Neer Dose Karnataka
Take a fresh look at your lifestyle.

ಚಹಾ ಜೊತೆ ಪಾರ್ಲೆಜಿ ಬಿಸ್ಕೆಟ್ ತಿಂದ ಪ್ರತಿಯೊಬ್ಬರೂ ಇದನ್ನು ನೋಡಲೇಬೇಕು! ಏನಾಗಿದೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಈ ಜಗತ್ತಿನಲ್ಲಿ ಕೆಲವೊಂದು ವಸ್ತುಗಳು ಹಾಗೂ ಪದಾರ್ಥಗಳು ಮೊದಲಿನಿಂದಲೂ ನಾವು ನೋಡಿಕೊಂಡು ಬಂದಿರುತ್ತೇವೆ. ಎಷ್ಟೋ ಜನ ವಯಸ್ಸಾದರೂ ಸಹ ಅದು ಇನ್ನೂ ಕೂಡ ಈಗಾಗಲೇ ಮಾರುಕಟ್ಟೆಗೆ ಚಾಲ್ತಿಯಲ್ಲಿರುವುದನ್ನು ಕೂಡ ನಾವು ನೋಡಿರುತ್ತೇವೆ. ನಾವು ಚಿಕ್ಕವರಿದ್ದಾಗಲೂ ಆ ವಸ್ತುವಿಗೆ ಎಷ್ಟು ಜನಪ್ರಿಯತೆ ಇತ್ತು ಈಗಲೂ ಕೂಡ ವಸ್ತುವಿಗೆ ಅಷ್ಟೆ ಜನಪ್ರಿಯತೆ ಇದೆ. ಈಗಲೂ ಕೂಡ ಆ ವಸ್ತುವನ್ನು ಬಳಸಲು ಜನರು ಮುಗಿಬೀಳುತ್ತಾರೆ. ಗೆಸ್ ಮಾಡಿ ಸ್ನೇಹಿತರೆ ಆ ವಸ್ತು ಯಾವುದು ಇರಬಹುದೆಂದು.

ನೀವು ಕರೆಕ್ಟಾಗಿ ಗೆಸ್ ಮಾಡಿದ್ದರೂ ಇಲ್ವೋ ಗೊತ್ತಿಲ್ಲ ನಾವೇ ಹೇಳಿಬಿಡುತ್ತೇವೆ ಆ ವಸ್ತು ಯಾವುದೆಂದು. ಹಾಗಿದ್ದರೆ ಆ ವಸ್ತುವು ಇನ್ಯಾವುದು ಅಲ್ಲ ನಾವು ಚಿಕ್ಕವಯಸ್ಸಿನಿಂದಲೂ ಈ ಹಾಗೂ ಕಾಫಿ ಜೊತೆಗೆ ತಿನ್ನುತ್ತ ಬರುತ್ತಿರುವ ಪಾರ್ಲೆ-ಜಿ ಬಿಸ್ಕೆಟ್. ಹೌದು ಸ್ನೇಹಿತರೆ ಪಾರ್ಲೆ-ಜಿ ಬಿಸ್ಕೆಟ್ ಅನ್ನು ತಿನ್ನದೇ ಇರುವ ಭಾರತೀಯನೇ ಇಲ್ಲ ಎಂದು ಹೇಳಬಹುದು. ಪಾರ್ಲೆ-ಜಿ ಬಿಸ್ಕೆಟ್ ನಮ್ಮ ಭಾರತೀಯರ ಜನಜೀವನದಲ್ಲಿ ಒಂದು ಭಾಗವೇ ಆಗಿಹೋಗಿದೆ. ಬಡವರಿಂದ ಬಡವರ ವರೆಗೂ ಸಹ ಪಾರ್ಲೆ-ಜಿ ಬಿಸ್ಕೆಟ್ ಅನ್ನು ತಿನ್ನುತ್ತಾರೆ ಶ್ರೀಮಂತರೂ ಕೂಡ ಪಾರ್ಲೆ-ಜಿ ಬಿಸ್ಕೆಟ್ ಅನ್ನು ಉತ್ತಮ ಚಹ ಸಮಯದಲ್ಲಿ ಖಂಡಿತ ತಿಂದೆ ತಿಂದಿರುತ್ತಾರೆ.

