Neer Dose Karnataka
Take a fresh look at your lifestyle.

ಜೊತೆ ಜೊತೆಯಲಿ ಖ್ಯಾತಿಯ ನಟ ಆರ್ಯವರ್ಧನ್ ಅಲಿಯಾಸ್ ಅನಿರುದ್ಧ್ ಅವರ ತಂಗಿ ಯಾರು ಗೊತ್ತಾ? ಆಕೆ ಕೂಡ ಖ್ಯಾತ ನಟಿಯಂತೆ.

5

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಧಾರವಾಹಿಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದು ಅಂತಹ ಧಾರಾವಾಹಿಗಳಲ್ಲಿ ಜೊತೆ ಜೊತೆಯಲಿ ಕೂಡ ಒಂದು. ಹೌದು ಧಾರಾವಾಹಿಗಳಲ್ಲಿ ವಿಭಿನ್ನವಾದ ಕಥೆಯನ್ನು ಹೊಂದಿರುವ ಜೊತೆ ಜೊತೆಯಲಿ ಧಾರವಾಹಿ ಇದೀಗ ಕನ್ನಡ ಕಿರುತೆರೆಯ ಟಾಪ್ ಧಾರವಾಹಿಯಾಗಿದೆ. ಇನ್ನು ಧಾರಾವಾಹಿ ಅಷ್ಟೇ ಅಲ್ಲದೆ ಅದರಲ್ಲಿ ಅಭಿನಯಿಸುತ್ತಿರುವ ಸಾಕಷ್ಟು ಕಲಾವಿದರು ಕೂಡ ಜನರ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

ಹೌದು ನಟ ಅನಿರುದ್ಧ್ ಅವರು ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರ ನಿಭಾಯಿಸಿದ್ದರೆ, ಇತ್ತ ನಟಿ ಮೇಘಾ ಶೆಟ್ಟಿ ಅವರು ಅನು ಸಿರಿಮನೆ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಇನ್ನು ಇದೀಗಾಗಲೇ ಇವರಿಗೆ ಸಾಕಷ್ಟು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಇದ್ದು, ಈ ಜೋಡಿಯ ಫ್ಯಾನ್ ಪೇಜ್ ಗಳು ಕೂಡ ಸಾಕಷ್ಟು ಸೃಷ್ಟಿಯಾಗಿವೆ. ಇನ್ನು ನಟ ಅನಿರುದ್ಧ್ ಅವರು ಕನ್ನಡದ ಚಿತ್ರರಂಗದ ಖ್ಯಾತ ನಟ ಡಾ. ವಿಷ್ಣುವರ್ಧನ್ ಅವರ ಅಳಿಯ. ಇನ್ನು ಇವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಹೌದು ನಟ ಅನಿರುದ್ಧ್ ಅವರು ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ನಟ ಅನಿರುದ್ಧ್ ಅವರು 2001 ರಲ್ಲಿ ತೆರೆಕಂಡ ‘ಚಿಟ್ಟೆ’ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ಆದರೆ ಇವರಿಗೆ ಹೆಸರು ಮತ್ತು ಕೀರ್ತಿಯನ್ನು ತಂದುಕೊಟ್ಟಿದ್ದು ಮಾತ್ರ ‘ತುಂಟಾಟ’ ಸಿನಿಮಾ. ನಂತರ ಇವರು ಪಾಂಚಾಲಿ, ನೀನೆಲ್ಲೋ ನಾನಲ್ಲೆ, ತಮಾಷೆಗಾಗಿ, ರಾಜಸಿಂಹ ಸೇರಿದಂತೆ ಸಾಕಷ್ಟು ಕನ್ನಡದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಅಷ್ಟೇ ಅಲ್ಲದೆ ಇವರು ತಮಿಳು, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಇನ್ನು ಇವರು ಚಿತ್ರ, ಜೇಷ್ಠ, ರಾಮ ಶಾಮ ಭಾಮ ಹೀಗೆ ಮುಂತಾದ ಸಿನಿಮಾಗಳಲ್ಲಿ ಸಣ್ಣ ಸಣ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಅವರು ಜೊತೆ ಜೊತೆಯಲಿ ಎಂಬ ಧಾರಾವಾಹಿಯಲ್ಲಿ ನಾಯಕ ನಟರಾಗಿ ಅಭಿನಯಿಸಿ ಜನಪ್ರಿಯತೆಯನ್ನು ಮತ್ತಷ್ಟು ಗಳಿಸಿದ್ದಾರೆ. ಇನ್ನು ನಟ ಅನಿರುದ್ಧ್ ಅವರ ವೈಯಕ್ತಿಕ ಜೀವನಕ್ಕೆ ಬರುವುದಾದರೆ ಅವರಿಗೆ ಒಬ್ಬರು ತಂಗಿ ಕೂಡ ಇದ್ದಾರಂತೆ. ಇನ್ನು ಅವರ ತಂಗಿ ಕೂಡ ನಟಿಯಂತೆ.

