Neer Dose Karnataka
Take a fresh look at your lifestyle.

ಕನ್ನಡಲ್ಲಿ ಇತಿಹಾಸ ಸೃಷ್ಟಿಸುವಂತಹ ಚಿತ್ರವನ್ನು ಕೈಗೆತ್ತುಕೊಂಡ ಶಿವರಾಜ್ ಕುಮಾರ್, ದಾಖಲೆಗಳೆಲ್ಲ ಉಡೀಸ್ ಪಕ್ಕ.

1

ನಮಸ್ಕಾರ ಸ್ನೇಹಿತರೇ ಇವತ್ತು ಸೂಪರ್ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬ. ಹುಟ್ಟುಹಬ್ಬದ ಆಚರಣೆ ಸಿಂಪಲ್ ಆಗಿದ್ರೂ ಅವರು ಕೊಟ್ಟಿರೋ ನ್ಯೂಸ್ ಮಾತ್ರ ಅಭಿಮಾನಿಗಳನ್ನು ಸಾಕಷ್ಟು ಸಂತೋಷಪಡಿಸಿದೆ. ಶಿವರಾಜ್ ಕುಮಾರ್ ಅವರ ಸಿನಿಮಾ ಬಗ್ಗೆ ಮಾಹಿತಿ ಲಭಿಸಿದೆ. ಶಿವರಾಜ್ ಕುಮಾರ್ ಅವರ ಬರ್ತಡೆ ಎಂದ ಕೂಡಲೇ ಅವರ ವಯಸ್ಸೆಷ್ಟು ಎಂದು ಕೇಳುವ ಹಾಗಿಲ್ಲ. ಯಾಕೆಂದರೆ ಇಂದಿಗೂ ಶಿವಣ್ಣ ನಟಿಸುವ ಚಿತ್ರಗಳಲ್ಲಿ ಅವರದ್ದೇ ವರ್ಚಸ್ಸು, ಸ್ಟೈಲ್ ನ್ನು ಕಾಣಬಹುದು. ಹಾಗಾಗಿಯೇ ಶಿವರಾಜ್ ಕುಮಾರ್ ