Neer Dose Karnataka
Take a fresh look at your lifestyle.

ಮದುವೆಗೂ ಮುನ್ನ ಶಾಹಿದ್ ಲವ್ ಮಾಡಿದ ಟಾಪ್ 8 ಟಾಪ್ ನಟಿಯರು ಯಾರ್ಯಾರು ಗೊತ್ತೇ?? ಲವ್ ಬ್ರೇಕ್ ಅಪ್ ಆಟವಾಯಿತೇ??

8

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಇಂಡಿಯನ್ ಸಿನಿಮಾದಲ್ಲಿಯೇ ರಂಗೀನ್ ಕಹಾನಿ ಹಾಗೂ ರಿಯಲ್ ಲೈಫ್ ಓವರ್ ಡ್ರಾಮಾ ಗಳನ್ನು ಹೊಂದಿರುವ ಜಗತ್ತು ಎಂದರೆ ತಪ್ಪಾಗಲಾರದು. ಇಂದು ನಾವು ಹೇಳಹೊರಟಿರುವ ಕಥೆಯ ಹೀರೋ ಶಾಹಿದ್ ಕಪೂರ್. ಶಾಹಿದ್ ಕಪೂರ್ ಕೆಲವೇ ವರ್ಷಗಳ ಹಿಂದಷ್ಟೆ ಮದುವೆಯಾಗಿರೋದು ಎಲ್ಲರಿಗೂ ಗೊತ್ತೇ ಇದೆ. ಈತ ಕಪೂರ್ ಎಂಬ ಹಣೆಫಲಕವನ್ನು ಹೊತ್ತು ಬಂದರೂ ಸಹ ಪ್ರತಿಭಾವಂತ ನಟರ ಲಿಸ್ಟ್ ನಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಹೈದರ್ ಎಂಬ ಚಿತ್ರದಲ್ಲಿ ಶಾಹಿದ್ ಕಪೂರ್ ರವರ ನಟನೆ ನೋಡಿದರೆ ಯಾರೂ ಕೂಡ ಅವರ ನಟನೆಗೆ ಮಾರು ಹೋಗಓದು ಖಂಡಿತ.

ಅಲ್ಲದೇ ಕೇವಲ ನಟನೆ ಮಾತ್ರವಲ್ಲದೆ ಡ್ಯಾನ್ಸ್, ಆಕ್ಷನ್ , ಡೈಲಾಗ್ ಡೆಲಿವರಿಯಲ್ಲಿ ಕೂಡ ಶಾಹಿದ್ ಕಪೂರ್ ಮುಂದು . ಅವರ ಉಡ್ತಾ ಪಂಜಾಬ್ ಚಿತ್ರದ ಪರ್ಫಾಮೆನ್ಸ್ ಇಂದಿಗೂ ಎಲ್ಲರ ಮನದಲ್ಲಿ ಹಚ್ಚ ಹಸಿರು. ಇತ್ತೀಚಿಗಷ್ಟೇ ವಿಜಯ್ ದೇವರಕೊಂಡ ನಟನೆಯ ಅರ್ಜುನ್ ರೆಡ್ಡಿ ಯ ರೀಮೇಕ್ ಕಬೀರ್ ಸಿಂಗ್ ಚಿತ್ರವನ್ನು ಹಿಂದಿಯಲ್ಲಿ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದರು. ಇವರು ಮೀರಾ ರಾಜಪೂತ್ ರವರನ್ನು 2015ರಲ್ಲಿ ಮದುವೆಯಾಗಿ ಇಬ್ಬರು ಮಕ್ಕಳೊಂದಿಗೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ಆದರೆ ಇವರಿಗೂ ಕೂಡ ತುಂಬಾ ಲವ್ ಸ್ಟೋರಿಗಳಿವೆ. ಮದುವೆಗೂ ಮುನ್ನ ಶಾಹಿದ್ ಕಪೂರ್ 8 ನಟಿಯರೊಂದಿಗೆ ಡೇಟಿಂಗ್ ಮಾಡಿದ್ದಾರೆ. ಅವರು ಯಾರೆಲ್ಲಾ ಎಂದು ಒಂದೊಂದಾಗೇ ನೋಡೋಣ.

