Neer Dose Karnataka
Take a fresh look at your lifestyle.

ಸ್ಯಾಂಡಲ್ವುಡ್ ಚಿತ್ರರಂಗದ ಅತ್ಯಂತ ದೃಢಕಾಯ ನಟ ಯಾರು ಎಂಬುದು ನಿಮಗೆ ಗೊತ್ತಾ?? ಇವರಲ್ಲಿ ನಿಮ್ಮ ಆಯ್ಕೆ ಯಾರು??

4

ನಮಸ್ಕಾರ ಸ್ನೇಹಿತರೇ ಕನ್ನಡದ ನಟರು ಅಂದಿನಿಂದ ಫಿಟ್ನೆಸ್ ಮಂತ್ರವನ್ನು ಜಪಿಸುತ್ತಿದ್ದರು. ಅಂದಿನ ಕಾಲಕ್ಕೆ ಫಿಟ್ ಆಗಿರೋದು ಎಂದರೆ ದಷ್ಟಪುಷ್ಟ ವಾಗಿರುವುದು ಎಂದಾಗಿತ್ತು. ಆದರೆ ಇಂದಿನ ಕಾಲಕ್ಕೆ ಫಿಟ್ ಆಗಿರುವುದು ಎಂದರೆ ಸಿಕ್ಸ್ ಪ್ಯಾಕ್ ಬಾಡಿ ಹಾಗೂ ದೃಢಕಾಯದ ಎಂಬುದು ಆಗಿದೆ. ಕಾಲಕಳೆದಂತೆ ಜನರು ನಾಯಕರನ್ನು ನೋಡುವ ದೃಷ್ಟಿ ಕೂಡ ಬದಲಾಗಿದೆ. ಇಂದಿನ ಸಂಚಿಕೆಯಲ್ಲಿ ನಾವು ಸ್ಯಾಂಡಲ್ವುಡ್ನ ಅತ್ಯಂತ ಫಿಟ್ ಆಕ್ಟರ್ಸ್ ಯಾರೆಲ್ಲ ಎಂದು ನೋಡೋಣ.

ಶರಣ್ ಕಾಮಿಡಿ ನಟನಾಗಿ ಕನ್ನಡ ಚಿತ್ರರಂಗಕ್ಕೆ ಕಾಣಿಸಿಕೊಂಡ ಶರಣ್ ರವರು ಈಗ ಸ್ಟಾರ್ ನಟರ ಪೈಕಿಯಲ್ಲಿ ಒಬ್ಬರು ಕೂಡ ಹೌದು. ಶರಣ ರವರು ಮಾರುತಿ 800 ಚಿತ್ರಕ್ಕೆ ಸಿಕ್ಸ್ ಪ್ಯಾಕ್ ತೋರಿಸಿ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದರು. ನೆನಪಿರಲಿ ಪ್ರೇಮ್ ಲವ್ಲಿ ಸ್ಟಾರ್ ಪ್ರೇಮ್ ರವರು ತಮ್ಮ ಶತ್ರು ಸಿನಿಮಾಗಾಗಿ ಸಿಕ್ಸ್ ಪ್ಯಾಕನ್ನು ಮಾಡಿದ್ದರು. ಈಗ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ ಪ್ರೇಮಂ ಪೂಜ್ಯಂ ಗಾಗಿ ಕೂಡ ಕಸರತ್ತನ್ನು ಮಾಡುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ವಿನೋದ್ ಪ್ರಭಾಕರ್ ಒಂದು ಕಾಲದ ನಮ್ಮ ಕನ್ನಡ ಚಿತ್ರರಂಗದ ಫಿಟ್ನೆಸ್ ಐಕಾನ್ ಎಂದೇ ಖ್ಯಾತರಾಗಿದ್ದ ಟೈಗರ್ ಪ್ರಭಾಕರ್ ರವರ ಮಗನಾದ ವಿನೋದ್ ಪ್ರಭಾಕರ್ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ಫಿಟ್ನೆಸ್ ಮೂಲಕ ಖ್ಯಾತರಾಗಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಸದಾ ತಮ್ಮ ನಿರ್ದೇಶನ ಹಾಗೂ ಕ್ರಿಯೇಟಿವಿಟಿ ಮೈಂಡ್ ನಿಂದ ಖ್ಯಾತ ರಾಗಿರುವ ಉಪ್ಪಿ ಅವರು ಫಿಟ್ನೆಸ್ ಗು ಕೂಡ ಫೇಮಸ್. ಇಲ್ಲಿಯವರೆಗೆ ಉಪೇಂದ್ರ ಅವರು ತಮ್ಮ ಹಲವಾರು ಚಿತ್ರಗಳಲ್ಲಿ ಶರ್ಟ್ ಲೇಸ್ ಆಗಿ ಕಾಣಿಸಿಕೊಂಡಿದ್ದಾರೆ. ಸೆಂಚುರಿ ಸ್ಟಾರ್ ಶಿವಣ್ಣ ಕನ್ನಡ ಚಿತ್ರರಂಗದ ಲೀಡರ್ ಎಂದು ಹೇಳಲಾಗುವ ಶಿವಣ್ಣ ಅವರು ಕೂಡ ತಮ್ಮ ಐವತ್ತರ ವಯಸ್ಸಿನ ನಂತರವೂ ಕೂಡ ಭಜರಂಗಿ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ಮಾಡಿ ಸುದ್ದಿಯಾಗಿದ್ದರು. ಈಗ ಭಜರಂಗಿ 2 ಚಿತ್ರ ನಿರ್ಮಾಣವಾಗುತ್ತಿದ್ದು ಇದರಲ್ಲಿ ಕೂಡ ಶಿವಣ್ಣ ಸಿಕ್ಸ್ ಪ್ಯಾಕ್ ನಲ್ಲಿ ಶರ್ಟ್ ಲೇಸ್ ಆಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ‌. ಇನ್ನು ಶಿವಣ್ಣರವರ ಎನರ್ಜಿಟಿಕ್ ಹಾಗೂ ಚಿರಯೌವನದ ಚಾರ್ಮ್ ಇಂದಿಗೂ ಕೂಡ ಯುವ ಪ್ರತಿಭೆಗಳಿಗೆ ಸ್ಪೂರ್ತಿ.

