Neer Dose Karnataka
Take a fresh look at your lifestyle.

ಬಿಗ್ ಬಾಸ್ ಖ್ಯಾತಿಯ ಅರವಿಂದ್ ರವರ ಮೊದಲ ಲವ್ ಯಾರು ಎಂಬುದು ನಿಮಗೆ ಗೊತ್ತಾ?? ದಿವ್ಯ ಅಲ್ಲ, ಮತ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಈಗ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ವೀಕ್ಷಕರ ಮನಸ್ಸಿನಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದೆ. ಹಲ್ಲಿನ ಸ್ಪರ್ಧಿಗಳ ಆಟೋಟಗಳು ಹಾಗೂ ವಾರಾಂತ್ಯದಲ್ಲಿ ಬರುವ ಕಿಚ್ಚ ಸುದೀಪ್ ರವರ ವಿವಿಧ ಶೈಲಿಯ ನಿರೂಪಣೆ ಹೀಗೆ ಹಲವಾರು ವೈವಿಧ್ಯಮಯ ವಿಷಯಗಳಿಂದಾಗಿ ರಿಯಾಲಿಟಿ ಶೋ ಕನ್ನಡ ಕಿರುತೆರೆಯಲ್ಲಿ ಅತ್ಯಂತ ದೊಡ್ಡ ಶ್ರೀಮಂತ ಹಾಗೂ ವಿಭಿನ್ನ ಶೈಲಿಯ ರಿಯಾಲಿಟಿ ಶೋ ಆಗಿ ರೂಪುಗೊಂಡಿದೆ ಎಂದು ಹೇಳಬಹುದು.

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 8 ಮೊದಲಿಗೆ ಲಾಕ್ ಡೌನ್ ನಿಯಮಗಳಿಂದಾಗಿ ರದ್ದಾಗುವ ಮೂಲಕ ಅದರ ಪ್ರೇಕ್ಷಕರಿಗೆ ಸಾಕಷ್ಟು ಬೇಸರವನ್ನುಂಟು ಮಾಡಿತ್ತು. ನಂತರ ಕೆಲವು ತಿಂಗಳುಗಳ ಅಂತರದಲ್ಲೇ ಮತ್ತೊಮ್ಮೆ ಸೆಕೆಂಡ್ ಇನ್ನಿಂಗ್ಸ್ ಪ್ರಾರಂಭವಾಗಿ ಈಗಾಗಲೇ ತನ್ನ ಪ್ರೇಕ್ಷಕರನ್ನು ಮತ್ತೊಮ್ಮೆ ನಗುಮುಖದಲ್ಲಿ ನೋಡುವಂತೆ ಮಾಡಿದೆ. ಬಿಗ್ ಬಾಸ್ ನ ಸ್ಪರ್ಧಿಗಳು ಕೂಡ ಅಷ್ಟೇ ತಮ್ಮ ಚಟುವಟಿಕೆಗಳ ಮೂಲಕ ಅವರ ಅಭಿಮಾನಿಗಳು ಹಾಗೂ ವೀಕ್ಷಕರ ಮನಸ್ಸಲ್ಲಿ ಅವರ ಕುರಿತಂತೆ ಸಾಕಷ್ಟು ಅಭಿಪ್ರಾಯಗಳು ಮೂಡುವಂತೆ ಮಾಡುತ್ತಾರೆ,

ಅದು ಮಾತ್ರವಲ್ಲದೆ ಅವರ ನೈಜತೆಯನ್ನು ಕೂಡ ವೀಕ್ಷಕರು ಮುಂದೆ ತೆರೆದಿಡುವಂತೆ ಮಾಡುತ್ತಿದ್ದಾರೆ. ಇನ್ನು ಈಗ ಬಿಗ್ಬಾಸ್ ಮನೆಯಲ್ಲಿ ಸಾಕಷ್ಟು ಸುದ್ದಿಯಾಗುತ್ತಿರುವ ಜೋಡಿ ಎಂದರೆ ಅದು ಅರವಿಂದ ಕೆಪಿ ಹಾಗೂ ದಿವ್ಯ ಉರುಡುಗ. ಈ ಸೀಸನ್ ಪ್ರಾರಂಭವಾದಾಗಿನಿಂದಲೂ ಇವರಿಬ್ಬರ ನಡುವೆ ಇರುವ ಸ್ನೇಹ ಅಥವಾ ಪ್ರೇಮ ಸಂಬಂಧ ಕೇವಲ ವಾಹಿನಿಯ ವೀಕ್ಷಕರಲ್ಲಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸಾಕಷ್ಟು ಸುದ್ದಿಯನ್ನು ಉಂಟುಮಾಡಿದ್ದು ಇವರಿಬ್ಬರ ಜೋಡಿಗೆ ಸಾಕಷ್ಟು ಅಭಿಮಾನಿಗಳು ಕೂಡ ಈಗಾಗಲೇ ಇದ್ದಾರೆ.