ಹೃಷಿತಾ ಭಟ್ :- ಹೃಷಿತಾ ಭಟ್ ಬಾಲಿವುಡ್ ನ ಹಲವಾರು ಖ್ಯಾತ ಚಿತ್ರಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದವರು. ಶಾಹಿದ್ ಕಪೂರ್ ಸಿನಿಮಾಗೂ ಬರೋ ಮುನ್ನವೇ ಇವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗುತ್ತಿತ್ತು. ನಂತರದ ದಿನಗಳಲ್ಲಿ ಇವರಿಬ್ಬರ ಬ್ರೇಕ್ ಅಪ್ ಕೂಡ ಅಷ್ಟೇ ವೇಗವಾಗಿ ನಡೆಯಿತು.

ಕರೀನಾ ಕಪೂರ್ :- ಕರೀನಾ ಕಪೂರ್ ಹಾಗೂ ಶಾಹಿದ್ ಕಪೂರ್ ರವರ ಪ್ರೇಮ ಕಥೆ ಅಂದು ಮಾತ್ರವಲ್ಲ ಇಂದೂ ಕೂಡ ಬಾಲಿವುಡ್ ನ ಸಮಾಚಾರಗಳಲ್ಲಿ ಚರ್ಚೆಯಾಗುತ್ತಾ ಇರುತ್ತವೆ. ಇವರು ಹಲವಾರು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು, ಇದು ಎಷ್ಟು ಸುದ್ಧಿಯಾಗಿತ್ತು ಎಂದರೆ , ಇವರಿಬ್ಬರ ಮದುವೆ ಕೂಡ ಶೀಘ್ರದಲ್ಲೇ ನಡೆಯುತ್ತೆ ಅನ್ನೋದು ಕನ್ಫರ್ಮ್ ಆಗಿತ್ತು. ನಂತರದ ದಿನಗಳಲ್ಲಿ ಇವರಿಬ್ಬರು ಸದ್ದಿಲ್ಲದೆ ಬ್ರೇಕ್ ಅಪ್ ಮಾಡಿಕೊಂಡು, ಕರೀನಾ ಕಪೂರ್ ಸೈಫ್ ಅಲಿ ಖಾನ್ ವಿವಾಹವಾಗಿದ್ದೂ ಈಗಾಗಲೇ ಎಲ್ಲರ ಕಣ್ಣ ಮುಂದೆ ಇದೆ.

ಅಮೃತಾರಾವ್ :- ಅಮೃತಾರಾವ್ ಶಾಹಿದ್ ಕಪೂರ್ ರವರ ಮೊದಲ ಚಿತ್ರದ ನಾಯಕಿಯಾಗಿದ್ದರು. ವಿವಾ ಚಿತ್ರದಲ್ಲಿ ಶಾಹಿದ್ ಕಪೂರ್ ರವರೊಂದಿಗೆ ಮತ್ತೆ ಕಾಣಿಸಿಕೊಂಡ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆಯಿತು. ನಂತರದ ದಿನಗಳಲ್ಲಿ ಆ ಚಿಗುರು ಗಿಡವಾಗುವ ಮೊದಲೇ ಇವರಿಬ್ಬರೇ ಚಿವುಟಿ ಹಾಕಿದರು ಎನ್ನಲಾಗುತ್ತಿದೆ

