Neer Dose Karnataka
Take a fresh look at your lifestyle.

ಹಸಿ ಈರುಳ್ಳಿ ತಿನ್ನು ಪ್ರತಿಯೊಬ್ಬರೂ ಈ ವಿಷಯಗಳನ್ನು ತಿಳಿದುಕೊಳ್ಳಲೇ ಬೇಕು, ಹಸಿ ಈರುಳ್ಳಿಯಿಂದ ಏನಾಗುತ್ತದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈರುಳ್ಳಿ ನಮ್ಮ ಭಾರತೀಯ ಅಡುಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ ಎಂದು ನಿಮಗೆ ಗೊತ್ತೇ ಇದೆ. ಈರುಳ್ಳಿಯನ್ನು ಕೆಲವರು ಅಡುಗೆಯಲ್ಲಿ ಸೇರಿಸಿ ಬಳಸಿದರೆ ಇನ್ನೂ ಕೆಲವರು ಅಡಿಗೆ ಮೇಲೆ ಅಲಂಕಾರಕ್ಕಾಗಿ ಬಳಸುತ್ತಾರೆ ಇನ್ನು ಕೆಲವರು ಅದನ್ನು ನೆಂಜಿಕೊಳ್ಳಲು ಹಸಿ ಈರುಳ್ಳಿಯನ್ನು ಬಳಸುತ್ತಾರೆ. ಒಟ್ಟಾರೆಯಾಗಿ ಭಾರತೀಯ ಶೈಲಿಯ ಅಡುಗೆಯಲ್ಲಿ ಈರುಳ್ಳಿ ದೊಡ್ಡ ಪಾತ್ರವನ್ನು ವಹಿಸುತ್ತದೆ ಎಂದು ಹೇಳಬಹುದು. ನೀವು ಹಸಿ ಈರುಳ್ಳಿ ತಿನ್ನುವ ಪ್ರಿಯರಾಗಿದ್ದರೆ ನಿಮಗೊಂದು ವಿಶೇಷ ಮಾಹಿತಿಯನ್ನು ನಾವು ನೀಡಲು ಹೊರಟಿದ್ದೇವೆ ಮಿಸ್ ಮಾಡದೆ ಕೊನೆತನಕ ಓದಿ.

ಸ್ನೇಹಿತರೆ ನಾವು ಈರುಳ್ಳಿಯನ್ನು ಕಟ್ಟರಿಸುವಾಗ ನಮ್ಮ ಕಣ್ಣಲ್ಲಿ ನೀರು ಬಂದರೂ ಸಹ ಅದರಿಂದ ನಮ್ಮ ದೇಹಕ್ಕೆ ಉಪಯೋಗಗಳು ಅನೇಕ ಇವೆ. ನಮ್ಮ ಕಣ್ಣಲ್ಲಿ ನೀರು ಬರುವ ಹಿಂದೆ ಕೂಡ ಒಂದು ವೈಜ್ಞಾನಿಕ ಕಾರಣ ಇದೆ. ಹೌದು ಅದರಲ್ಲಿರುವ ಸಲ್ಫರ್ ಗ್ಯಾಸ್ ಬಿಡುಗಡೆಯಾದಾಗ ನಮ್ಮ ಕಣ್ಣಲ್ಲಿ ಅದಕ್ಕೆ ಪ್ರತಿಕ್ರಿಯೆ ಎಂಬಂತೆ ನೀರು ಬರುತ್ತದೆ. ಕೆಲವರಿಗೆ ಹಸಿ ಈರುಳ್ಳಿ ತಿನ್ನಬಹುದಾ ಅದು ಆರೋಗ್ಯಕ್ಕೆ ಒಳ್ಳೆಯದ ಎಂಬ ಅನುಮಾನಗಳು ಇರುವುದು ಸಹಜ ಬನ್ನಿ ನಿಮ್ಮ ಗೊಂದಲಗಳನ್ನು ಇಂದಿನ ವಿಷಯದಲ್ಲಿ ನಾವು ನಿವಾರಿಸುತ್ತೇವೆ.

