Neer Dose Karnataka
Take a fresh look at your lifestyle.

ಒಂದು ಕಾಲದ ಟಾಪ್ ನಟಿ ಸೌಂದರ್ಯರವರ ಮಗು ಇಹಲೋಕ ತ್ಯಜಿಸಿದ್ದು ಹೇಗೆ ಗೊತ್ತೇ?? ನಿಮಗೆ ತಿಳಿಯದ ಅಸಲಿ ರಹಸ್ಯ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅದೆಷ್ಟೇ ನಟಿಯರು ಬಂದುಹೋದರು ಅವರ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ. ಇವರ ನಟನೆಯ ಅಂದ ಚಂದ ನೋಡಲು ಎರಡು ಕಣ್ಣು ಸಾಲದು. ಹೆಸರಿಗೆ ತಕ್ಕಂತೆ ಸೌಂದರ್ಯವತಿ ಮಾಡುವ ಪಾತ್ರದಲ್ಲಿ ತನ್ನ ನಟನಾ ಶೈಲಿಯನ್ನು ಎಲ್ಲರಿಗೂ ಮೆಚ್ಚುವಂತೆ ಮಾಡಿ ಅಭಿನಯ ವಿಶಾರದೆ ಎಂಬಂತೆ ನಟನೆ ಮಾಡಿ ಕೇವಲ ಕನ್ನಡ ಮಾತ್ರವಲ್ಲದೆ ಭಾರತೀಯ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿ ಎಲ್ಲಾ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ.

ಹೌದು ನಾವು ಏನು ಮಾತನಾಡಲು ಹೊರಟಿರುವುದು ನ ಭೂತೋ ನ ಭವಿಷ್ಯತಿ ಎಂಬ ನಟಿ ಸೌಂದರ್ಯ ರವರ ಕುರಿತಂತೆ. ಹೌದು ಕನ್ನಡ ಚಿತ್ರರಂಗ ಹಿಂದೆಂದೂ ಕಂಡಿರದ ಮುಂದೆ ಎಂದು ಕಾಣಲಾಗದಂತಹ ನಟಿ ಸೌಂದರ್ಯ ಎಂದರೆ ತಪ್ಪಾಗಲಾರದು. ಕೇವಲ ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿ ಕೂಡ ಚಿತ್ರರಂಗದಲ್ಲಿ ತಮ್ಮ ಗುರುತನ್ನು ಸ್ಥಾಪಿಸಿದವರು. ಕನ್ನಡ ತಮಿಳು ತೆಲುಗು ಹಿಂದಿ ಮಲಯಾಳಂ ಯಾವ ಚಿತ್ರರಂಗದಲ್ಲೂ ಬಿಡದೆ ಎಲ್ಲಾ ಭಾಷೆಯಲ್ಲಿ ಕೂಡ ನಟಿಸಿ ಅಭಿಮಾನಿಗಳ ಮನಸೂರೆ ಮಾಡಿದವರು ನಟಿ ಸೌಂದರ್ಯ.

ಅವರ ನಟನೆಯನ್ನು ನೋಡಿ ಮನಸೋಲದವರಿಲ್ಲ. ಕನ್ನಡ ಚಿತ್ರರಂಗದಲ್ಲಿ ಸಿಪಾಯಿ ನಾನು ನನ್ನ ಹೆಂಡ್ತಿರು ಶ್ರೀ ಮಂಜುನಾಥ ಆಪ್ತಮಿತ್ರ ಹೀಗೆ ಹಲವಾರು ಚಿತ್ರಗಳ ಅವರ ನಟನೆ ಕನ್ನಡಿಗರಲ್ಲಿ ಇಂದಿಗೂ ಕೂಡ ಅವರ ಮನಸ್ಸಿನಲ್ಲಿ ಜೀವಂತವಾಗಿ ಉಳಿಯುವಂತೆ ಮಾಡಿದ್ದಾರೆ. ಇಂದಿಗೂ ಕೂಡ ಅನೇಕ ನಟಿಯರು ನಟಿ ಸೌಂದರ್ಯ ರವರನ್ನು ತಮ್ಮ ಸ್ಪೂರ್ತಿಯನ್ನಾಗಿ ಇಟ್ಟುಕೊಂಡು ಅವರ ತರಹ ನಟನೆ ಮಾಡಲು ಪ್ರಯತ್ನಿಸುತ್ತಾರೆ.