ದುನಿಯಾ ವಿಜಯ್ ಚಿತ್ರರಂಗದಲ್ಲಿ ಸಾಹಸ ಸಂಯೋಜಕ ಸಹಾಯಕರಾಗಿ ಎಂಟ್ರಿಕೊಟ್ಟ ವಿಜಯ ರವರು ದುನಿಯಾ ಚಿತ್ರದ ಮೂಲಕ ಕನ್ನಡಿಗರ ಮನದಲ್ಲಿ ನೆಲೆಸುವ ಮೂಲಕ ಸ್ಟಾರ್ ಆದರು. ತಮ್ಮ ಎಲ್ಲಾ ಚಿತ್ರಗಳಲ್ಲಿ ಕೂಡ ವರ್ಜಿನಲ್ ಆಗಿ ಫಿಟ್ನೆಸ್ ಮೂಲಕ ಸಿಕ್ಸ್ ಪ್ಯಾಕ್ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಇನ್ನು ಕೂಡ ಫಿಟ್ಟಾಗಿರುವ ಕನ್ನಡ ಸ್ಟಾರ್ ನಟರಲ್ಲಿ ಮಂಚೂಣಿ ಸ್ಥಾನದಲ್ಲಿ ಕಾಣುತ್ತಾರೆ. ಕೇವಲ ತಾವು ಮಾತ್ರ ಫಿಟ್ನೆಸ್ ನ ಮೂಲಕ ಯಶಸ್ವಿಯಾಗದೆ ಕನ್ನಡ ಚಿತ್ರರಂಗದ ಹಲವು ನಟರಿಗೆ ಫಿಟ್ನೆಸ್ ಗುರುವಾಗಿ ಕಾಣಿಸಿಕೊಂಡರು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ನಮಗೆ ಈ ಲಿಸ್ಟಿನಲ್ಲಿ ನಮಗೆ ಕಾಣಸಿಗುತ್ತಾರೆ. ಹೌದು ಮಿಸ್ಟರ್ ಐರಾವತ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಕ್ಕತ್ತಾಗಿ ಕಾಣಿಸಿಕೊಂಡಿದ್ದರು. ಇನ್ನು ಯಜಮಾನ ಹಾಗೂ ಕುರುಕ್ಷೇತ್ರ ಚಿತ್ರಕ್ಕೆ ಕೂಡ ದರ್ಶನ್ ರವರು ಸಕ್ಕತ್ ದೃಢಕಾಯರಾಗಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದರು. ಡಿ ಬಾಸ್ ಈಗ ದೈನಂದಿನ ವ್ಯಾಯಾಮ ಹಾಗೂ ಜಿಮ್ ಚಟುವಟಿಕೆಗಳ ಮೂಲಕ ಫಿಟ್ನೆಸ್ ಮಂತ್ರವನ್ನು ಜಪಿಸುತ್ತಿದ್ದಾರೆ‌‌.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಿತ್ರಗಳ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಜನಪ್ರಿಯತೆ ರಾಜ್ಯದಿಂದ ರಾಷ್ಟ್ರಮಟ್ಟಕ್ಕೆ ಹರಡಿದೆ. ಕನ್ನಡ ಚಿತ್ರರಂಗದ ಸ್ಟೇಟಸ್ ಅನ್ನು ಕೆಜಿಎಫ್ ಚಿತ್ರ ಲೆವೆಲ್ಲಿಗೆ ಕೊಂಡೊಯ್ದಿದೆ. ಕೆಜಿಎಫ್ ಚಿತ್ರದ ರಾಕಿ ಬಾಯ್ ಪಾತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ರವರು ದೈಹಿಕ ಕಸರತ್ತು ನಡೆಸುತ್ತಿದ್ದಾರೆ. ಸಿಕ್ಸ್ ಪ್ಯಾಕ್ ಬಾಡಿ ಅಲ್ಲದಿದ್ದರೂ ದೃಢವಾಗಿ ಪಾತ್ರಕ್ಕೆ ತಕ್ಕಂತಹ ಬಾಡಿ ಶೇಪ್ ಮಾಡುತ್ತಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೂರು ಚಿತ್ರಗಳಲ್ಲಿ ಮೂರು ಚಿತ್ರವು ಕೂಡ ಸೂಪರ್ ಹಿಟ್ ಆದ ನಂತರ ಕನ್ನಡ ಚಿತ್ರರಂಗದಲ್ಲಿ ಈಗ ಸೆನ್ಸೇಷನಲ್ ನಟನಾಗಿ ಕಾಣಿಸಿಕೊಂಡಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ. ಹೌದು ಧ್ರುವ ಸರ್ಜಾ ರವರು ಅವರು ಚಿತ್ರಕ್ಕೆ ತಮ್ಮ ಬಾಡಿಯನ್ನು ಬಿಲ್ಡ್ ಮಾಡಿಕೊಂಡು ಪ್ರೇಕ್ಷಕರ ಮನಗೆದ್ದಿದ್ದರು‌. ಸ್ಯಾಂಡಲ್ವುಡ್ನ ದೃಢಕಾಯ ನಟರಲ್ಲಿ ಧ್ರುವ ಸರ್ಜಾ ಕೂಡ ಒಬ್ಬರು.