ಹೌದು ಅನಿರುದ್ಧ್ ಅವರ ತಂಗಿಯ ಹೆಸರು ಅರುಂಧತಿ. ಇವರು ಕೂಡ ತಮ್ಮ ಅಣ್ಣನಂತೆ ರಂಗಭೂಮಿ ಕಲಾವಿದೆ. ರಂಗಭೂಮಿಯಿಂದ ಚಿತ್ರರಂಗಕ್ಕೆ ಬಂದವರು ಅರುಂಧತಿ. ಇನ್ನು 90ರ ದಶಕದ ವೀಕ್ಷಕರಿಗೆ ಇವರು ಯಾರು ಎಂಬುದು ಗೊತ್ತಿರುತ್ತದೆ. ಏಕೆಂದರೆ ಒಂದಿನ ಸಮಯದಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಭಿಮಾನ ಎಂಬ ಧಾರಾವಾಹಿಯಲ್ಲಿ ಅವರು ನಟಿಸಿದ್ದರು.

ಈ ಧಾರಾವಾಹಿಯಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡ ಆರುಂಧತಿ ಯಾವುದು ಜನಪ್ರಿಯತೆ ಪಡೆದರು. ಕೇವಲ ಕಿರುತೆರೆ ಎಷ್ಟು ಅಲ್ಲದೆ ಕನ್ನಡ ಚಿತ್ರರಂಗದಲ್ಲಿ ಕೂಡ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಕಾನೂರು ಹೆಗ್ಗಡತಿ, ದಾಸ್ ಭಗತ್, ಈ ಬಂಧನ, ಇಂತಿ ನಿನ್ನ ಪ್ರೀತಿಯ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅರುಂಧತಿ ಅವರು 2009ರಲ್ಲಿ ಅಶ್ವಿನ್ ನಾಯಕ್ ಎಂಬುವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಈ ದಂಪತಿಗೆ ವಿಸ್ಮಯ ಎಂಬ ಮುದ್ದಾದ ಮಗಳಿದ್ದಾಳೆ.

ಇನ್ನು ಅರುಂಧತಿ ಅವರಿಗೆ ಅಭಿಮಾನ ಎಂಬ ಧಾರವಾಹಿಯ ನಟನೆಗೆ ಆರ್ಯಭಟ ಪ್ರಶಸ್ತಿ ಕೂಡ ದೊರೆತಿದೆ. ಅಷ್ಟೇ ಅಲ್ಲದೆ ಅರ್ಥ ಎಂಬ ಸಿನಿಮಾದ ನಟನೆಗಾಗಿ ರಾಜ್ಯ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ. ಇನ್ನು ಅರುಂಧತಿ ಹಾಗೂ ಅನಿರುದ್ಧ್ ಅವರು ಒಡಹುಟ್ಟಿದವರು ಎಂದು ಅದೆಷ್ಟೋ ಜನರಿಗೆ ತಿಳಿದಿಲ್ಲ. ಇನ್ನು ಇವರು ಒಡಹುಟ್ಟಿದವರು ಎನ್ನುವುದಕ್ಕಿಂತ ಒಳ್ಳೆಯ ಗೆಳೆಯರಾಗಿ ತಮ್ಮ ಸಾಕಷ್ಟು ವಿಚಾರಗಳನ್ನು ಒಬ್ಬರನ್ನೊಬ್ಬರು ಹಂಚಿಕೊಳ್ಳುತ್ತಾರೆ. ಇನ್ನು ಇವರಿಬ್ಬರ ಮಧ್ಯೆ ಇರುವ ಅಣ್ಣ-ತಂಗಿಯ ಬಾಂಧವ್ಯ ಇದೇ ರೀತಿ ಮುಂದುವರೆಯಲಿ ಎಂದು ನಾವು ಈ ಮೂಲಕ ಹಾರೈಸೋಣ.

Leave A Reply

Your email address will not be published.