Neer Dose Karnataka
Take a fresh look at your lifestyle.

ಖ್ಯಾತ ನಟ ಚಿಕ್ಕಣ್ಣನ ಮದುವೆ ಸಂಭ್ರಮ, ಕೊನೆಗೂ ಮದುವೆ ಆಗುವ ಹುಡುಗಿ ಯಾರೆಂದು ಬಹಿರಂಗ ಪಡಿಸಿದ ಹುಡುಗಿ !!

ನಮಸ್ಕಾರ ಸ್ನೇಹಿತರೇ ಪ್ರತಿಭೆ ಹಾಗೂ ಅದೃಷ್ಟ ಒಂದಿದ್ದರೆ ಸಾಕು ಕುಚೇಲನು ಕೂಡ ಕುಬೇರ ನಾಗುತ್ತಾನೆ ಎಂಬುದನ್ನು ನೀವು ಈಗಾಗಲೇ ಹಲವಾರು ಕಥೆಗಳಲ್ಲಿ ಹಾಗೂ ಕೆಲವರು ನಿಜಜೀವನದಲ್ಲಿ ನೋಡಿರುತ್ತೀರಿ. ಅಂತೆಯೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೂಡ ಒಬ್ಬರು ತಮ್ಮ ಪ್ರತಿಭೆ ಹಾಗೂ ಒಂದಷ್ಟು ಅದೃಷ್ಟದೊಂದಿಗೆ ಕೂಲಿ ಕೆಲಸ ಮಾಡುತ್ತಿದ್ದವರು ಈಗ ಕೋಟಿ ಕೋಟಿ ಎಣಿಸುತ್ತಿದ್ದಾರೆ. ಒಂದೊಮ್ಮೆ ಅವಕಾಶಕ್ಕಾಗಿ ಒದ್ದಾಡುತ್ತಿದ್ದರು ಈಗ ನಿರ್ಮಾಪಕರು ಸಾಲು ಸಾಲಾಗಿ ನಿಂತು ಕೊಳ್ಳುವಷ್ಟು ಜನಪ್ರಿಯ ಜನ ಬೆಳಸಿಕೊಂಡಿದ್ದಾರೆ.

ಹೌದು ಸ್ನೇಹಿತರ ನಾವು ಮಾತನಾಡಲು ಹೊರಟಿರೋದು ಕನ್ನಡ ಚಿತ್ರರಂಗದ ಪ್ರಸ್ತುತ ನಂಬರ್ ಒನ್ ಕಾಮಿಡಿ ನಟ ಚಿಕ್ಕಣ್ಣ ಅವರ ಕುರಿತಂತೆ. ಹೌದು ಸ್ನೇಹಿತರೇ ಒಂದು ಕಾಲದಲ್ಲಿ ಚಿಕ್ಕಣ್ಣ ರವರು ಗಾರೆ ಕೆಲಸ ಮಾಡಿಕೊಂಡು ಮನೆಯ ಮಂದಿ ಹೊಟ್ಟೆ ತುಂಬಿಸುತ್ತಿದ್ದ ಕಾಲವೊಂದಿತ್ತು. ಆದರೆ ನಂತರ ಹಂತಹಂತವಾಗಿ ಬೆಳೆದು ಈಗ ಕನ್ನಡದ ಚಿತ್ರರಂಗದ ಬಹು ಬೇಡಿಕೆಯ ಕಾಮಿಡಿ ನಟನಾಗಿ ಕಾಣಿಸಿಕೊಂಡಿರುವುದು ನಿಮಗೆಲ್ಲಾ ಗೊತ್ತೇ ಇದೆ. ಮೊದಲು ಕಾಮಿಡಿ ಶೋಗಳಲ್ಲಿ ನಟಿಸಿ ನಂತರದ ದಿನಗಳಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಕಿರಾತಕ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆಯ ಕಾಮಿಡಿ ನಟನಾಗುವ ಭರವಸೆಯನ್ನು ಮೂಡಿಸಿದ್ದರು.

ಕಿರಾತಕ ಚಿತ್ರದಲ್ಲಿನ ಅವರ ಪಾತ್ರವನ್ನು ನೋಡಿದ ಪ್ರೇಕ್ಷಕರು ರಾಕಿಂಗ್ ಸ್ಟಾರ್ ಯಶ್ ಅವರಿಗಿಂತ ಚಿಕ್ಕಣ್ಣನವರಿಗೆ ಫಿದಾ ಆಗಿಹೋದರು. ಚಿಕ್ಕಣ್ಣನವರ ಮೈಸೂರು ಮಂಡ್ಯ ರೀತಿಯ ಕನ್ನಡ ಹಾಗೂ ಅದರಲ್ಲಿರುವ ಹಾಸ್ಯ ಎಲ್ಲಾ ಪ್ರೇಕ್ಷಕರ ಮನಗೆದ್ದಿತು. ಚಿಕ್ಕಣ್ಣನವರ ಮಾತುಗಾರಿಕೆಯನ್ನು ನೋಡಲು ಜನರು ಚಿತ್ರಮಂದಿರಗಳಿಗೆ ಆಗಮಿಸಲಾರಂಭಿಸಿದರು. ಇದು ಒಬ್ಬ ಪ್ರತಿಭಾನ್ವಿತ ಕಲಾವಿದನ ಗೆಲುವು ಸಂಪೂರ್ಣವಾದ ಗೆಲುವು ಎಂದು ಹೇಳಬಹುದು.

