Neer Dose Karnataka
Take a fresh look at your lifestyle.

ಟಾಲಿವುಡ್ ಸ್ಟಾರ್ ವೆಂಕಟೇಶ್ ಮಗಳೂ ಈಗ ಸೆಲಿಬ್ರಿಟಿ, ಏಷ್ಯಾದಲ್ಲಿ 27ಸ್ಥಾನ ಗಳಿಸಿದ ಆಶ್ರೀತಾ, ಯಾವುದರಲ್ಲಿ ಗೊತ್ತಾ??

ನಮಸ್ಕಾರ ಸ್ನೇಹಿತರೇ ತೆಲಗು ಚಿತ್ರರಂಗವನ್ನು ತಮ್ಮದೇ ಆದ ನಟನಾ ಶೈಲಿಯಲ್ಲಿ ಸಾಕಷ್ಟು ವರ್ಷ ಆಳಿದ ಹಿರಿಯ ನಟ ವಿಕ್ಟರಿ ವೆಂಕಟೇಶ್. ಇವರ ಸಿನಿಮಾಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ಆದರೆ ಇವರ ಮಗಳು ಆಶ್ರೀತಾ ದುಗ್ಗುಬಾಟಿ ಚಿತ್ರರಂಗದಿಂದ ದೂರನೇ ಉಳಿದಿದ್ದಾರೆ. ಪ್ರಸ್ತುತ ಇವರು ಪತಿ ವಿನಾಯಕ ರೆಡ್ಡಿಯವರ ಜೊತೆ ಸ್ಪೇನ್ ನಲ್ಲಿ ನೆಲೆಸಿದ್ದಾರೆ.

ಅಂದಹಾಗೆ ಇದ್ಯಾಕೀಗ ಆಶ್ರೀತಾ ಅವರ ವಿಷ್ಯ ಎನ್ನುತ್ತೀರಾ? ಅದಕ್ಕೊಂದು ಕಾರಣವಿದೆ. ಆಶ್ರೀತಾ ನೂತನ ದಾಖಲೆ ಮಾಡಿದ್ದಕ್ಕಾಗಿ ಇಂದು ಸುದ್ದಿಯಲ್ಲಿದ್ದಾರೆ. ಹೌದು. ಅಶ್ರೀತಾ ಇನ್ಸ್ಟಾಗ್ರಾಮ್ ನ ಶ್ರೀಮಂತರ ಪಟ್ಟಿಯಲ್ಲಿ ಆಶ್ರೀತಾ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 13 ಲಕ್ಷ ಪಾಲೋವರ್ಸ್ ಇದ್ದಾರೆ ಆಶ್ರೀತಾ ಅವರಿಗೆ. ಆಶ್ರೀತಾಗೆ ಅಡುಗೆಯಲ್ಲಿ ಆಸಕ್ತಿ ಇದ್ದು, ಪ್ರತಿ ದಿನವೂ ಬೇರೆ ಬೇರೆ ರೆಸಿಪಿಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. Hopper ವೆಬ್ ಸೈಟ್ ನವರು ಇನ್ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ವಿಶ್ವದಲ್ಲಿ 337 ನೇ ಸ್ಥಾನವನ್ನು ಗಳಿಸಿದ ಆಶ್ರೀತಾ, ಏಷ್ಯಾದಲ್ಲಿ 27ನೇ ಸ್ಥಾನ ಪಡೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿ ಇರುವವರು ಫುಟ್ ಬಾಲ್ ಆಟಗಾರ, ಕ್ರಿಶ್ಟಿಯಾನೋ ರೊನಾಲ್ಡ್. ಹಾಗೆಯೇ ಇನ್ಸ್ಟಾದಲ್ಲಿ ಹೆಚ್ಚೆಚ್ಚು ಪೋಸ್ಟ್ ಮಾಡುವ ವಿರಾಟ್ ಕೋಹ್ಲಿ ಸುಮಾರು 5 ಕೋಟಿ ಸಂಭಾವನೆಯನ್ನು ಗಿಟ್ಟಿಸಿಕೊಂಡು 19 ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಬಾಲಿವುಡ್ ನ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಕೂಡ ಈ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

Comments are closed.