ಹಸಿ ಈರುಳ್ಳಿ ತಿನ್ನುವುದು ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ನಿಮ್ಮ ಜೀರ್ಣಕ್ರಿಯೆಯನ್ನು ಗಮನಾರ್ಹವಾಗಿ ವೃದ್ಧಿಗೊಳಿಸಿ ನಮ್ಮ ದೇಹದಲ್ಲಿ ಒಳ್ಳೆಯ ಕೊಬ್ಬನ್ನು ಶೇಖರಣೆ ಮಾಡುವುದರಲ್ಲಿ ಸಹಾಯಕಾರಿಯಾಗುತ್ತದೆ‌. ಇದರಲ್ಲಿರುವ ಸಲ್ಫರ್ ವಿಟಮಿನ್ ಬಿ ವಿಟಮಿನ್ ಸಿ ಹಾಗೂ ಇತರ ಪೋಷಕಾಂಶಗಳು ನಮ್ಮ ಆರೋಗ್ಯಕ್ಕೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಹಸಿ ಈರುಳ್ಳಿ ನಿಮಗೆ ನಿದ್ರಾಹೀನತೆಯ ಸಮಸ್ಯೆಯನ್ನು ಸಂಪೂರ್ಣವಾಗಿ ದೂರ ಮಾಡುತ್ತದೆ. ಇನ್ನು ಈರುಳ್ಳಿ ಕೂಡ ಕ್ಯಾನ್ಸರ್ ನಿರೋಧಕ ಆಹಾರ ವಸ್ತುವಾಗಿದ್ದು ಮಾತ್ರವಲ್ಲದೆ ನಮ್ಮ ಮೂಳೆಯ ಕೀಲುಗಳ ಬಲ ವೃದ್ಧಿಗೆ ಸಹಾಯಕಾರಿಯಾಗುತ್ತದೆ.

ಇನ್ನು ಇದು ಹೃದಯಕ್ಕೂ ಕೂಡ ಉತ್ತಮವಾಗಿದ್ದು ನಮ್ಮ ರಕ್ತದ ಅಧಿಕ ಒತ್ತಡವನ್ನು ಕಡಿಮೆ ಮಾಡುವಲ್ಲಿ ಸಹಕಾರಿ ಆಗುತ್ತದೆ. ಅದಕ್ಕಾಗಿಯೇ ಈರುಳ್ಳಿಯನ್ನು ಔಷಧಿ ತಯಾರಿಕೆ ಸಂಸ್ಥೆಗಳು ತಮ್ಮ ಔಷಧಿ ತಯಾರಿಕೆಯಲ್ಲಿ ಹೆಚ್ಚಿನ ಅಂಶವಾಗಿ ಬಳಸುತ್ತಾರೆ. ಒಂದು ವೇಳೆ ನೀವು ಈರುಳ್ಳಿ ರಸದಲ್ಲಿ ಒಂದೆರಡು ಹನಿ ಜೇನುತುಪ್ಪವನ್ನು ಸೇರಿಸಿ ಸೇವಿಸಿದರೆ ಖಂಡಿತವಾಗಿ ನಿಮಗಿರುವ ಜ್ವರ ಕೆಮ್ಮು ತಲೆಬೇನೆ ಹೀಗೆ ಹಲವಾರು ರೋಗಗಳು ನಿಮ್ಮಿಂದ ದೂರವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗೂ ಮೂಳೆಗಳ ಬಲ ವೃದ್ಧಿಗೂ ಕೂಡ ಇದು ಹೇಳಿ ಮಾಡಿಸಿದ ಆಹಾರವಸ್ತು.

