Neer Dose Karnataka
Take a fresh look at your lifestyle.

ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ರವರನ್ನು ಮದುವೆಯಾಗುತ್ತಿರುವ ಟಾಪ್ ಕ್ರಿಕೆಟಿಗ ಯಾರು ಗೊತ್ತೇ??

5

ನಮಸ್ಕಾರ ಸ್ನೇಹಿತರೇ ನೀವು ತಮಿಳಿನ ಶಿವಾಜಿ, ರೋಬೋ, ಐ ಸಿನಿಮಾಗಳನ್ನ ನೋಡಿರುತ್ತಿರಿ ಎಂದರೇ ಈ ಮನುಷ್ಯನ ಬಗ್ಗೆ ಖಂಡಿತ ತಿಳಿದಿರುತ್ತಿರಿ‌. ಹೌದು ಬೇರೆ ಯಾರೂ ಅಲ್ಲ, ತಮಿಳಿನ ಸೂಪರ್ ಸ್ಟಾರ್ ನಿರ್ದೇಶಕ ಶಂಕರ್. ರಜನಿ ಕಾಂತ್, ಕಮಲ್ ಹಾಸನ್, ವಿಕ್ರಂ, ವಿಜಯ್, ಅಜಿತ್ ಮುಂತಾದ ಸೂಪರ್ ಸ್ಟಾರ್ ನಟರಿಗೆ ನಿರ್ದೇಶನ ಮಾಡಿದ್ದ ಶಂಕರ್, ಸದ್ಯ ಮಗಳ ವಿವಾಹ ಸಂಭ್ರಮದಲ್ಲಿ ಬ್ಯುಸಿಯಾಗಿದ್ದಾರೆ.

ಹೌದು ತಮ್ಮ ಮುದ್ದಿನ ಮಗಳು ಐಶ್ವರ್ಯಾ ಶಂಕರ್ ಅವರನ್ನು ಭಾರತದ ಕ್ರಿಕೇಟಿಗರೊಬ್ಬರಿಗೆ ಕೊಟ್ಟು ಮದುವೆ ಮಾಡುತ್ತಿದ್ದಾರೆ. ಇತ್ತಿಚೆಗೆ ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಕೇವಲ ಆಪ್ತರಷ್ಟೇ ಮದುವೆಗೆ ಸಾಕ್ಷಿಯಾಗಿದ್ದಾರೆ. ಅಷ್ಟಕ್ಕೂ ಸ್ಟಾರ್ ನಿರ್ದೇಶಕರ ಮಗಳ ಕೈ ಹಿಡಿದ ಕ್ರಿಕೇಟಿಗ ಯಾರು ಎಂಬುದನ್ನ ತಿಳಿಸುತ್ತೆವೆ ಬನ್ನಿ‌.

ಆತ ಬೇರಾರೂ ಅಲ್ಲ, ರೋಹಿತ್ ದಾಮೋದರನ್. ಸದ್ಯ ಪಾಂಡಿಚೇರಿ ರಣಜಿ ಕ್ರಿಕೇಟ್ ತಂಡದ ನಾಯಕ. ರೋಹಿತ್ ತಂದೆ ದಾಮೋದರನ್ ದೊಡ್ಡ ಉದ್ಯಮಿಯಾಗಿದ್ದು, ತಮಿಳುನಾಡು ಪ್ರೀಮಿಯರ್ ಲೀಗ್ ನ ಮಧುರೈ ಪ್ಯಾಂಥರ್ಸ್ ತಂಡದ ಮಾಲೀಕರಾಗಿದ್ದಾರೆ. ಮೊದಮೊದಲು ಅವಕಾಶ ಸಿಗದೇ ಶ್ರೀಲಂಕಾ ತಂಡಕ್ಕೆ ವಲಸೆ ಹೋಗಿದ್ದ ರೋಹಿತ್, ನಂತರ ತನ್ನ ತಂದೆಯ ಪ್ರಭಾವ ಬಳಸಿ ಪಾಂಡಿಚೇರಿಗೆ ವಾಪಸ್ ಆದರು. ಸದ್ಯ ಆ ರಣಜಿ ತಂಡದ ನಾಯಕರಾಗಿದ್ದಾರೆ. ಇನ್ನು ಶಂಕರ್ ರವರ ಗಳು ಐಶ್ವರ್ಯ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಕ್ರಿಕೇಟರ್ ರೋಹಿತ್ ದಾಮೋದರನ್ ಹಾಗೂ ವೈದ್ಯೆ ಐಶ್ವರ್ಯ ಶಂಕರ್ ರವರ ವಿವಾಹ ಜೀವನ ಸುಖಕರವಾಗಿರಲೆಂದು ಈ ಮೂಲಕ ಹಾರೈಸೋಣ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ

Leave A Reply

Your email address will not be published.