Neer Dose Karnataka
Take a fresh look at your lifestyle.

ಅಪ್ರತಿಮ ಸುಂದರಿ ಸುಮನ್ ರಂಗನಾಥ್ ರವರು ಮದುವೆಯಾಗುವುದಕ್ಕೂ ಮುನ್ನ ಲವ್ ಮಾಡಿದವರು ಯಾರ್ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೋ ನಟಿಯರು ಬಂದು ಹೋಗಿದ್ದಾರೆ ಆದರೆ ಕೆಲ ನಟಿಯರು ಇಂದು ಕೂಡ ಕನ್ನಡಿಗರ ಮನದಾಳದಲ್ಲಿ ಉಳಿದುಕೊಂಡಿದ್ದಾರೆ. ಅಂಥವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ನಟಿ ಕೂಡ ಒಬ್ಬರು. ಇವರು ಅಂದಿನಿಂದಲೂ ನಟಿಸಿಕೊಂಡು ಬರುತ್ತಿದ್ದಾರೆ. ಇಂದು ಅವರಿಗೆ 46 ವರ್ಷ ವಯಸ್ಸಾದರೂ ಕೂಡ ನವಯುವತಿ ಅಂತೆ ಕಾಣಿಸುತ್ತಿದ್ದಾರೆ. ಇವರು ಇಂದು ಮದುವೆಯಾಗಿ ಸುಖವಾಗಿ ಇದ್ದರು ಸಹ ಇವರು ಮದುವೆ ಆಗೋಕಿಂತ ಮುಂಚೆ 4 ಸಂಬಂಧಗಳನ್ನು ಹೊಂದಿದ್ದರು ಎಂದು ಸುದ್ದಿಯಾಗಿದೆ. ಯಾರು ಅವರೆಲ್ಲ ಎಂದು ನಿಮಗೆ ವಿವರವಾಗಿ ತಿಳಿಸುತ್ತೇವೆ ಬನ್ನಿ.

ಮೊದಲನೆಯದಾಗಿ ಫರ್ಹನ್ ಅಕ್ತರ್ 1997 ರಲ್ಲಿ ಸುಮನರಂಗನಾಥನ ಅವರು ಮುಂಬೈನಲ್ಲಿ ಮಾಡಲಿಂಗ್ ಮಾಡಬೇಕಾದರೆ ಫರ್ಹಾನ್ ಅಖ್ತರ್ ಅವರ ಸ್ನೇಹವಾಗಿ ಇವರಿಬ್ಬರ ಮಧ್ಯೆ ಸಂಬಂಧ ಬೆಳೆಯಿತು. ಆಗ ಫರ್ಹಾನ್ ರವರು ಕೇವಲ 23ವರ್ಷದ ವಯಸ್ಸಿನವರಾಗಿದ್ದರು ಮತ್ತು ಸುಮನ್ ರಂಗನಾಥ್ ರವರು ಅವರಿಗಿಂತ ದೊಡ್ಡವರಾಗಿದ್ದರು. ಆದರೂ ಸಹ ಇಬ್ಬರೂ ಬಹಳ ಪ್ರೀತಿಯಿಂದಲೇ ಇದ್ದರು ಆದರೆ ಸುಮನ್ ರಂಗನಾಥ್ ರವರ ದೊಡ್ಡ ನಟಿಯಾಗಬೇಕೆಂಬ ಮಹತ್ವಾಕಾಂಕ್ಷೆ ಹಾಗೂ ಎಲ್ಲರೊಂದಿಗೆ ಅವರು ಸಲಿಗೆಯಿಂದ ಇರುತ್ತಿದ್ದುದು ನೋಡಿ ಫರ್ಹಾನ್ ರವರಿಗೆ ಸರಿ ಕಾಣಲಿಲ್ಲ ಹಾಗೂ ಈ ಸಂಬಂಧ ಒಂದು ವರ್ಷದಲ್ಲೇ ಮುರಿದುಬಿತ್ತು. ನಂತರ ಫರಾನ್ ಅಖ್ತರ್ ಅವರು ಅದೇ ವರ್ಷದಲ್ಲಿ ಮದುವೆಯಾದ ನಂತರ ಮತ್ತೆಂದು ಸುಮನ್ ರಂಗನಾಥ್ ಅವರ ಸಂಪರ್ಕಕ್ಕೆ ಬರಲಿಲ್ಲ.

