Neer Dose Karnataka
Take a fresh look at your lifestyle.

ಬೆಳಿಗ್ಗೆ ಎದ್ದ ತಕ್ಷಣ ತಮನ್ನಾ ತನ್ನ ಎಂಜಲಿನಲ್ಲಿ ಏನು ಮಾಡುತ್ತಾರೆ ಗೊತ್ತಾ?? ವಿಚಿತ್ರ ಅಭ್ಯಾಸದ ಬಗ್ಗೆ ಬಾಯ್ಬಿಟ್ಟ ತಮನ್ನಾ.

ನಮಸ್ಕಾರ ಸ್ನೇಹಿತರೇ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಬಹು ಬೇಡಿಕೆಯ ಹಿರೋಯಿನ್. ತಮನ್ನಾ ಕಾರಣಕ್ಕೆ ಹಲವಾರು ಸಿನಿಮಾಗಳು ಹಿಟ್ ಆಗಿವೆ. ಈಗಲೂ ತಮನ್ನಾ ಭಾಟಿಯಾ ನಟಿಸಿರುವ ವೀಡಿಯೋಗಳು, ಡ್ಯಾನ್ಸ್ ಗಳು ಯುಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೇ ವೀಕ್ಷಣೆ ಕಂಡಿವೆ. ಈಗಷ್ಟೇ ಹಾಲಿನಲ್ಲಿ ಸ್ನಾನ ಮಾಡಿ ಬಂದಿರುವವರೇನೋ ಎನ್ನುವಷ್ಟು ಫ್ರೆಶ್ ಕಾಣುತ್ತಾರೆ ತಮನ್ನಾ. ಹಾಗಾಗಿ ಅವರಿಗೆ ಸಿನಿಮಾಗಳಲ್ಲಿ ಮೇಕಪ್ ಸಹ ಮಾಡುವುದಿಲ್ಲವಂತೆ. ಅವರ ಸುಕೋಮಲ ತ್ವಚೆಗೆ ಎಲ್ಲರೂ ಫಿದಾ ಆಗಿದ್ದಾರೆ. ಆದರೇ ಅವರ ಆ ತ್ವಚೆಯ ಹಿಂದಿನ ರಹಸ್ಯ ಏನು ಎಂಬುದನ್ನ ಸ್ವತಃ ತಮನ್ನಾ ಭಾಟಿಯಾರವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಯೌವ್ವನದಲ್ಲಿ ಎಲ್ಲರಿಗೂ ಕಾಡುವಂತಹ ಚರ್ಮದ ಸಮಸ್ಯೆಗಳು, ಮೊಡವೆಗಳು, ಕಪ್ಪು ಕಲೆಗಳು , ತಮನ್ನಾ ಅವರಿಗೂ ಕಾಡಿದ್ದವಂತೆ. ಅವುಗಳಿಂದ ಹೊರಬರಲು ಅವರು ಹಲವಾರು ಕಾಸ್ಮೆಟಿಕ್ ಗಳು, ಮನೆಮದ್ದುಗಳನ್ನು ಸಹ ಬಳಸಿದ್ದರಂತೆ. ಆದರೇ ಅದ್ಯಾವುದು ಸೂಕ್ತ ಪರಿಹಾರ ನೀಡಲಿಲ್ಲವಂತೆ. ಕೊನೆಗೆ ಒಂದು ದಿನ ಒಂದು ಹೊಸ ಪ್ರಯೋಗ ಮಾಡಿಕೊಳ್ಳಲು ಮುಂದಾದರಂತೆ. ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಬಾಯಿಯ ಎಂಜಲನ್ನ ತಮ್ಮ ಮುಖಕ್ಕೆ ಲೇಪಿಸಿಕೊಳ್ಳಲು ಶುರು ಮಾಡಿದರಂತೆ.

ಪರಮಾಶ್ಚಾರ್ಯ ಏನೆಂದರೇ, ಕ್ರೀಮು, ಸ್ಕ್ರಬ್ ಗಳಿಂದಾಗದ ಕೆಲಸ ತಮನ್ನಾ ರ ಎಂಜಲಿನಿಂದ ಮುಖದಲ್ಲಿದ ಮೊಡವೆಗಳು ಹೋಗಲು ಶುರುವಾದವಂತೆ. ಅದರಲ್ಲೂ ಬೆಳಗ್ಗಿನ ಸಮಯದಲ್ಲಿ ಬರುವ ಎಂಜಲಿಗೆ ಮೊಡವೆಯನ್ನು ಒಣಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂಬುದು ತಮನ್ನಾರ ಅಭಿಪ್ರಾಯ. ಹ್ಯಾಪಿಡೇಸ್ ನಿಂದ ಮಿಲ್ಕಿ ಬ್ಯೂಟಿ ಚಾರ್ಮ್ ಉಳಿಸಿಕೊಂಡಿರುವ ತಮನ್ನಾ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ವೆಬ್ ಸೀರಿಸ್ ಗೂ ಕಾಲಿಟ್ಟಿದ್ದು, ಡಿಸ್ನಿ ಹಾಟ್ ಸ್ಟಾರ್ ನಲ್ಲಿ ಪ್ರಸಾರವಾಗುತ್ತಿರುವ ನವೆಂಬರ್ ಸ್ಟೋರಿಸ್ ಎಂಬ ವೆಬ್ ಸೀರಿಸ್ ನಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಇದಲ್ಲದೇ ಅಡುಗೆ ಕಾರ್ಯಕ್ರಮವೊಂದರಲ್ಲಿ ನಿರೂಪಕಿಯಾಗಿ ಸಹ ಕೆಲಸ ಮಾಡುತ್ತಿದ್ದಾರೆ. ತಮನ್ನಾ ಭಾಟಿಯಾರವರ ಈ ವಿಚಿತ್ರ ವರ್ತನೆಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.