ಅರವಿಂದ್ ಹಾಗೂ ದಿವ್ಯ ಬಿಗ್ ಬಾಸ್ ಮನೆಯಲ್ಲಿ ಜೊತೆಜೊತೆಯಾಗಿ ಕಾಣಿಸಿಕೊಳ್ಳುವುದು ಹಾಗೂ ಒಬ್ಬರನ್ನೊಬ್ಬರು ಬೇರೆಯವರ ಮುಂದೆ ಬಿಟ್ಟುಕೊಡದೆ ಇರುವ ವಿಷಯ ಇದು ಅವರಿಬ್ಬರ ನಡುವೆ ಏನೋ ಲವ್ವಿಡವ್ವಿ ಇರುವುದನ್ನು ಮತ್ತೆ ಮತ್ತೆ ಸಾರಿ ಹೇಳುತ್ತಿದೆ. ಪ್ರತಿಯೊಂದು ಟಾಸ್ಕ್ ಗಳಲ್ಲಿ ಕೂಡ ಇಬ್ಬರೂ ಜೊತೆಯಾಗಿ ಭಾಗವಹಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇವರ ಜೋಡಿ ಎಷ್ಟರಮಟ್ಟಿಗೆ ಪ್ರಸಿದ್ಧ ತೆಯನ್ನು ಪಡೆದುಕೊಂಡಿತ್ತು ಎಂದರೆ ಬಿಗ್ ಬಾಸ್ ಮನೆಯಿಂದ ಹೊರ ಬಂದಾಕ್ಷಣ ಖಂಡಿತವಾಗಿ ಇವರು ಪರಸ್ಪರ ವಿವಾಹವಾಗುತ್ತಾರೆ ಎಂಬಷ್ಟರ ಮಟ್ಟಿಗೆ ಸುದ್ದಿಯಾಗಿತ್ತು.

ಇನ್ನು ಇತ್ತೀಚಿನ ಸಂಚಿಕೆಗಳಲ್ಲಿ ಅರವಿಂದ್ ಕೆಪಿ ಅವರು ತಮ್ಮ ಮೊದಲ ಗರ್ಲ್ಫ್ರೆಂಡ್ ಕುರಿತಂತೆ ಮಾತನಾಡಿದ್ದಾರೆ. ಇಷ್ಟು ದಿನ ಇಲ್ಲದ ಗರ್ಲ್ಫ್ರೆಂಡ್ ವಿಚಾರ ಈಗ ಯಾಕೆ ಬಂತು ಅವರು ಯಾರು ಎಂಬ ಕುತೂಹಲ ನಿಮಗಿದ್ದರೆ ಬನ್ನಿ ಸ್ನೇಹಿತರೆ ನಾವು ನಿಮಗೆ ಸಂಪೂರ್ಣ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಇತ್ತೀಚಿಗೆ ಮಾತನಾಡಬೇಕಾದರೆ ಅರವಿಂದ್ ರವರು ತಮ್ಮ ಮೊದಲ ಗರ್ಲ್ಫ್ರೆಂಡ್ ಕುರಿತಂತೆ ಮಾತನಾಡಿದ್ದಾರೆ.

ಸ್ವತಹ ಮೊದಲಿನಿಂದಲೂ ಪ್ರೊಫೆಷನಲ್ ಬೈಕರ್ ಆಗಿರುವ ಅರವಿಂದ್ ರವರು ತಮ್ಮ ಮೊದಲನೆಯ ಗರ್ಲ್ಫ್ರೆಂಡ್ ಅಥವಾ ಲವ್ ತನ್ನ ಬೈಕ್ ಎಂದು ಹೇಳಿದ್ದಾರೆ. ಇದು ಖಂಡಿತವಾಗಿ ಹೌದು ಸ್ನೇಹಿತರೆ ಪ್ರತಿಯೊಬ್ಬ ಹುಡುಗನ ಮೊದಲ ಆಸೆ ಏನೆಂದರೆ ಬೈಕ್ ತೆಗೆದುಕೊಳ್ಳುವುದು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇಲ್ಲಿ ಅರವಿಂದರು ಕೂಡ ಇದೇ ಮಾದರಿಯಲ್ಲಿ ಹೇಳಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ನಿಮ್ಮ ನೆಚ್ಚಿನ ಸ್ಪರ್ಧೆ ಯಾರೆಂಬುದನ್ನು ಕಮೆಂಟ್ ಮೂಲಕ ತಿಳಿಸಿ.

Comments are closed.