ಕಿಚ್ಚ ಸುದೀಪ್ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತದಾದ್ಯಂತ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ಬಹುಬೇಡಿಕೆ ನಟನಾಗಿ ಕಾಣಿಸಿಕೊಂಡಿರುವ ಕನ್ನಡ ಮಣ್ಣಿನ ಹೆಮ್ಮೆಯ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ಈ ಲಿಸ್ಟಲ್ಲಿ ಕಾಣಸಿಗುತ್ತಾರೆ. ಹೌದು ತಮ್ಮ ಪೈಲ್ವಾನ್ ಚಿತ್ರದ ಬಾಕ್ಸರ್ ಲುಕ್ ಗಾಗಿ ಕಿಚ್ಚ ರವರು ಸಾಕಷ್ಟು ಪರಿಶ್ರಮಪಟ್ಟು ಬಾಡಿ ಬಿಲ್ಡ್ ಮಾಡಿದ್ದಾರೆ. ಇದು ಕನ್ನಡ ಚಿತ್ರರಂಗದಲ್ಲಿ ಒಂದು ಸೆನ್ಸೇಷನ್ ಕೂಡ ಸೃಷ್ಟಿಸಿತ್ತು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ಆಲ್-ರೌಂಡರ್ ನಟನಾಗಿ ಕಾಣಿಸಿಕೊಂಡಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೂಡ ಮೊದಲಿನಿಂದಲೂ ಫಿಟ್ನೆಸ್ ಐಕಾನ್ ಆಗಿ ಸ್ಯಾಂಡಲ್ವುಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಈಗಾಗಲೇ ಹಲವಾರು ಚಿತ್ರಗಳಲ್ಲಿ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದು ಮಿಂಚಿದ್ದಾರೆ.

ನೋಡಿದ್ರಲ್ಲ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದ ಯಾವೆಲ್ಲ ನಟರು ಫಿಟ್ನೆಸ್ ಮೂಲಕ ಜನರ ಮಲಗಿದ್ದು ಇಂದಿಗೂ ಕೂಡ ಅದನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ ಎಂಬುದು. ಇದರಲ್ಲಿ ನಿಮ್ಮ ಫೇವರಿಟ್ ನಟ ಯಾರು ಹಾಗೂ ಅವರ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Leave A Reply

Your email address will not be published.