Neer Dose Karnataka
Take a fresh look at your lifestyle.

ಯಶ್ ಗೆ ಬಾರಿ ಶಾಕ್, ಬಾರಿ ನಿರೀಕ್ಷಿತ ಚಿತ್ರಕ್ಕೆ ಬ್ರೇಕ್. ಸ್ಯಾಂಡೆಲ್ವುಡ್ ನಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಯಶ್ ರವರು ಇದೀಗ ಕೆಜಿಎಫ್ ಚಿತ್ರದ ಮೂಲಕ ಪಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಯಶ್ ರವರು ಬಹುತೇಕ ಸಿನಿಮಾಗಳು ಹಿಂದಿ, ಬೋಜಪುರಿ ಭಾಷೆಗಳಿಗೆ ಯೌಟ್ಯೂಬ್ ನಲ್ಲಿ ಡಬ್ ಆಗಿ ಬಿಡುಗಡೆಯಾಗುತ್ತಿವೆ. ಹೀಗೆ ಡಬ್ ಆದ ಸಿನಿಮಾಗಳು ವೀಕ್ಷಕರಿಂದ ಬಾರಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿವೆ. ಹೀಗೆ ನ್ಯಾಷನಲ್ ಸ್ಟಾರ್ ಆಗಿ ಬೆಳೆದಿರುವ ಯಶ್ ರವರ ಮುಂದಿನ ಚಿತ್ರಗಳ ಮೇಲೆ ಬಾರಿ ನಿರೀಕ್ಷೆಗಳು ಕೂಡ ಇವೆ.

ಇದೇ ಸಮಯದಲ್ಲಿ ಟೈಟಲ್ ನ ಮೂಲಕ ಬಾರಿ ಕುತೂಹಲ ಹಾಗೂ ಮುಂದಿನ ಕೆಜಿಎಫ್ ಆಗಲಿದೆ ಎನ್ನುವ ಸದ್ದು ಮಾಡುತ್ತಿದ್ದ ಸಿನಿಮಾದ ಟೈಟಲ್ ಇದೀಗ ಯಶ್ ರವರ ಕೈಯಿಂದ ಕೊನೆಯ ಕ್ಷಣದಲ್ಲಿ ಜಾರಿ ಹೋಗಿದೆ. ಹೌದು ಸ್ನೇಹಿತರೇ, ಯಶ್ ರವರು ಕನ್ನಡದ ಟಾಪ್ ನಿರ್ದೇಶಕ ಹರ್ಷ ರವರ ಜೊತೆ ರಾಣಾ ಎಂಬ ಟೈಟಲ್ ನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಖಚಿತವಾಗಿತ್ತು.

ಇದಕ್ಕೆ ಎಲ್ಲ ತಯಾರಿಗಳು ಕೂಡ ನಡೆದಿದ್ದವು. ಆದರೆ ಕೆ ಮಂಜು ರವರ ಕೈಯಲ್ಲಿ ಇದ್ದ ಈ ಟೈಟಲ್ ಅನ್ನು ತಮ್ಮ ಸಿನೆಮಾಗೆ ನಿರ್ದೇಶಕ ಯುವ ನಟ ಶ್ರೇಯಸ್ ರವರ ಜೊತೆ ಮಾಡುತ್ತಿರುವ ಸಿನೆಮಾಗೆ ಪಡೆದುಕೊಂಡಿದ್ದಾರೆ. ಈ ಮೂಲಕ ರಾಣಾ ಟೈಟಲ್ ನಲ್ಲಿ ಶ್ರೇಯಸ್ ರವರ ಚಿತ್ರ ನಿರ್ಮಾಣವಾಗಲಿದೆ. ಇದು ಯಶ್ ಅಭಿಮಾನಿಗಳಿಗೆ ಬೇಸರ ತರಿಸಿದ್ದು, ರಾಣಾ ಟೈಟಲ್ ನಲ್ಲಿ ಒಂದು ಗತ್ತು ಇದೇ, ಅದನ್ನು ಯಶ್ ರವರಿಗೆ ನೀಡಿ ಎಂದು ಮನವಿ ಮಾಡುತ್ತಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

Comments are closed.