ಆದರೆ ಪಾರ್ಲೆಜಿ ಇತಿಹಾಸದ ಕುರಿತಂತೆ ನಿಮಗೆಷ್ಟು ಗೊತ್ತು ಸ್ನೇಹಿತರೆ. ಪಾರ್ಲೆ-ಜಿ ಯಲ್ಲಿ ಏನೇನನ್ನು ಹಾಕಿರುತ್ತಾರೆ ಎಂಬುದನ್ನು ನೀವು ಅದರ ಪೊಟ್ಟಣವನ್ನು ನೋಡಿ ಕಲಿಯಬಹುದು ಅಥವಾ ಅದರ ಬಗ್ಗೆ ತಿಳಿದುಕೊಳ್ಳಬಹುದು. ಆದರೆ ಅದು ಪ್ರಾರಂಭವಾಗಲು ಹಾಗೂ ಪ್ರಾರಂಭ ವಾದಂತಹ ಇತಿಹಾಸವನ್ನು ತಿಳಿಯಲು ನಾವು ನಿಮಗೆ ಇಂದು ವಿವರವಾಗಿ ಹೇಳುತ್ತೇವೆ ಇದನ್ನು ತಪ್ಪದೇ ಓದಿ ಪಾರ್ಲೆ-ಜಿ ಇತಿಹಾಸವನ್ನು ತಿಳಿದುಕೊಳ್ಳಿ.

ಪಾರ್ಲೆ-ಜಿ ಗೆ ಹಲವಾರು ವರ್ಷಗಳ ಇತಿಹಾಸವಿದ್ದು, ಇದು ಬ್ರಿಟಿಷರ ಕಾಲಕ್ಕೂ ಮುನ್ನ ಬಂದಂತಹ ಒಂದು ತಿನ್ನುವ ವಸ್ತು ಎಂದೇ ಹೇಳಬಹುದು. ಇದನ್ನು ತಯಾರಿಸಿದವರು ನರೋತ್ತಮ್ ಮೋಹನ್ಲಾಲ್ ಚೌಧರಿ ಎನ್ನುವವರು. ಮೋಹನ್ ಲಾಲ್ ಚೌಧರಿಯವರು ಮೊದಲು ಚಾಕ್ಲೇಟ್ ಹಾಗೂ ಕ್ಯಾಂಡಿಗಳನ್ನು ಮಾರಿ ಸಾಕಷ್ಟು ಲಾಭವನ್ನು ಪಡೆಯುತ್ತಿದ್ದರು. ಚಾಕ್ಲೆಟ್ ಹಾಗೂ ಕ್ಯಾಂಡಿಗಳನ್ನು ಮಾರಿ ಅವರು ಎಷ್ಟು ಲಾಭವನ್ನು ಸಂಪಾದಿಸುತ್ತಿದ್ದರು ಎಂದರೆ ಆ ಕಾಲಕ್ಕೆ ವರ್ಷಕ್ಕೆ 60 ಸಾವಿರ ರೂಪಾಯಿಗಳನ್ನು ಬರೋಬ್ಬರಿ ಯಾಗಿ ಸಂಪಾದಿಸುತ್ತಿದ್ದರು ಮೋಹನ್ ಲಾಲ್ ಚೌಧರಿ.

ಹೌದು ಸ್ನೇಹಿತರೆ ಇವರ ಕ್ಯಾಂಡಿ ಹಾಗೂ ಚಾಕ್ಲೇಟ್ ಗಳಿಗೆ ಬ್ರಿಟಿಷರ ಕಾಲದಲ್ಲಿ ಸಾಕಷ್ಟು ಮಾನ್ಯತೆ ಹಾಗೂ ಬೇಡಿಕೆ ಇತ್ತು ಹಾಗಾಗಿ ಅವರ ವ್ಯಾಪಾರ ಕೂಡ ಲಾಭವಾಗಿ ನಡೆದಿತ್ತು. ನಂತರ ಕಾಲಕಳೆದಂತೆ ಇವರ ಚಾಕ್ಲೆಟ್ ಹಾಗೂ ಕೊಂಡಿಗಳಿಗೆ ಪ್ರತಿಸ್ಪರ್ಧೆ ಬಂದಿತ್ತು ಹಾಗಾಗಿ ಇವರು ಇನ್ನೇನಾದರೂ ಹೊಸ ತಿನಿಸುಗಳ ಮೂಲಕ ಮಾರುಕಟ್ಟೆಯಲ್ಲಿ ತಮ್ಮ ಪ್ರಭಾವವನ್ನು ಹೆಚ್ಚಿಸಿ ಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು. ಅದಕ್ಕಾಗಿ ಅವರು ಚಾಕ್ಲೇಟ್ ಕ್ಯಾಂಡಿ ಗಳಲ್ಲಿ ಬರುತ್ತಿದ್ದ ಲಾಭದಲ್ಲಿ ಬಿಸ್ಕೆಟ್ ಗಳನ್ನು ಮಾಡಲು ಪ್ರಾರಂಭಿಸಿದರು.

