Neer Dose Karnataka
Take a fresh look at your lifestyle.

ಅತಿ ಹೆಚ್ಚು ಸಂಭಾವನೆ ಪಡೆಯುವ ಕನ್ನಡದ ಟಾಪ್ -12 ನಟಿಯರು ಯಾರು ಗೊತ್ತಾ?? ಇವರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು??

8

ನಮಸ್ಕಾರ ಸ್ನೇಹಿತರೇ ಕಿರುತೆರೆ ಸದ್ಯ ಹೆಚ್ಚು ಚಾಲ್ತಿಯಲ್ಲಿರುವ ಮಾಧ್ಯಮ. ಅದರಲ್ಲೂ ಧಾರವಾಹಿಗಳ ನಟಿಯರು ಎಲ್ಲರ ಮನೆಮಗಳಂತೆ ಆಗಿರುತ್ತಾರೆ. ಇನ್ನು ಸಂಭಾವನೆಯ ವಿಚಾರದಲ್ಲಿಯೂ ಸಹ ನಟಿಮಣಿಗಳಿಗೆ ಇಂದು ಉತ್ತಮ ಸಂಭಾವನೆ ಸಿಗುತ್ತಿದೆ. ಬನ್ನಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕನ್ನಡದ ಟಾಪ್ ನಟಿಯರು ಯಾರು ಎಂಬ ಬಗ್ಗೆ ತಿಳಿದುಕೊಳ್ಳೋಣ.

ಟಾಪ್ 12 – ನನ್ನರಸಿ ರಾಧೆಯ ಸುಂದರಿ ಕೌಸ್ತುಭ ಮಣಿ ಪ್ರತಿ ಎಪಿಸೋಡಿಗೂ 15 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಟಾಪ್ 11- ಗಿಣಿರಾಮ ಧಾರವಾಹಿಯ ನಟಿ ನಯನಾ ಅವರಿಗೆ ಪ್ರತಿ ಎಪಿಸೋಡಿಗೂ 15 ರಿಂದ 20 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಟಾಪ್ 10 – ನಮ್ಮನೆ ಯುವರಾಣಿ ಧಾರಾವಾಹಿಯ ಅಂಕಿತಾ ಅಮರ್ ಸಹ ಪ್ರತಿ ಎಪಿಸೋಡಿಗೆ 18 ಸಾವಿರ ರೂಪಾಯಿ ಪಡೆದುಕೊಳ್ಳುತ್ತಾರೆ. ಟಾಪ್ 9 – ಗೀತಾ ಧಾರವಾಹಿಯ ಭವ್ಯಾ ಗೌಡ ಸಹ ಪ್ರತಿ ಸಂಚಿಕೆಗೆ 19 ಸಾವಿರ ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಟಾಪ್ 8 – ಮುದ್ದುಲಕ್ಷ್ಮಿ ಧಾರವಾಹಿಯ ಅಶ್ವಿನಿ ಅವರಿಗೆ ಒಂದು ಸಂಚಿಕೆಗೆ 20 ಸಾವಿರ ಸಿಗುತ್ತಿದೆ. ಟಾಪ್7 – ಪಾರು ಧಾರವಾಹಿಯ ನಟಿ ಮೋಕ್ಷಿತಾ ಪೈ ರವರಿಗೆ ಒಂದು ಸಂಚಿಕೆಗೆ 20 ಸಾವಿರ ರೂಪಾಯಿ ದೊರಕುತ್ತಿದೆ. ಟಾಪ್ 6 – ಮಂಗಳಗೌರಿ ಧಾರವಾಹಿಯ ಕಾವ್ಯಶ್ರೀ ಗೌಡ ಅವರಿಗೆ ಒಂದು ಸಂಚಿಕೆಗೆ 25 ಸಾವಿರ ರೂಪಾಯಿ ಸಿಗುತ್ತಿದೆ.

ಟಾಪ್ 5 – ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ ಸಹ ಸಂಚಿಕೆಗೆ 25 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ. ಟಾಪ್ 4 – ಕನ್ನಡತಿ ಧಾರಾವಾಹಿ ಖ್ಯಾತಿಯ ರಂಜನಿ ರಾಘವನ್ ಪ್ರತಿ ಎಪಿಸೋಡಿಗೂ 30 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಟಾಪ್ 3 – ಸತ್ಯ ಧಾರಾವಾಹಿಯ ಗೌತಮಿ ಜಾಧವ್ ಪ್ರತಿ ಸಂಚಿಕೆಗೂ 35 ಸಾವಿರ ರೂಪಾಯಿ ಪಡೆಯುತ್ತಾರೆ. ಟಾಪ್ 2 – ಗಟ್ಟಿಮೇಳ ಧಾರಾವಾಹಿಯ ನಿಷಾ ಮಿಲನ ಸಹ ಪ್ರತಿ ಎಪಿಸೋಡಿಗೂ 35 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಟಾಪ್ 1 – ಜೊತೆಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಹೆಚ್ಚು ಅಂದರೇ ಪ್ರತಿ ಸಂಚಿಕೆಗೂ 40 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಇದಿಷ್ಟು ನಟಿಯರ ಸಂಭಾವನೆ ವಿಚಾರ. ಇದರಲ್ಲಿ ನಿಮ್ಮ ನೆಚ್ಚಿನ ನಟಿ ಯಾರು ಎಂಬುದನ್ನ ನಮಗೆ ಕಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.