Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗದಲ್ಲಿ ಪ್ರೇಕ್ಷಕರು ಎಂದಿಗೂ ಮರೆಯಲಾಗದ ಪಾತ್ರಗಳು ಯಾವ್ಯಾವು ಗೊತ್ತೇ?? ಇವುಗಳಲ್ಲಿ ನಿಮ್ಮ ನೆಚ್ಚಿನದು ಯಾವುದು??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ನಾವು ಹೆಚ್ಚಿನ ನಟರನ್ನು ಆಯ್ಕೆ ಮಾಡುವುದು ಅವರು ಮಾಡುವ ಪಾತ್ರಗಳ ಆಧಾರದಿಂದ. ಕೆಲವು ನಟರು ಕೆಲವು ಪಾತ್ರಗಳು ವರ್ಷಗಳ ಕಾಲದವರೆಗೂ ಹಚ್ಚಹಸಿರಾಗಿ ಹಾಗೇ ಉಳಿದಿರುತ್ತದೆ. ಎಷ್ಟು ವರ್ಷಗಳಾದರೂ ಆ ಪಾತ್ರಗಳ ಗುಂಗು ಪ್ರೇಕ್ಷಕರಲ್ಲಿ ಇಳಿದಿರುವುದಿಲ್ಲ. ಅಂತಹ ಪಾತ್ರೆಗಳು ಸಿಗುವುದು ಬೆರಳೆಣಿಕೆಯಷ್ಟು ಆದರೂ ಅವುಗಳ ಪ್ರಾಮುಖ್ಯತೆ ಜನರು ತಮ್ಮ ಜೀವನದಲ್ಲಿ ಕೂಡ ಅಳವಡಿಸಿಕೊಳ್ಳುತ್ತಾರೆ ಅಂತಹ ಪಾತ್ರಗಳು ಅವು. ಸ್ನೇಹಿತರೇ ಇಂದಿನ ವಿಷಯದಲ್ಲಿ ಕೂಡ ನಾವು ಅಂತಹದೇ ಎಂದೂ ಮರೆಯಲಾರದ ಸಿನಿಮಾ ಪಾತ್ರಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಮೊದಲಿಗೆ ಕಸ್ತೂರಿ ನಿವಾಸದ ರಾಜಕುಮಾರ್ ರವರ ಪಾತ್ರ. ಹೌದು ಸ್ನೇಹಿತರೆ ಕಸ್ತೂರಿ ನಿವಾಸದಲ್ಲಿ ರಾಜಕುಮಾರ್ ರವರ ಪಾತ್ರ ಇಂದಿಗೂ ಕೂಡ ಸದಾ ನವನವೀನ. ಎಂದಿಗೂ ಆಕಾಶ ಕಾಣದ ಕೈ ತನ್ನ ಕೊನೆಯ ಕಾಲದಲ್ಲಿ ಕೂಡ ಹಾಗೇ ಉಳಿದಿರುತ್ತದೆ ಇದು ಎಲ್ಲರ ಬದುಕಿನಲ್ಲಿ ಒಂದು ಪ್ರಭಾವ ಬೀರಿದೆ. ಅಣ್ಣಾವ್ರ ನಟನೆ ಇಂದಿಗೆ 50 ವರ್ಷವಾದರೂ ಕೂಡ ಜನರ ಮನಸ್ಸಿನಲ್ಲಿ ಸದಾ ನವನವೀನ ವಾಗಿದೆ.

ನಾಗರಹಾವಿನ ರಾಮಾಚಾರಿ ಪಾತ್ರ ಹೌದು ಸ್ನೇಹಿತರೆ ಸ್ಯಾಂಡಲ್ವುಡ್ಗೆ ಆಂಗ್ರಿ ಯಂಗ್ ಮ್ಯಾನ್ ಆಗಿ ಎಂಟ್ರಿ ಕೊಟ್ಟಿದ್ದ ವಿಷ್ಣುವರ್ಧನ್ ಅವರು ನಟಿಸಿದ ಮೊದಲ ಚಿತ್ರದ ಪಾತ್ರ. ಸದಾ ಛಲವನ್ನು ಹೊಂದಿದ್ದ ಯುವಕನೊಬ್ಬನ ಪಾತ್ರ ಅದು. ಅದರಲ್ಲೂ ರಾಮಾಚಾರಿ ಹಾಗೂ ಚಾಮಯ್ಯ ಮೇಷ್ಟ್ರು ಕಾಂಬಿನೇಷನ್ ಅಂತೂ ಇಂದಿಗೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ತಾಜಾ ಅನುಭವವನ್ನು ನೀಡುತ್ತದೆ. ವಿಷ್ಣುವರ್ಧನ್ ರವರ ಸಿನಿ ಜೀವನದಲ್ಲಿ ಎಂದೂ ಮರೆಯದ ಪಾತ್ರಗಳಲ್ಲಿ ಇದು ಕೂಡ ಒಂದು.