ರಾಹುಲ್ ರಾಯ್ ನಂತರದ ದಿನಗಳಲ್ಲಿ ಸುಮನ್ ರಂಗನಾಥ್ ಅವರು ಬಾಲಿವುಡ್ ನ ಖ್ಯಾತ ನಟ ರಾಹುಲ್ ರಾಯ್ ರವರೊಂದಿಗೆ ಸಂಬಂಧದೊಂದಿಗೆ ಇದ್ದರು. ಒಂದು ಅರ್ಥದಲ್ಲಿ ಹೇಳಬೇಕೆಂದರೆ ಸುಮನ್ ರಂಗನಾಥ್ ಅವರು ತಮ್ಮ ನಟನಾ ವೃತ್ತಿಯಲ್ಲಿ ಕಾನ್ಫಿಡೆಂಟ್ ಆಗಿ ಇರಲು ಇವರೇ ಸುಮನ್ ರಂಗನಾಥ್ ರವರಿಗೆ ಪ್ರೋತ್ಸಾಹಿಸಿದ್ದು. ಅಲ್ಲದೆ ಸುಮನ್ ರಂಗನಾಥ್ ರವರು ಮುಂದಿನ ದಿನಗಳಲ್ಲಿ ಖ್ಯಾತ ನಟಿಯಾಗಲು ಕೂಡ ಇವರೇ ಪ್ರೋತ್ಸಾಹಿಸಿದ್ದು. ಇವರ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ಇವರು ಇನ್ನೇನು ಮದುವೆ ಆಗುತ್ತಾರೆ ಎಂಬ ಸುದ್ದಿಗಳು ಗಟ್ಟಿಯಾಗಿ ಹರಿದಾಡಿ ಅಷ್ಟರ ಮಟ್ಟಿಗೆ ಹೋಗಿತ್ತು. ಮದುವೆಯವರೆಗೂ ಹೋಗಿದ್ದೆ ಇವರ ಸಂಬಂಧ ಅನಂತರ ಇವರು ಬೇರೆಯಾಗಿದ್ದು ಏಕೆ ಎಂಬುದು ಇಂದಿಗೂ ಕೂಡ ಅರ್ಥವಾಗಿಲ್ಲ. ಆದರೆ ಇಂದಿಗೂ ಕೂಡ ಇವರಿಬ್ಬರು ಒಳ್ಳೆಯ ಸ್ನೇಹಿತರಾಗಿದ್ದಾರೆ.

ಉರು ಪಟೇಲ್ ಹಾಗೂ ಗೌತಮ್ ಉರು ಪಟೇಲ್ ಒಬ್ಬ ಖ್ಯಾತ ಉದ್ಯಮಿಯಾಗಿದ್ದು ಇವರೊಂದಿಗೆ ಸುಮನ್ ರಂಗನಾಥ್ ಅವರ ಸಂಬಂಧ ಕೆಲವು ಸಮಯಗಳ ಕಾಲ ನಡೆದಿತ್ತು. ನಂತರದ ದಿನಗಳಲ್ಲಿ ಉರು ಪಟೇಲ್ರವರ ಕೋಪ ಹಾಗೂ ಹುಚ್ಚುತನದ ಗುಣಗಳು ಮತ್ತೆ ಅಹಂಕಾರದ ಮನೋಭಾವನೆಗಳು ನಟಿ ಸುಮನ್ ರಂಗನಾಥ್ ಅವರಿಗೆ ಸರಿಯಾಗಿ ಬಂದಿರಲಿಲ್ಲ. ಹಾಗಾಗಿ ಇವರ ನಡುವೆ ಹಲವಾರು ಬಾರಿ ಜಗಳ ನಡೆದು ಇವರಿಬ್ಬರು ಬೇರಾದರರು. ನಂತರ ದಿನಗಳಲ್ಲಿ ಗೌತಮ್ ಅವರನ್ನು ಸುಮನ್ ರಂಗನಾಥ್ ಅವರು ಮದುವೆಯಾದರೂ ಸಹ 2000 ರಲ್ಲಿ ಇವರಿಬ್ಬರು ಬೇರೆಯಾದರು.

ಬಂಟಿ ವಾಲಿಯ ಖ್ಯಾತ ನಿರ್ಮಾಪಕ ಬಂಟಿ ವಾಲಿಯಾದವರನ್ನು ಇದಾದ ನಂತರ ಮದುವೆಯಾದರೂ ನಟಿ ಸುಮನ್ ರಂಗನಾಥ್. ಮೊದಮೊದಲು ಇಬ್ಬರೂ ಕೂಡ ಹಾಲು-ಜೇನಿನಂತೆ ಸುಖ ಸಂಸಾರವನ್ನು ನಡೆಸುತ್ತಿದ್ದರು ಆದರೆ ಒಮ್ಮೆಲೆ ಇವರ ಜೀವನದಲ್ಲಿ ಕೂಡ ಜಗಳ ಗಳ ಸುರಿಮಳೆ ಪ್ರಾರಂಭವಾಯಿತು. ನಂತರ ಇನ್ನೇನು ನಟಿ ಸುಮನ್ ರಂಗನಾಥ್ ಅವರು ಬಾಗ್ ಪಾರ್ಕ್ ಮಾಡಿ ತಮ್ಮ ತವರುಮನೆಗೆ ಹೊರಟು ಹೋದರು. ಈ ಮದುವೆಸಂಬಂಧ ಕೂಡ ಎಂಟು ತಿಂಗಳಿಗಿಂತ ಹೆಚ್ಚಿನ ಕಾಲ ಉಳಿಯಲಿಲ್ಲ.

ನಂತರ ಈಗ ಕೊಡಗಿನ ಕಾಫಿ ಪ್ಲಾಂಟರ್ ಒಬ್ಬರನ್ನು ಮದುವೆಯಾಗಿ ಸುಖ ಸಂಸಾರ ನಡೆಯುತ್ತಿದ್ದು ಇದು ಕೂಡ ಎಷ್ಟು ದಿನದ ಮಟ್ಟಿಗೆ ಉಳಿಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸದ್ಯಕ್ಕಂತೂ ಸುಮನ್ ರಂಗನಾಥ್ ರವರು ಕನ್ನಡ ಚಿತ್ರಗಳಲ್ಲಿ ನಟಿಸುತ್ತಾ ಎಲ್ಲರ ಮನಗೆದ್ದು ಸುಖದ ಜೀವನವನ್ನು ನಡೆಸುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ತಪ್ಪದೆ ಹಂಚಿಕೊಳ್ಳಿ.

Comments are closed.