Neer Dose Karnataka
Take a fresh look at your lifestyle.

ಮಾಜಿ ಪತ್ನಿ ಟಾಪ್ ನಟಿ ಕಲ್ಯಾಣಿ ರವರನ್ನು ನೆನೆದು ಕಣ್ಣೀರು ಹಾಕುತ್ತಿರುವ ಗಂಡ ಸೂರ್ಯ ಕಿರಣ್, ಆದರೆ ಕಲ್ಯಾಣಿ ಏನು ಮಾಡುತ್ತಿದ್ದಾರೆ ಗೊತ್ತಾ??

9

ನಮಸ್ಕಾರ ಸ್ನೇಹಿತರೇ ಈ ಪ್ರೀತಿ ಅನ್ನೋದು ಹಾಗೆ ಕಣ್ರೀ ಒಮ್ಮೆ ಪ್ರೀತಿಸಿದ ಮೇಲೆ ಅವರ ದೂರ ಆದರೂ ಸಹ ಅವರ ನೆನಪುಗಳು ಸದಾ ಮನಸ್ಸಿನಲ್ಲಿ ಕಾಡುತ್ತಿರುತ್ತವೆ. ಈಗ ನಾವು ಈ ಪ್ರೀತಿ ವಿಚಾರಣೆ ಹೇಳ ಹೊರಟಿರುವುದು ಕನ್ನಡ ಚಿತ್ರರಂಗದ ಕುರಿತಲ್ಲ ತೆಲುಗು ಚಿತ್ರರಂಗದಲ್ಲಿ ಖ್ಯಾತನಾಮರ ಆಗಿರುವವರ ಬಗ್ಗೆ. ಹೌದು ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕರಾದ ಸೂರ್ಯಕಿರಣ್ ರವರ ಬಗ್ಗೆ. ಸೂರ್ಯಕಿರಣ್ ರವರು ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಖ್ಯಾತ ನಿರ್ದೇಶಕ ಹಾಗೂ ಬರಹಗಾರ.

ಅಂದಿನಿಂದ ಇಂದಿಗೂ ಕಲಾದೇವಿಯ ಆರಾಧಿಸುತ್ತ ಬಂದವರು. ಇತ್ತೀಚಿಗಷ್ಟೇ ತೆಲುಗಿನ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಹೋಗಿ ಭಾಗವಹಿಸಿದವರು ಹಾಗೂ ಅದೇ ಸ್ಪೀಡ್ನಲ್ಲಿ ವಾಪಸ್ ಕೂಡ ಬಂದವರು. ಆದರೆ ಇವರ ಬದುಕಿನಲ್ಲಿ ನಡೆದಂತ ಒಂದು ಘಟನೆ ಬಿಗ್ ಬಾಸ್ ನಲ್ಲಿ ಕೂಡ ಹಾಗೂ ಬಿಗ್ ಬಾಸ್ ಹೊರಬಂದ ನಂತರ ಮಾಧ್ಯಮದೊಂದಿಗೆ ಹಂಚಿಕೊಂಡ ಕ್ಷಣದಲ್ಲಿ ಕೂಡ ಹೇಳಿದ್ದಾರೆ.

ಹೌದು ಸೂರ್ಯಕಿರಣ್ ಅವರು ಮಾತನಾಡಿದ್ದು ತಮ್ಮ ಮೊದಲ ಪತ್ನಿ ಅವರ ಬಗ್ಗೆ ಹಾಗೂ ಅವರ ವಿವಾಹ ವಿಚ್ಛೇದನದ ಕುರಿತಂತೆ ದುಃಖತಪ್ತರಾಗಿ ಹೇಳಿಕೊಂಡಿದ್ದಾರೆ. ನಿರ್ದೇಶಕ ಸೂರ್ಯಕಿರಣ್ ರವರು ಮದುವೆಯಾಗಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡಿದ್ದ ಖ್ಯಾತ ನಟಿಯೊಬ್ಬರನ್ನು. ಇವರ ವಿವಾಹ ನಡೆದಿದ್ದು 2000 ಇಸ್ವಿಯಲ್ಲಿ. ಆದರೆ ಮದುವೆಯಾದ ಕೆಲ ವರ್ಷಗಳ ಅಂತರದಲ್ಲಿ ಇವರ ಸಂಬಂಧ ಕೂಡ ಮುರಿದುಬಿತ್ತು.

