ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿ ಪ್ರಖ್ಯಾತಿಯನ್ನು ಪಡೆಯಬೇಕೆಂಬ ಕನಸನ್ನು ಹೊತ್ತು ಹಿಂದಿ ಹಾಗೂ ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರೂ ಅವ್ಯಾವುವು ಮಧುಬಾಲ ರವರಿಗೆ ಕೈ ಹಿಡಿಯಲಿಲ್ಲ. ಆ ನಂತರ ಮಣಿರತ್ನಂ ನಿರ್ದೇಶನದ ರೋಜಾ ಚಿತ್ರದಲ್ಲಿ ನಟಿಸಿದ ನಂತರ ಆ ಯಶಸ್ಸಿನ ಮೂಲಕ ಬಾಲಿವುಡ್ ಗೂ ಕಾಲಿಟ್ಟು ಮತ್ತೆಂದೂ ಹಿಂದೆ ತಿರುಗಿ ನೋಡದ ಸ್ಟಾರ್ ಆಗಿ ಬೆಳೆದು ನಿಂತರು.

1993 ಕ್ರೇಜಿಸ್ಟಾರ್ ರವಿಚಂದ್ರನ್ ನಟನೆಯ ಅಭೂತಪೂರ್ವ ಯಶಸ್ಸನ್ನು ಪಡೆದಂತಹ ಅಣ್ಣಯ್ಯ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೂ ಪರಿಚಿತರಾದರು. ನಂತರ 1999 ರಲ್ಲಿ ಗುಜರಾತ್ ಮೂಲದ ಉದ್ಯಮಿಯೊಬ್ಬರನ್ನು ಮದುವೆಯಾಗಿ ಇಬ್ಬರು ಹೆಣ್ಣು ಮಕ್ಕಳ ತಾಯಿಯಾದರು. ಬಹಳ ವರ್ಷಗಳಿಂದ ಕನ್ನಡ ಸಿನಿಮಾಗಳಿಗೆ ಬಣ್ಣ ಹಚ್ಚಿರದಿದ್ದ ಇವರು , ಕಿಚ್ಚ ಸುದೀಪ್ ನಟನೆಯ ಹಿಟ್ ಚಿತ್ರ ರನ್ನ ಚಿತ್ರದಲ್ಲಿ ನಟಿಸುವ ಮೂಲಕ ಮತ್ತೊಮ್ಮೆ ಕನ್ನಡಕ್ಕೆ ಬಂದರು . ಆನಂತರ ಸೀತರಾಮ ಕಲ್ಯಾಣ, ಪ್ರೀಮಿಯರ್ ಪದ್ಮಿನಿ ಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಹುಭಾಷೆಗಳಲ್ಲಿ 50ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಮಧುಬಾಲ , ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಿ ಕನ್ನಡಿಗರನ್ನು ರಂಜಿಸಲಿ ಎಂದು ಆಶಿಸೋಣ.

Leave A Reply

Your email address will not be published.