ಹದಿನಾರು ವರ್ಷಗಳ ಸಿನಿಮಾ ಜರ್ನಿಯಲ್ಲಿ ನಟಿ ಸೌಂದರ್ಯ ರವರ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಬಹುಬೇಡಿಕೆ ನಟಿಯಾಗಿ ಹಾಗೂ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದಂತಹ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ನಟಿ ಸೌಂದರ್ಯ ಎಂದಾಕ್ಷಣ ನಮಗೆ ನೆನಪಾಗುವುದು ಅವರು ಕೊನೆಯ ಚಿತ್ರ ಆಪ್ತಮಿತ್ರದ ನಾಗವಲ್ಲಿ ಪಾತ್ರ. ಆ ಪಾತ್ರವನ್ನು ಸರಿಗಟ್ಟಿ ಸುವಂತಹ ನಟಿ ಇಡೀ ಭಾರತೀಯ ಚಿತ್ರರಂಗದಲ್ಲಿ ಯಾರು ಇಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು. ಇನ್ನು ನಟಿ ಸೌಂದರ್ಯ ರವರ ವೈವಾಹಿಕ ಜೀವನವನ್ನು ನಾವು ನೋಡಿದರೆ ಅವರು ನಮ್ಮನ್ನೆಲ್ಲ ಬಿಟ್ಟು ಹೋಗುವ ಕೆಲವೇ ತಿಂಗಳ ಮುಂಚೆ ರಘು ಎಂಬುವವರನ್ನು ಮದುವೆಯಾದರು. ಅವರು ನಮ್ಮನ್ನೆಲ್ಲ ಬಿಟ್ಟು ಹೋದ ದಿನ ಏನಾಯಿತು ಎಂಬುದನ್ನು ನಿಮಗೆ ಸಂಪೂರ್ಣವಾಗಿ ಹೇಳುತ್ತೇವೆ ಬನ್ನಿ.

ಮದುವೆಯಾದ ಕೆಲವೇ ತಿಂಗಳಲ್ಲಿ ನಟಿ ಸೌಂದರ್ಯ ರವರು ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದರು. ಹೌದು ಬೆಂಗಳೂರಿನಿಂದ ಹೈದರಾಬಾದ್ಗೆ ಖಾಸಗಿ ವಿಮಾನದಲ್ಲಿ ಪ್ರಯಾಣಿಸುತ್ತಿರುವಾಗ ಅವರ ವಿಮಾನ ಆಕಸ್ಮಿಕಕ್ಕೆ ತುತ್ತಾಗಿ ನಮ್ಮನ್ನೆಲ್ಲ ಬಿಟ್ಟು ಹೋದರು ನಟಿ ಸೌಂದರ್ಯ ರವರು. ಆದರೆ ಇಲ್ಲಿ ನಿಮಗೆ ಗೊತ್ತಿಲ್ಲದ ಒಂದು ವಿಷಯವನ್ನು ಹೇಳಲು ಹೊರಟಿದ್ದೇವೆ.

ಹೌದು ನಟಿ ಸೌಂದರ್ಯ ರವರು ನಮ್ಮನ್ನೆಲ್ಲ ಬಿಟ್ಟು ಹೋಗುವಾಗ 7 ತಿಂಗಳ ಗರ್ಭಿಣಿಯಾಗಿದ್ದರು. ಮಗುವನ್ನು ಪಡೆದು ತಾಯಿಯಾಗಿ ಸಾರ್ಥಕ ಜೀವನವನ್ನು ನಡೆಸುವ ಮೊದಲೇ ನಟಿ ಸೌಂದರ್ಯ ರವರು ಎಲ್ಲರಿಗೂ ವಿದಾಯ ಹೇಳಿ ಇಹ ಲೋಕವನ್ನು ತ್ಯಜಿಸಿ ಕಣ್ಮರೆಯಾದರು. ಆದರೆ ಇಂದಿಗೂ ಸಹ ಅವರ ನಟನೆಯ ಚಿತ್ರಗಳ ಮೂಲಕ ಪ್ರೇಕ್ಷಕರಲ್ಲಿ ಹಾಗೂ ಅವರನ್ನು ಪ್ರೀತಿಸುವ ಅಭಿಮಾನಿಗಳ ಮನಸ್ಸಲ್ಲಿ ಜೀವಂತವಾಗಿದ್ದಾರೆ. ನಟಿ ಸೌಂದರ್ಯ ರವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಮಿಸ್ ಮಾಡದೇ ಹಂಚಿಕೊಳ್ಳಿ.

Comments are closed.