ಸಾನಿಯಾ ಮಿರ್ಜಾ :- ಭಾರತೀಯ ಖ್ಯಾತ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಹಾಗೂ ಶಾಹಿದ್ ಕಪೂರ್ ರವರ ನಡುವಿನ ಲವ್ವಿ ಡವ್ವಿ ಹಲವಾರು ಸುದ್ಧಿ ಮಾಧ್ಯಮಗಳಲ್ಲಿ ಕೂಡ ಬಿತ್ತರವಾಗಿತ್ತು. ನಂತರದ ದಿನಗಳಲ್ಲಿ ಸಾನಿಯಾ ಮಿರ್ಜಾ ಪಾಕಿಸ್ತಾನಿ ಕ್ರಿಕೆಟ್ ತಂಡದ ಮಾಜಿ ಕಪ್ತಾನ ಶೋಯಿಬ್ ಮಲಿಕ್ ರವರ ಎರಡನೇ ಹೆಂಡತಿ ಆಗೋದ್ರ ಮೂಲಕ ಈ ಲವ್ವಿ ಡವ್ವಿ ಮುಕ್ತಾಯವಾಗಿದೆ ಎಂದು ಪರೋಕ್ಷವಾಗಿ ಘೋಷಿಸಿದರು.

ಅನುಷ್ಕಾ ಶರ್ಮಾ:- ಶಾರುಖ್ ಖಾನ್ ರವರ ರಬ್ ನೇ ಬನಾ ದಿ ಜೋಡಿ ಚಿತ್ರದ ಮೂಲಕ ಬಾಲಿವುಡ್ ದುನಿಯಾ ಗೆ ಎಂಟ್ರಿ ನೀಡಿದ್ದ ಅನುಷ್ಕಾ ಶರ್ಮಾ, ಬದ್ಮಾಶ್ ಕಂಪೆನಿ ಚಿತ್ರದಲ್ಲಿ ಶಾಹಿದ್ ಕಪೂರ್ ಗೆ ಜೋಡಿಯಾಗಿ ಕಾಢಿಸಿಕೊಂಡಿದ್ದರು. ಈ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ಇವರ ನಡುವೆ ಏನೋ ಇದೆ ಅನ್ನೋದು ಚರ್ಚೆಗೆ ಬಂದಿತ್ತು. ನಂತರದ ದಿನಗಳಲ್ಲಿ ಇವರಿಬ್ಬರು ಬೇರೆಯಾಗೋದರ ಮೂಲಕ ಈ ಕಹಾನಿ ಕೂಡ ಸೈಲೆಂಟ್ ಆಯಿತು. ಈಗ ಅನುಷ್ಕಾ ಶರ್ಮಾ ಭಾರತೀಯ ಕ್ರಿಕೆಟ್ ತಂಡದ ಯಶಸ್ವಿ ಕಪ್ತಾನನ ಮಡದಿಯಾಗಿ 1 ಮಗುವಿನ ತಾಯಿಯಾಗಿ ಸುಂದರ ಕುಟುಂಬವನ್ನು ನಡೆಸುತ್ತಿದ್ದಾರೆ.

ಪ್ರಿಯಾಂಕಾ ಚೋಪ್ರಾ :- ಶಾಹಿದ್ ಕಪೂರ್ ರವರೊಂದಿಗಿನ ಚಿತ್ರ ಕಾಮಿನಿ ಚಿತ್ರೀಕರಣದ ಸಂದರ್ಭದಲ್ಲಿ ಪ್ರಿಯಾಂಕಾ ಚೋಪ್ರಾ ಹಾಗೂ ಶಾಹಿದ್ ಕಪೂರ್ ರವರ ಡೇಟಿಂಗ್ ಸುದ್ದಿಯ ಕುರಿತಂತೆ ಗಾಳಿಸುದ್ದಿ ಆಗಾಗ್ಗೆ ಹಬ್ಬುತ್ತಿತ್ತು. ನಂತರ ಇವರಿಬ್ಬರು ಜೊತೆಯಲ್ಲಿ ಓಡಾಡಿದ್ದ ಫೋಟೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿತ್ತು.
ನಂತರದ ದಿನಗಳಲ್ಲಿ ಇವರಿಬ್ಬರ ಸಂಬಂಧ ಹೇಳ ಹೆಸರಿಲ್ಲದಂತೆ ಮಾಯವಾದದ್ದು ಕೂಡ ವಿಪರ್ಯಾಸ. ಪ್ರಿಯಾಂಕಾ ಚೋಪ್ರಾ ಈಗ ಅಮೇರಿಕಾದ ಖ್ಯಾತ ನಟ ಹಾಗೂ ಗಾಯಕ ತಮಗಿಂತ 10 ವರ್ಷ ಚಿಕ್ಕವರಾಗಿರುವ ನಿಕ್ ಜೋನೋಸ್ ರವರನ್ನು ವಿವಾಹವಾಗಿದ್ದಾರೆ.

