Neer Dose Karnataka
Take a fresh look at your lifestyle.

ಒಂದು ಕಾಲದಲ್ಲಿ ಬಾಡಿಗೆ ಕಟ್ಟಲು ದುಡ್ಡಿಲ್ಲದೆ ಮನೆ ಕೆಲಸ ಮಾಡಿದ ನಟಿ, ಇಂದು ಕನ್ನಡ ಟಾಪ್ ನಟಿ. ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ನಟರ ಹಾಗೂ ನಟಿಯರ ಕುರಿತಂತೆ ನಾವು ಉಡಾಫೆಯಾಗಿ ಹಲವಾರು ಬಾರಿ ಮಾತನಾಡಿಕೊಂಡು ಇರುತ್ತೇವೆ. ಅದೇನೆಂದರೆ ಅವರು ಆದಮೇಲೆ ಅಥವಾ ಅದಕ್ಕಿಂತ ಮುನ್ನ ಸುಲಭವಾದ ಜೀವನವನ್ನು ಜೀವಿಸುತ್ತಾರೆ ಅವರಿಗೆ ಏನು ಕಮ್ಮಿ ಎನ್ನುವಂತೆ ನಾವು ಮಾತನಾಡಿ ಕೊಂಡಿರುತ್ತೇವೆ. ಆದರೆ ನಿಜವಾಗಿ ಅವರು ಎಷ್ಟೋ ಕಷ್ಟಗಳನ್ನು ಹಾಗೂ ಕಠಿಣ ಪರಿಸ್ಥಿತಿಯನ್ನು ಎದುರಿಸಿದ ಮೇಲೆ ಇಂದಿನ ಸುಖದ ಜೀವನವನ್ನು ಜೀವಿಸುತ್ತಿರುವುದು ಈಗಲೂ ಕೆಲವೊಮ್ಮೆ ಹಲವಾರು ಪರಿಶ್ರಮವನ್ನು ಪಡುತ್ತಿರುತ್ತಾರೆ.

ಹೌದು ಸ್ನೇಹಿತರೆ ಇಂದಿನ ವಿಷಯದಲ್ಲಿ ನಾವು ಒಬ್ಬ ನಟಿ ಇಂದು ಚಿತ್ರರಂಗದಲ್ಲಿ ಯಶಸ್ವಿ ಹಂತವನ್ನು ತಲುಪಿದ್ದರು ಸಹ ಅವರು ಒಂದು ಕಾಲದಲ್ಲಿ ತಮ್ಮ ಮನೆ ಬಾಡಿಗೆಯನ್ನು ಕಟ್ಟಲು ಸಾಧ್ಯವಾಗದೆ ಹಣವಿಲ್ಲದೆ ಮನೆ ಓನರ್ ಬಳಿ ಕೆಲಸವನ್ನು ಮಾಡುತ್ತಿದ್ದರು ಎಂದು ನಿಮಗೆ ಗೊತ್ತಿದೆಯೇ. ಬನ್ನಿ ಆ ನಟಿ ಯಾರು ಮತ್ತು ಅವರ ಪರಿಶ್ರಮದ ಜೀವನದ ಕುರಿತಂತೆ ನಾವು ಹೇಳಲು ಹೊರಟಿದ್ದೇವೆ. ಹೌದು ಸ್ಟೇಚರೆ ಈ ನಟಿ ಕೊಡಗಿನ ಮೂಲದವರಾಗಿದ್ದು ಅಲ್ಲಿಯೇ ಶಿಕ್ಷಣವನ್ನು ಪಡೆದವರು.

ನಂತರ ಉನ್ನತ ಹಂತದ ಶಿಕ್ಷಣಕ್ಕಾಗಿ ಬೆಂಗಳೂರಿಗೆ ವರ್ಗಾವಣೆಯಾದರು. ಬೆಂಗಳೂರಿಗೆ ಬಂದ ನಂತರ ಪಿಜಿ ಒಂದರಲ್ಲಿ ಇರಲು ಪ್ರಾರಂಭಿಸಿದರು. ತಮ್ಮ ಖರ್ಚುಗಳನ್ನು ತಂದೆ-ತಾಯಿಯ ಮೇಲೆ ಹೊರೆ ಹಾಕದೆ ಸ್ವಾಭಿಮಾನಿಯಾಗಿ ತಮ್ಮ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಿದ್ದರು ಈಕೆ. ಇವರಿಗೆ ಪ್ರತಿ ತಿಂಗಳ ಪಿಜಿ ಯ ಹಣವನ್ನು ಕಟ್ಟಲು ಸಾಧ್ಯವಾಗುತ್ತಿರಲಿಲ್ಲ. ಇದಕ್ಕಾಗಿ ಅವರು ತಮ್ಮ ಹೆತ್ತವರು ಬಳಿ ಹಣವನ್ನು ಕೇಳುತ್ತಿದ್ದರೆ ಅವರು ಕೊಡುತ್ತಿದ್ದರು ಏನೋ ಆದರೆ ಅವರು ಎಂದಿಗೂ ಕೇಳಲಿಲ್ಲ. ಬಾಡಿಗೆಯ ಬದಲಾಗಿ ಅವರ ಮನೆಯಲ್ಲಿ ಕೆಲಸ ಮಾಡಿಕೊಂಡು ಇರುತ್ತಿದ್ದರು ಇದರ ಕಾರಣದಿಂದಾಗಿ ಮನೆಯ ಓನರ್ ಬಾಡಿಗೆ ಏನು ಕೇಳುತ್ತಿರಲಿಲ್ಲ.