ಬರಬರುತ್ತಾ ಜನರಿಗೆ ಹಾಗೂ ಗ್ರಾಹಕರಿಗೆ ಮೋಹನ್ಲಾಲ್ ಚೌಧರಿಯವರ ಬಿಸ್ಕೆಟ್ ಗಳು ಬಹಳಷ್ಟು ಇಷ್ಟವಾಗಲು ಪ್ರಾರಂಭವಾಗಿ ಅವರಿಗೆ ಅದರಲ್ಲಿ ಕೂಡ ಲಾಭ ದೊರೆಯಲು ಪ್ರಾರಂಭವಾಯಿತು. ಇದರಿಂದ ಉತ್ತೇಜಿತರಾದ ಮೋಹನ್ಲಾಲ್ ಚೌಧರಿಯವರು ವಿದೇಶಗಳಿಗೆ ಹೋಗಿ ಹೊಸಹೊಸದು ಬಿಸ್ಕೆಟ್ ಮಾಡುವ ಮಿಷನ್ ಗಳನ್ನು ತಂದು ಇನ್ನು ವೈವಿಧ್ಯಮಯವಾಗಿ ಇನ್ನಷ್ಟು ರುಚಿ ಬರುವಂತೆ ಬಿಸ್ಕೆಟ್ಟನ್ನು ತಯಾರಿಸಲು ಪ್ರಾರಂಭಿಸಿದರು. ಅದರ ಪರಿಣಾಮವಾಗಿ ಅವರು ಎಷ್ಟೊಂದು ಯಶಸ್ವಿಯಾದರು ಎಂದರೆ ಪ್ರತಿದಿನ 450 ಮಿಲಿಯನ್ ಬಿಸ್ಕೆಟ್ ಗಳನ್ನು ತಯಾರಿ ಮಾಡುವಷ್ಟು ಇದು ಜನಪ್ರಿಯವಾಯಿತು. ಇನ್ನು ಈ ಬಿಸಿಗೆ ಪಾರ್ಲೆ-ಜಿ ಎಂದು ಹೆಸರಿಟ್ಟರು. ಜಿ ಎಂದರೆ ಜೀನಿಯಸ್ ಎಂದು ಅರ್ಥವಾಗಿತ್ತು. ಇನ್ನು ಈ ಪಾರ್ಲೆ-ಜಿ ಬಿಸ್ಕೆಟ್ ನಲ್ಲಿ ಇನ್ನೊಂದು ಸುದ್ದಿಯಾಗಿರುವ ಅಂಶವೇನೆಂದರೆ. ಇದರ ಪಟ್ಟಣದಲ್ಲಿರುವ ಮಗುವಿನ ಭಾವಚಿತ್ರ.

ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋದಲ್ಲಿರುವ ಮಗುವಿನ ಭಾವಚಿತ್ರವನ್ನು ಹೋಲಿಸಿಕೊಂಡು ಇದು ಅವರ ಭಾವಚಿತ್ರ ಅವರ ಭಾವಚಿತ್ರ ಎಂಬ ಗಾಳಿಸುದ್ದಿಗಳು ಹರಡುತ್ತಿದ್ದವು. ಆದರೆ ಇದು ನಿಜವಾಗಿ ಯಾರ ಭಾವಚಿತ್ರ ಅಲ್ಲ. 1960 ಎಲ್ಲಿ ಚಿತ್ರಕಲೆಗಾರರು ಒಬ್ಬರು ಈ ಪೇಂಟಿಂಗ್ ಅನ್ನು ಬಿಡಿಸಿದ್ದರು ಇದು ಅವರ ಕಲ್ಪನೆಯ ಹೊರತು ಯಾರ ಭಾವಚಿತ್ರವೂ ಅಲ್ಲ. ಇನ್ನು ಪಾರ್ಲೆ-ಜಿ ಬಿಸ್ಕೆಟ್ 2003 ರಲ್ಲಿ ಜನಪ್ರಿಯ ಬಿಸ್ಕೆಟ್ ಆಗಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಈಗಲೂ ಕೂಡ ಭಾರತ ಹಾಗು ಪರದೇಶಗಳಲ್ಲಿ ಕೂಡ ಬಹುಬೇಡಿಕೆ ಬಿಸ್ಕೆಟ್ ಆಗಿ ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದೆ. ಪಾರ್ಲೆ-ಜಿ ನಿಮ್ಮ ಫೇವರಿಟ್ ಬಿಸ್ಕೆಟ್ ಕೂಡ ಆಗಿದ್ದಾರೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ.

Comments are closed.