ಇನ್ನು ಕೂದಲು ಸಮಸ್ಯೆ ಉಳ್ಳವರು ಖಂಡಿತವಾಗಿ ಇದನ್ನು ಉಪಯೋಗಿಸಲೇಬೇಕು. ಈರುಳ್ಳಿ ರಸದಲ್ಲಿರುವ ಗುಣಗಳು ನೀವು ಪ್ರತಿದಿನ ಇದನ್ನು ಹಚ್ಚಿಕೊಂಡರೆ ನಿಮ್ಮ ಕೂದಲು ಉದುರುವ ಸಮಸ್ಯೆ ಸಂಪೂರ್ಣವಾಗಿ ಕಡಿಮೆಯಾಗಿ ನಿಮ್ಮ ಕೂದಲು ದಟ್ಟವಾಗಿ ಬೆಳೆಯಲು ಇದು ಸಹಕಾರಿಯಾಗುತ್ತದೆ. ಇನ್ನು ಹಸಿ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಅಂಶ ಜಾಸ್ತಿಯಾಗಿ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗಿ ನಿಮ್ಮ ದೇಹದಲ್ಲಿ ಮಧುಮೇಹವನ್ನು ನಿಯಂತ್ರಿಸಲು ಸಾಧ್ಯ. ಇನ್ನು ನಿಮ್ಮ ನೆನಪಿನ ಶಕ್ತಿಯನ್ನು ವೃದ್ಧಿಸಲು ಕೂಡ ಇದರ ಅವಶ್ಯಕತೆ ಬಹುವಾಗಿದೆ. ಹಾಗೂ ಇದು ರಕ್ತದ ಹೆಪ್ಪುಗಟ್ಟುವುದನ್ನು ತಡೆಯುವಲ್ಲಿಯೂ ಸಹಕಾರಿಯಾಗಿ ನಿಮ್ಮ ಹೃದಯದಲ್ಲಿ ಹೃದಯಾಘಾತ ಸಮಸ್ಯೆಗಳು ಆಗದಂತೆ ತಡೆಯುತ್ತದೆ.

ಅಧಿಕ ರಕ್ತದೊತ್ತಡ ಹಾಗೂ ಕಿಡ್ನಿಯಲ್ಲಿ ಕಲ್ಲಿದ್ದರೆ ತಪ್ಪದೆ ಹಸಿ ಈರುಳ್ಳಿಯನ್ನು ದಿನಾಲು ತಪ್ಪದೆ ಸೇವಿಸಿ. ನೀರುಳ್ಳಿ ಯೊಂದಿಗೆ ಮೊಸರು ಹಾಕಿ ತಿನ್ನುವುದರಿಂದ ಕಿಡ್ನಿ ಸ್ಟೋನ್ ಕೂಡ ನಿವಾರಣೆ ಆಗುವುದು ಖಂಡಿತ. ಇನ್ನು ಪುರುಷರಿಗೆ ಪುರುಷತ್ವ ಸಮಸ್ಯೆಯಲ್ಲಿ ಕೂಡ ಈರುಳ್ಳಿ ಸೇವನೆ ಸಹಕಾರಿಯಾಗುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ನೋಡಿದ್ದಲ್ಲ ಸ್ನೇಹಿತರೆ ಕೇವಲ ಅಡುಗೆಗಾಗಿ ಉಪಯೋಗಿಸುವ ಈರುಳ್ಳಿ ನಮ್ಮ ಜೀವನದ ಆರೋಗ್ಯ ಸಮಸ್ಯೆಗಳಿಗೂ ಕೂಡ ಎಷ್ಟೊಂದು ಪರಿಹಾರವನ್ನು ಒದಗಿಸಲು ಕಾರಣವಾಗಿದೆ ಎಂದು. ನೀವು ಕೂಡ ದಿನನಿತ್ಯ ಹಸಿ ಈರುಳ್ಳಿಯನ್ನು ಸೇವಿಸುವುದರಿಂದ ಉತ್ತಮ ಆರೋಗ್ಯಕ್ಕೆ ಇಂದೇ ನಾಂದಿ ಹಾಡಿ. ಈ ಮೇಲಿನ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡು ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.