Neer Dose Karnataka
Take a fresh look at your lifestyle.

ಪಾರು ಧಾರವಾಹಿ ಯಲ್ಲಿ ನಟಿಸಿರುವ ನಾಗೇಂದ್ರ ಅವರ ಪುತ್ರಿ ಕೂಡ ಟಾಪ್ ನಟಿ ಯಾರು ಗೊತ್ತೇ?? ನಿಮಗೆಲ್ಲರಿಗೂ ಚಿರಪರಿಚಿತ

26

ನಮಸ್ಕಾರ ಸ್ನೇಹಿತರೇ ಈಗಿನ ಜಮಾನ ದಲ್ಲಿ ಚಿತ್ರಗಳಿಗಿಂತ ಹೆಚ್ಚಾಗಿ ಕಿರುತೆರೆ ಪ್ರಸಾರವಾಗುವ ದಾರವಾಹಿಗಳು ಕರ್ನಾಟಕದ ಸಾಕಷ್ಟು ವೀಕ್ಷಕರನ್ನು ಕಳೆದುಕೊಂಡು ನೆಕ್ಸ್ಟ್ ಲೇವೆಲ್ ಗೆ ಹೋಗಿದೆ. ಚಿತ್ರಗಳಿಗಿಂತ ಹೆಚ್ಚಾಗಿ ಕಿರುತೆರೆಗಳಲ್ಲಿ ದಾರವಾಹಿ ಗಳದ್ದೇ ಕಾರುಬಾರು ನಡೆದಿದೆ. ಧಾರವಾಹಿಗಳಿಗೆ ಬರುವ ಟಿಆರ್ಪಿ ನೋಡಿ ಎಲ್ಲಾ ವಾಹಿನಿಗಳು ಚಿತ್ರಗಳಿಗಿಂತ ಹೆಚ್ಚಾಗಿ ಧಾರವಾಹಿ ಮೇಲೆ ಇನ್ವೆಸ್ಟ್ ಮಾಡಲು ಮುಂದಾಗಿದ್ದಾರೆ. ಧಾರವಾಹಿಯನ್ನು ಮನೆ ಮಂದಿ ಕೂತು ನೋಡುವುದರಿಂದ ಅದಕ್ಕೆ ಜನಪ್ರಿಯತೆ ಕೂಡ ಈಗಾಗಲೇ ಹೆಚ್ಚಾಗಿದೆ.

ಇದೇ ಧಾರವಾಹಿ ಸಂಬಂಧಪಟ್ಟಿರುವ ಕುರಿತಂತೆ ನಾವು ಇಂದಿನ ವಿಷಯದಲ್ಲಿ ಮಾತನಾಡಲು ಹೊರಟಿದ್ದೇವೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಹಲವಾರು ಧಾರವಾಹಿಗಳಲ್ಲಿ ಪಾರು ಎಂಬ ಧಾರವಾಹಿ ಕೂಡ ಸಾಕಷ್ಟು ಜನಪ್ರಿಯತೆಯನ್ನು ಪ್ರೇಕ್ಷಕರಲ್ಲಿ ಹೊಂದಿದೆ. ಪ್ರತಿಬಾರಿ ರೇಟಿಂಗ್ ನಲ್ಲಿ ಮೊದಲ ಐದು ಸ್ಥಾನಗಳಲ್ಲಿ ಪಾರು ಧಾರವಾಹಿ ಸದಾ ಕಾಣಿಸುತ್ತಿರುತ್ತದೆ. ಇದಕ್ಕೆ ಕಾರಣ ಪಾರು ಧಾರವಾಹಿಯ ಮೇಕಿಂಗ್ ಕ್ವಾಲಿಟಿ ಹಾಗೂ ಕಥೆ ಎಂದು ಹೇಳಬಹುದು. ಇದರಿಂದಾಗಿ ಜನರು ಪಾರು ಧಾರವಾಹಿಯನ್ನು ನೋಡಲು ಮುಗಿಬಿದ್ದು ಇಷ್ಟಪಡುತ್ತಾರೆ.