ದುನಿಯಾ ವಿಜಯ್ ರವರ ದುನಿಯಾ ತನ್ನ ತಾಯಿಯ ಸಮಾಧಿಯನ್ನು ಕಟ್ಟಲು ಬೆಂಗಳೂರಿಗೆ ಬಂದು ದುಡಿಯುವ ಒಬ್ಬ ಮುಗ್ಧ ವ್ಯಕ್ತಿಯ ಕತೆ ನಂತರ ಆತ ಗೊತ್ತಿಲ್ಲದೆ ಕೆಟ್ಟ ಕೆಲಸಕ್ಕೆ ಕೈ ಹಾಕಿ ಹೋಗಬಾರದು ಕ್ಷೇತ್ರಕ್ಕೆ ಹೋಗಿ ನಂತರ ತನ್ನ ಜೀವವನ್ನು ಕಳೆದುಕೊಳ್ಳುವ ರೀತಿ ಇಂದಿಗೂ ಕೂಡ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ. ಈ ಚಿತ್ರ ಕೇವಲ ದುನಿಯಾವಿಜಯ ರವರಿಗೆ ಮಾತ್ರವಲ್ಲದೆ ನಿರ್ದೇಶಕ ಸೂರಿ ಅವರಿಗೂ ಕೂಡ ಜೀವನವನ್ನು ಕಟ್ಟಿಕೊಟ್ಟಿತು.

ಕೃಷ್ಣ ಅಜಯ್ ರಾವ್ ರವರ ತಾಜ್ ಮಹಲ್ ಸ್ನೇಹಿತರೆ ಕೃಷ್ಣ ಅಜಯ್ ರಾವ್ ಹಾಗೂ ಆರ್ ಚಂದ್ರು ರವರ ಸಿನಿ ಜೀವನದಲ್ಲಿ ಅತ್ಯಂತ ಹೆಚ್ಚು ಯಶಸ್ಸು ಕಂಡ ಚಿತ್ರಗಳಲ್ಲಿ ಇದು ಕೂಡ ಒಂದು ತಾಜ್ಮಹಲ್. ಪ್ರೀತಿಯಲ್ಲಿ ಬೀಳುವ ಯುವಪ್ರೇಮಿ ನಂತರ ಅದನ್ನು ಉಳಿಸಿಕೊಳ್ಳಲು ಸಾಕಷ್ಟು ಸುಳ್ಳುಗಳನ್ನು ಹೇಳಿ ನಂತರ ತನ್ನ ತಪ್ಪನ್ನು ಅರಿತು ತಂದೆ-ತಾಯಿಗಳ ನೆನಪಾಗಿ ಊರಿಗೆ ಹೋಗುವಾಗ ಲಾರಿಗೆ ಸಿಲುಕಿ ತನ್ನ ಜೀವ ಕಳೆದುಕೊಳ್ಳುವ ದೃಶ್ಯ ಇಂದಿಗೂ ಕೂಡ ಪ್ರೇಕ್ಷಕರ ಕಣ್ಣಲ್ಲಿ ಒಂದು ಹನಿ ನೀರನ್ನು ತರಿಸುವುದು ಸುಳ್ಳಲ್ಲ. ಕೃಷ್ಣ ಅಜಯ್ ರಾವ್ ರವರು ಈ ಪಾತ್ರದಲ್ಲಿ ತಮ್ಮ ಪರಕಾಯ ಪ್ರವೇಶ ಮಾಡಿ ಪ್ರೇಕ್ಷಕರ ಮನಗೆದ್ದಿದ್ದರು.

ನಾಗ್ ಸಹೋದರರ ಮಿಂಚಿನ ಓಟ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಿಂದ ಖ್ಯಾತಿಯಾಗಿರುವ ನಾಗ್ ಸಹೋದರರು ಅಂದರೆ ಶಂಕರ್ ನಾಗ್ ಹಾಗೂ ಅನಂತ ನಾಗ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ, ಸ್ವತಹ ಶಂಕರ್ನಾಗ್ ರವರೇ ನಿರ್ದೇಶಿಸಿರುವ ಮಿಂಚಿನ ಓಟದ ಚಿತ್ರದಲ್ಲಿ ಕ್ಲೈಮ್ಯಾಕ್ಸ್ನಲ್ಲಿ ಇಬ್ಬರೂ ಕೂಡ ಪೋಲಿಸರಿಂದ ಇಹಲೋಕ ತ್ಯಜಿಸುವ ನೋಡಲು ಇಂದಿಗೂ ಕೂಡ ಪ್ರೇಕ್ಷಕರಿಗೆ ಬೇಸರವೆನಿಸುತ್ತದೆ.

ನೋಡಿದ್ರಲ್ಲ ಸ್ನೇಹಿತರೇ ಇದೇ ತರಹದ ಹಲವಾರು ಚಿತ್ರಗಳ ಪಾತ್ರಗಳು ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿ ಅವು ಕೊಡುವ ಭಾವನೆ ನಮ್ಮ ಮನಸ್ಸಿಗೆ ಹತ್ತಿರವಾಗುತ್ತದೆ. ಹೀಗ್ ಆಗಿದ್ದರಿಂದ ಆ ಪಾತ್ರಗಳು ನಮಗೆ ಇನ್ನು ಕೂಡ ಭಾವನಾತ್ಮಕವಾಗಿ ಕನೆಕ್ಟ್ ಆಗುತ್ತದೆ. ಇನ್ನು ನಿಮ್ಮ ನೆಚ್ಚಿನ ಪಾತ್ರ ಹಾಗೂ ಚಿತ್ರ ಯಾವುದು ಎಂಬುದನ್ನು ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.