ಇವರ ಪತ್ನಿ ಇವರಿಂದ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಬೇರೆಯಾದರು. ಈಗಲೂ ಸಹ ಮಾಧ್ಯಮದವರೆದುರು ನಿರ್ದೇಶಕ ಸೂರ್ಯಕಿರಣ್ ರವರು ತಮ್ಮ ಹೆಂಡತಿ ಇದನ್ನೆಲ್ಲಾ ಮರೆತು ಮತ್ತೊಮ್ಮೆ ತಮ್ಮ ಬಳಿ ಬರೋದಾದರೆ ಅವರನ್ನು ಸ್ವಾಗತಿಸಲು ನಾನು ಸದಾ ಸಿದ್ಧ ಎಂದು ಹೇಳಿಕೊಂಡಿದ್ದಾರೆ ಎಷ್ಟು ಧೀನರಾಗಿ ಬೇಡಿಕೊಂಡಿದ್ದಾರೆ ಎಂದರೆ ಅವರ ಕಾಲು ಹಿಡಿಯಲು ಕೂಡ ನಾನು ಸಿದ್ಧ ಎಂದು ಹೇಳಿಕೊಂಡಿದ್ದಾರೆ.

ತೆಲುಗಿನ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇದ್ದಷ್ಟು ದಿನ ಕೂಡ ಸೂರ್ಯಕಿರಣ್ ರವರು ಮಾತನಾಡಿದ್ದು ತಮ್ಮ ಮಡದಿಯ ಬಗ್ಗೆ. ಇದರಲ್ಲಿ ಗೊತ್ತಾಗುತ್ತೆ ಇವರಿಬ್ಬರ ವಿವಾಹ ವಿಷಯದಲ್ಲಿ ಸೂರ್ಯ ಕಿರಣ್ ರವರ ತಪ್ಪು ಇದ್ದರೂ ಇರಬಹುದು. ಯಾರು ಆ ನಟಿ ಎಂದು ನಿಮಗೆ ತಿಳಿಯಬೇಕು ಬನ್ನಿ ರಹಸ್ಯವನ್ನು ಕೂಡ ನಾವು ಎಂದು ನಿಮಗೆ ತಿಳಿಸುತ್ತೇವೆ. ತೆಲುಗು ಹಾಗೂ ದಕ್ಷಿಣ ಭಾರತ ಚಿತ್ರರಂಗದ ಇತರ ಭಾಷೆಗಳಲ್ಲಿ ಕೂಡ ಖ್ಯಾತರಾಗಿದ್ದ ನಟಿ ಕಲ್ಯಾಣಿ ರವರನ್ನು ಸೂರ್ಯಕಿರಣ್ ರವರು ಮದುವೆಯಾಗಿದ್ದು.

ಇವರಿಬ್ಬರ ನಡುವೆ ಯಾವ ಕಾರಣಕ್ಕಾಗಿ ವಿವಾಹ ವಿಚ್ಛೇದನ ನಡೆಯಿತು ಇಂದಿಗೂ ತಿಳಿದಿಲ್ಲ. ಕಲ್ಯಾಣಿ ರವರು ಕನ್ನಡ ಚಿತ್ರರಂಗದಲ್ಲಿ ಕೂಡ ನಟಿಸಿದ್ದು ಈ ಹಿಂದೆ ಸ್ಟಾರ್ ನಟರಾದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳಲ್ಲಿ ಕೂಡ ನಡೆಸಿದರು. ತಮ್ಮ ಪ್ರತಿಭೆ ಹಾಗೂ ಸೌಮ್ಯ ಸ್ವಭಾವದ ನಟನಾ ಶೈಲಿಯ ಮೂಲಕ ಅದೆಷ್ಟು ಅಭಿಮಾನಿಗಳನ್ನು ಸಂಪಾದಿಸಿದವರು. ಯಾವುದೇ ಕಾರಣಕ್ಕೂ ಯಾವ ವಿವಾದಗಳಲ್ಲಿ ಸಿಲುಕಿಕೊಂಡವರಲ್ಲ. ಆದರೆ ಅವರ ವೈವಾಹಿಕ ಸಂಬಂಧ ಈ ತರಹ ಶೋಚನೀಯವಾಗಿದ್ದು ಊಹಿಸಲು ಸಾಧ್ಯವಾಗಲಿಲ್ಲ. ಇತ್ತ ಸೂರ್ಯಕಿರಣ್ ರವರು ಸಹ ಈ ಕುರಿತಂತೆ ಮಾತನಾಡಿಲ್ಲ. ಕಲ್ಯಾಣಿ ರವರು ಇತ್ತೀಚೆಗಷ್ಟೇ ಕಿಚ್ಚ ಸುದೀಪ್ ನಟನೆಯ ಹೆಬ್ಬುಲಿ ಚಿತ್ರದಲ್ಲಿ ಸಹ ನಟಿಸಿದ್ದರು. ಇವರಿಬ್ಬರ ವಿವಾಹ ವಿಚ್ಛೇದನದ ರಹಸ್ಯ ಏನಿರಬಹುದು ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.