ಇದಕ್ಕೆ ಮುಖ್ಯ ಕಾರಣ ಧಾರಾವಾಹಿ ಯಲ್ಲಿರುವ ಪಾರು ಪಾತ್ರದ ಮೋಕ್ಷಿತ ಪೈ. ಹಾಗೂ ಅಖಿಲಾಂಡೇಶ್ವರಿ ಆದಿತ್ಯ ಚೇತು ಹೀಗೆ ಹಲವಾರು ಪಾತ್ರಗಳು ವೀಕ್ಷಕರ ಮನವನ್ನು ಗೆದ್ದು ಈಗಾಗಲೇ ಮಿಂಚಿದ್ದಾರೆ. ಇದಲ್ಲದೆ ನಾಯಕನಟಿ ಪಾರು ಪಾತ್ರದಾರಿಯ ತಂದೆಯಾಗಿ ನಟಿಸಿರುವ ಡ್ರೈವರ್ ಪಾತ್ರದಲ್ಲಿ ಮಿಂಚುತ್ತಿರುವ ನಾಗೇಂದ್ರ ರವರು ಹೀಗೆ ಹಲವಾರು ಬಾರಿ ಸುದ್ದಿಯಾಗಿದ್ದಾರೆ. ನಾಗೇಂದ್ರ ಅವರಿಗೆ ಈಗಾಗಲೇ ಹಲವಾರು ಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸಿದ ಅನುಭವವಿದೆ.

ಹೀಗಾಗಿ ನಾಗೇಂದ್ರ ರವರನ್ನು ಈ ಪಾರು ದಾರವಾಹಿಯಲ್ಲಿ ಡ್ರೈವರ್ ಪಾತ್ರದಲ್ಲಿ ನೋಡಲು ಪ್ರೇಕ್ಷಕರು ತುಂಬಾ ಇಷ್ಟಪಡುತ್ತಾರೆ ಹಾಗೂ ಅವರ ನಟನೆಯನ್ನು ಕೂಡ ಇಷ್ಟಪಡುತ್ತಾರೆ. ಇನ್ನು ನಾಗೇಂದ್ರ ಶಾ ರವರ ಮಗಳು ಕೂಡ ಚಿತ್ರರಂಗದಲ್ಲಿ ದೊಡ್ಡ ನಟಿ ಆಗಿದ್ದಾರೆ. ನಿಮಗೆ ಇನ್ನೂ ಅವರು ಯಾರೆಂದು ಗೊತ್ತಿಲ್ಲದಿದ್ದರೆ ನಾನು ಹೇಳುತ್ತೇನೆ ಬನ್ನಿ. ಹೌದು ಚಿತ್ರ ಹಾಗೂ ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿ ಪ್ರಸಿದ್ಧಿಯನ್ನು ಪಡೆದಿರುವ ನಾಗೇಂದ್ರ ಶಾ ರವರ ಮಗಳು ಕೂಡಾ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಖ್ಯಾತ ನಟಿ.

ಅವರು ಇನ್ಯಾರೂ ಅಲ್ಲ ಕನ್ನಡ ಹಾಗೂ ಪರಭಾಷೆಗಳಲ್ಲಿ ನಡೆಸಿರುವ ನಟಿ ಕಾವ್ಯ ಶಾ. ಹೌದು ನಟಿ ಕಾವ್ಯ ಶಾ ಪೋಷಕ ನಟರಾಗಿ ನಟಿಸುತ್ತಿರುವ ನಾಗೇಂದ್ರರವರ ಮಗಳು. ಈಗಾಗಲೆ ಕನ್ನಡದಲ್ಲಿ ಚಕ್ರವ್ಯೂಹ, Mr. & Mrs. ರಾಮಾಚಾರಿ, ಮುಕುಂದ ಮುರಾರಿ ಸೇರಿದಂತೆ ಹಲವಾರು ಚಿತ್ರ ಹಾಗೂ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕೂಡ ಕಾಣಿಸಿಕೊಂಡಿರುವ ಕಾವ್ಯ ರವರು ಪರಭಾಷಾ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ನೋಡಿದ್ರಲ್ಲ ಸ್ನೇಹಿತರೆ ತಂದೆಯಂತೆ ಮಗಳು ಕೂಡ ಮನೋರಂಜನೆ ಕ್ಷೇತ್ರದಲ್ಲಿ ತಮ್ಮ ಹೆಸರನ್ನು ತಮ್ಮ ಪರಿಶ್ರಮದ ಮೂಲಕ ಸಂಪಾದಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡಿದೆ ಹಂಚಿಕೊಳ್ಳಿ.

Leave A Reply

Your email address will not be published.