ವಿದ್ಯಾ ಬಾಲನ್ :- ಮೊದಲು ಕೇವಲ ಕ್ಲಾಸ್ ಚಿತ್ರಗಳಿಂದಲೇ ಕ್ಲಾಸ್ ಹೀರೋಯಿನ್ ಎಂಬ ಹಣೆಪಟ್ಟಿ ಹೊತ್ತು ನಂತರ ಡರ್ಟಿ ಪಿಕ್ಚರ್ ಚಿತ್ರದ ನಂತರ ತಾನು ಬೋಲ್ಡ್ ಕ್ಯಾರೆಕ್ಟರ್ ಕೂಡ ಮಾಡಬಲ್ಲೆ ಎಂಬುದನ್ನು ನಿರೂಪಿಸಿದ ನಟಿ ವಿದ್ಯಾ ಬಾಲನ್. ಕಿಸ್ಮೆಟ್ ಕನೆಕ್ಷನ್’ ಚಿತ್ರದ ಶೂಟಿಂಗ್ ಸಮಯದಲ್ಲಿ ಇವರಿಬ್ಬರ ಸಂಬಂಧ ಕುರಿತಂತೆ ಚರ್ಚೆಯಾಗಿತ್ತು. ನಂತರದ ದಿನಗಳಲ್ಲಿ ಅದು ಕೂಡ ಗಾಳಿಯಲ್ಲಿ ಮಾಯವಾಯಿತು.

ಸೋನಾಕ್ಷಿ ಸಿನ್ಹಾ :- ಹಿರಿಯ ನಟ ಹಾಗೂ ರಾಜಕಾರಣಿ ಶತೃಘ್ನ ಸಿನ್ಹಾ ರವರ ಮಗಳು ಸೋನಾಕ್ಷಿ ಸಿನ್ಹಾ. 2013 ರಲ್ಲಿ ಬಿಡುಗಡೆಯಾದ ಶಾಹಿದ್ ಕಪೂರ್ ಹಾಗೂ ಸೋನಾಕ್ಷಿ ಸಿನ್ಹಾ ಕಾಂಬಿನೇಷನ್ ನ ” ಆರ್ ರಾಜ್ ಕುಮಾರ್ ” ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಯಶಸ್ಸನ್ನು ಸಾಧಿಸಿತ್ತು. ಹಾಗೂ ಈ ಯಶಸ್ಸು ಇವರಿಬ್ಬರ ಮಧ್ಯೆ ರಿಯಲ್ ಲೈಫ್ ಕೆಮಿಸ್ಟ್ರಿ ಇದೆ ಎಂದು ಕೂಡ ಗಾಳಿಸುದ್ಧಿಯನ್ನು ಹೊರಹಾಕಿತ್ತು. ಆದರೆ ಇದಾದ ಎರಡೇ ವರ್ಷಗಳಲ್ಲಿ ಅಂದರೆ 2015 ರಲ್ಲಿ ಶಾಹಿದ್ ಕಪೂರ್ ಮೀರಾ ರವರನ್ನು ಮದುವೆ ಆಗುವುದರ ಮೂಲಕ ಈ ಲವ್ ಕಹಾನಿಗೆ ಶುಭಂ ಹಾಡಿದರು.

Leave A Reply

Your email address will not be published.