ಒಮ್ಮೆ ಇವರು 2014 ರ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಯೋಚಿಸಿದರು. ಇವರ ಸ್ನೇಹಿತರು ಕೂಡ ಇವರಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಒತ್ತಾಯಿಸಿದರು. ನಂತರ ಎಲ್ಲ ಸ್ನೇಹಿತರ ಒತ್ತಾಯದ ಮೇರೆಗೆ 2014 ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಲು ಇವರು ಸಜ್ಜಾಗಿ ಅದರಲ್ಲಿ ವಿಜೇತೆ ಕೂಡ ಆದರೂ. 2014 ರ ಮಿಸ್ ಕರ್ನಾಟಕ ಕಿರೀಟ ಇವರ ಮುಡಿಗೇರಿತು. ನಂತರ ಕನ್ನಡ ಕಿರುತೆರೆ ಇತಿಹಾಸದ ದೊಡ್ಡ ಹಾಗೂ ಶ್ರೀಮಂತ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಕೂಡ ಈಕೆ ಭಾಗವಹಿಸಿ ಅಲ್ಲಿ ಕೂಡ ಗಮನಾರ್ಹ ಪ್ರದರ್ಶನ ಮಾಡಿದರು.

ಇಷ್ಟೆಲ್ಲಾ ಕಷ್ಟಪಟ್ಟು ಸ್ವಾಭಿಮಾನದ ಮೂಲಕ ಸಾಧನೆ ಮಾಡಿರುವ ನಟಿ ಇನ್ಯಾರೂ ಅಲ್ಲ ಸ್ನೇಹಿತರೆ ಅವರೆ ಕೊಡಗಿನ ಮೂಲದವರಾದ ಕೃಷಿ ತಾಪಂಡ. ಹೌದು ಸ್ನೇಹಿತರೆ ಬಿಗ್ ಬಾಸ್ ಖ್ಯಾತಿಯ ಕ್ರಿಷಿ ತಾಪಂಡ ತಮ್ಮ ಜೀವನದಲ್ಲಿ ಇಷ್ಟೊಂದು ಕಷ್ಟಗಳನ್ನು ಕೊಟ್ಟು ನಂತರ ಈಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡಕ್ಕಾಗಿ ಒಂದನ್ನು ಒತ್ತಿ ಎಂಬ ಚಿತ್ರದಲ್ಲಿ ನಟಿಸಿ ಕೂಡ ಕನ್ನಡ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ.

ಇವರನ್ನು ನೋಡಿದರೆ ಯಾವ ಕಷ್ಟವನ್ನು ಪಟ್ಟಿರಲಿಲ್ಲ ಎಂಬ ಯೋಚನೆ ನಮ್ಮ ಮನಸ್ಸಿಗೆ ಬರುವುದು ಆದರೆ ಅವರು ಪಟ್ಟ ಕಷ್ಟ ಎಂದು ಅವರ ಗೆಲುವಿಗೆ ಸಾಕ್ಷಿಯಾಗಿದೆ. ಇತ್ತೀಚಿನ ಕೆಲವು ಸಂದರ್ಶನವೊಂದರಲ್ಲಿ ಸ್ವತಹ ಕೃಷಿ ಅವರೇ ಈ ಕುರಿತಂತೆ ನಾನು ನನ್ನ ತಂದೆ ತಾಯಿಗಳಲ್ಲಿ ಕೂಡ ಹೇಳಿಲ್ಲ ಎಂಬುದಾಗಿ ಹೇಳಿದ್ದಾರೆ. ಕೃಷಿ ತಾಪಂಡ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಮಿಸ್ ಮಾಡದೆ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.