Neer Dose Karnataka
Take a fresh look at your lifestyle.

ಯಪ್ಪಾ, ಎರಡನೇ ವಿಚ್ಚೇದನದ ಬಳಿಕ ಅಮಿರ್ ಮದುವೆಯಾಗುತ್ತಿರುವ ಪುಟ್ಟ ಹುಡುಗಿ ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಾಲಿವುಡ್ ಚಿತ್ರರಂಗದ ಟಾಪ್ ನಟರಲ್ಲಿ ಒಬ್ಬರಾಗಿರುವ ಅಮಿರ್ ಖಾನ್ ರವರು, ಕಿರಣ್ ರಾವ್ ರವರ ಜೊತೆ ತಮ್ಮ 15 ವರ್ಷದ ದಾಂಪಾಂತ್ಯ ಜೀವನವನಕ್ಕೆ ಎಳ್ಳು ನೀರು ಬಿಡಲು ನಿರ್ಧಾರ ಮಾಡಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ವಿಷಯವನ್ನು ತಾವೇ ಸ್ವತಹ ಖಚಿತ ಪಡಿಸಿರುವ ಈ ಜೋಡಿ, ಅರ್ಜಿಯ ಬಳಿಕ ಲೈವ್ ಬಂದು ಒಟ್ಟಾಗಿ ಕೈ ಕೈ ಹಿಡಿದುಕೊಂಡು, ನಾವು ವಿಚ್ಚೇದನ ಪಡೆದುಕೊಳ್ಳುತ್ತಿದ್ದರು ಕೂಡ ನಮ್ಮ ಸಂಬಂಧ ಚೆನ್ನಾಗಿಯೇ ಇದೇ ಎಂದು ಹೇಳಿದ್ದಾರೆ.

ಅಂದ ಹಾಗೆ ಇದು ಅಮಿರ್ ಖಾನ್ ರವರಿಗೆ ಎರಡನೇ ಬಾರಿಗೆ ವಿಚ್ಚೇದನ, ಈ ಮೊದಲು ರೀನಾ ದತ್ತಾ ರವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆ ಮದುವೆಯನ್ನು ಕೂಡ ಸರಿಯಾಗಿ 15 ವರ್ಷ ಜೊತೆ ಸಂಸಾರ ನಡೆಸಿ, ರೀನಾ ದತ್ತಾ ರವರಿಗೆ ವಿಚ್ಚೇದನ ನೀಡಿದ್ದರು. ಇದಾದ ಬಳಿಕ ಇದೀಗ ಮತ್ತೊಮ್ಮೆ ಮದುವೆಯಾದ 15 ವರ್ಷಕ್ಕೆ ಸರಿಯಾಗಿ ವಿಚ್ಚೇದನ ನೀಡುತ್ತಿದ್ದಾರೆ.

ಇನ್ನು ಇದೇ ಸಮಯದಲ್ಲಿ ಅಮಿರ್ ಖಾನ್ ರವರ ಜೊತೆ ಬೊಲಿವುಡ್ ಚಿತ್ರರಂಗದ ಯುವ ನಟಿಯ ಹೆಸರು ಜೋರಾಗಿ ಕೇಳಿ ಬರುತ್ತಿದ್ದು, ಇವರರಿಬ್ಬರಿಗೂ ಪ್ರೀತಿ ಮೂಡಿದೆ, ಅದೇ ಕಾರಣಕ್ಕಾಗಿ ವಿಚ್ಚೇದನ ನೀಡಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ವಿಪರ್ಯದ ಏನು ಎಂದರೆ ಈ ನಟಿಗೆ ಸರಿ ಸುಮಾರು ಅಮಿರ್ ಖಾನ್ ಮಗಳ ವಯಸ್ಸು, ಅಷ್ಟೇ ಅಲ್ಲ, ಅಮಿರ್ ಖಾನ್ ರವರ ಮಗಳಾಗಿ ಖ್ಯಾತ ಸಿನಿಮಾ ದಂಗಾಲ್ ಸಿನಿಮಾದಲ್ಲಿ ಇವರು ನಟನೆ ಕೂಡ ಮಾಡಿದ್ದಾರೆ. ಹೌದು ಸ್ನೇಹಿತರೇ, ದಂಗಾಲ್ ಸಿನಿಮಾ ನಟಿ ಫಾತಿಮಾ ಸನ ಶೈಖ್ ರವರ ಜೊತೆ ಅಮಿರ್ ಖಾನ್ ರವರ ಹೆಸರು ಕೇಳಿ ಬಂದಿದೆ.

Comments are closed.