Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಬಿಗ್ ಬಾಸ್ ಮನೆಯಲ್ಲಿ ಶುಭಾ ಪೂಂಜಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು ಹೇಗೆ ಗೊತ್ತೇ???

2

ನಮಸ್ಕಾರ ಸ್ನೇಹಿತರೇ ಬೆಳ್ಳಂಬೆಳಗ್ಗೆ ಬಿಗ್ ಬಾಸ್ ಮನೆಯಲ್ಲಿ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಹೌದು ಇತ್ತಿಚೆಗಷ್ಟೇ ಸಣ್ಣ ಗ್ಯಾಪ್ ನಂತರ ಮನೆ ಸೇರಿದ್ದ ಸ್ಪರ್ಧಿಗಳಲ್ಲೊಬ್ಬರು, ತಾವು ನಾಲ್ಕು ತಿಂಗಳ ಗರ್ಭಿಣಿ ಎಂಬ ಶಾಕಿಂಗ್ ನ್ಯೂಸ್ ಹರಿಬಿಟ್ಟಿದ್ದಾರೆ. ಹೌದು ಕಳೆದ ವಾರವಷ್ಟೇ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ನಟಿ ಶುಭಾ ಪೂಂಜಾ ತಾವು ನಾಲ್ಕು ತಿಂಗಳ ಗರ್ಭಿಣಿ ಎಂದು ಉಳಿದ ಸ್ಪರ್ಧಿಗಳ ಮುಂದೆ ಹೇಳಿದರು. ಇದನ್ನ ಕೇಳಿದ ಎಲ್ಲಾ ಬಿಗ್ ಬಾಸ್ ಸ್ಪರ್ಧಿಗಳು ಒಂದು ಕ್ಷಣ ಅವಕ್ಕಾದಾರು.

ನಂತರ ಸ್ಪಷ್ಟ ಪಡಿಸಿದ ಶುಭ ಪೂಂಜಾ ನನಗೆ ಬೆಳಬೆಳಿಗ್ಗೆಯೇ ಒಂದು ಕನಸು ಬಿದ್ದಿತ್ತು. ಅದರಲ್ಲಿ ನಾನು ನಾಲ್ಕೈದು ತಿಂಗಳು ಗರ್ಭಿಣಿಯಾಗಿದ್ದೆ. ಈ ಮಧ್ಯೆ ಬಿಗ್ ಬಾಸ್ ಮನೆಗೆ ಹೋಗಲು ಬಟ್ಟೆಗಳನ್ನು ಸಹ ಮಡಚುತ್ತಿದ್ದೆ ಎಂದು ತಮ್ಮ ಕನಸನ್ನ ಉಳಿದ ಸ್ಪರ್ಧಿಗಳ ಮುಂದೆ ಹಂಚಿಕೊಂಡರು. ಇದಕ್ಕೆ ಬಿದ್ದು ಬಿದ್ದು ನಕ್ಕ ಉಳಿದ ಸ್ಪರ್ಧಿಗಳು ಶುಭಾ ಪೂಂಜಾರನ್ನ ಗೇಲಿ ಮಾಡಿದರು. ಕಿಚಾಯಿಸುವುದರಲ್ಲಿ ಪಂಟರ್ ಆಗಿರುವ ಪ್ರಶಾಂತ್ ಸಂಬರ್ಗಿ, ಈಗ ನಡೆಯುತ್ತಿರುವ ಟಾಸ್ಕ್ ಗಳಲ್ಲೇ ಸರಿಯಾಗಿ ಆಡದೇ ನೀನು ಸೊಂಬೇರಿ ಆಗಿದ್ದಿಯಾ, ಇನ್ನು ಗರ್ಭಿಣಿಯಾಗಿ ಹೊಟ್ಟೆ ಇಟ್ಟುಕೊಂಡು ಹೇಗೆ ಆಡುತ್ತಿಯಾ ಎಂದು ಕಿಚಾಯಿಸಿದ್ದಾರೆ. ಇದಕ್ಕೆ ಸಂಪೂರ್ಣ ಮನೆಯೇ ಗೊಳ್ಳೆಂದು ನಕ್ಕಿದೆ.

ಬಿಗ್ ಬಾಸ್ ನೀಡುವ ಟಾಸ್ಕ್ ಗಳಲ್ಲಿ ಶುಭಾ ಪೂಂಜಾ ಬಹಳ ಕಳಪೆಯಾಗಿ ಆಡುತ್ತಿದ್ದಾರೆಂದು ಪ್ರತಿ ಸ್ಪರ್ಧಿಗಳಾದ ನಿಧಿ ಹಾಗೂ ದಿವ್ಯಾ ಸುರೇಶ್ ಮಾತನಾಡಿಕೊಳ್ಳುತ್ತಿದ್ದರು. ಸ್ವಲ್ಪವೂ ಸೀರಿಯಸ್ ಇಲ್ಲದ ಶುಭಾ ಪೂಂಜಾರಿಂದಲೇ ನಾವು ಟಾಸ್ಕ್ ಗಳನ್ನ ಸೋಲುತ್ತಿದ್ದೆವೆ ಎಂದು ಮಂಜು ಪಾವಗಡ ಎದುರು ಹೇಳಿದರು. ಈ ಕಾರಣಕ್ಕೆ ಮನೆಯಲ್ಲಿ ಶುಭಾ ಪೂಂಜಾ ವರ್ಸಸ್ ನಿಧಿ ಸುಬ್ಬಯ್ಯ ನಡುವೆ ಕೋಲ್ಡ್ ವಾರ್ ನಡೆಯುತ್ತಿದೆ. ಬಿಗ್ ಬಾಸ್ ಸೀಸನ್ 8 ರ ನಿಮ್ಮ ನೆಚ್ಚಿನ ಸ್ಪರ್ಧಿ ಯಾರು ಎಂಬುದನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.