ಚಿಕ್ಕಣ್ಣನ ಪ್ರತಿಭೆಗೆ ಅಲ್ಲಿಂದ ಆರಂಭವಾಗಿ ಇಲ್ಲಿಯವರೆಗೆ ಪ್ರತಿಯೊಬ್ಬ ಕನ್ನಡ ವೀಕ್ಷಕರಿಂದ ಮನ್ನಣೆ ದೊರೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕೂಡ ಪ್ರತಿಯೊಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಈಗಾಗಲೇ ಹಾಸ್ಯ ನಟ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ. ಇನ್ನು ಚಿಕ್ಕಣ್ಣನವರ ಮದುವೆ ವಿಷಯ ಬಂದಾಗಲೆಲ್ಲ ಅವರು ಮೌನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. ಆಗೀಗ ಕೆಲವೊಂದು ಕಾರ್ಯಕ್ರಮಗಳಲ್ಲಿ ಚಿಕ್ಕಣ್ಣನವರು ನಿರೂಪಕಿ ಅನುಶ್ರೀ ಅವರೊಂದಿಗೆ ಕ್ಲೋಸ್ ಆಗಿರುವುದನ್ನು ನೋಡಿ ಚಿಕ್ಕಣ್ಣ ಹಾಗೂ ಅನುಶ್ರೀ ಮದುವೆಯಾಗುತ್ತಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಕೊನೆಗೂ ಚಿಕ್ಕಣ್ಣನವರ ಮದುವೆಯಾಗುವ ಹುಡುಗಿ ಯಾರೆಂಬುದು ಗೊತ್ತಾಗಿದೆ.

ಹೌದು ಸ್ನೇಹಿತರೆ ಹಾಸ್ಯನಟ ಚಿಕ್ಕಣ್ಣನವರ ಮದುವೆಯಾಗುವ ಹುಡುಗಿ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟಿ. ಹೌದು ಸ್ನೇಹಿತರೆ ಶರಣ್ ಹಾಗೂ ಚಿಕ್ಕಣ್ಣ ನಾಯಕನಟರಾಗಿ ನಟಿಸಿರುವ ಅಧ್ಯಕ್ಷ ಚಿತ್ರದ ನಾಯಕ ನಟಿಯ ಸ್ನೇಹಿತೆಯಾಗಿ ನಟಿಸಿರುವ ಆರೋಹಿತ ಎಂಬ ನಟಿ ಚಿಕ್ಕಣ್ಣನ ಅವರನ್ನು ಮದುವೆಯಾಗಲು ಹೊರಟಿರೋ ಹುಡುಗಿ. ಹೌದು ಒಂದು ಕಾರ್ಯಕ್ರಮದಲ್ಲಿ ಸ್ವತಹ ಆರೋಹಿತ ರವರೇ ನನಗೆ ಪರ್ಫೆಕ್ಟ್ ಜೋಡಿ ಎಂದರೆ ಅದು ಚಿಕ್ಕಣ್ಣ ಎಂದು ಹೇಳಿದ್ದರು.

ಲಾಕ್ಡೌನ್ ನಲ್ಲಿ ಚಿಕ್ಕಣ್ಣನವರು ತಮ್ಮ ಫಾರ್ಮಸಿ ನಲ್ಲಿ ಕೃಷಿ ಹಾಗೂ ಇನ್ನಿತರ ಮೇಕೆ ಕುರಿ ಸಾಕುವಂತಹ ಹಾಗೂ ಮತ್ತೊಮ್ಮೆ ಗಾರೆ ಕೆಲಸ ಮಾಡುವಂತಹ ಕೆಲಸಗಳನ್ನು ಮಾಡಿಕೊಂಡಿದ್ದರು. ಇದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಗೂ ಫೋಟೋಗಳು ಕೂಡ ಸಾಕಷ್ಟು ವೈರಲ್ ಆಗಿದೆ. ಇನ್ನು ಈ ಕುರಿತಂತೆ ನಟ ಚಿಕ್ಕಣ್ಣನವರು ಏನನ್ನು ಕೂಡ ಮಾತನಾಡಿಲ್ಲ. ಮುಂದಿನ ದಿನಗಳಲ್ಲಿ ಯಾವ ಚಿಕ್ಕಣ್ಣನವರ ಮದುವೆ ಕುರಿತಂತೆ ನಮಗೆ ಸರಿಯಾದ ಮಾಹಿತಿ ಸಿಕ್ಕರೂ ಸಿಗಬಹುದು ಅವರ ಮದುವೆಗಾಗಿ ಕಾದುನೋಡೋಣ ಸ್ನೇಹಿತರೇ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.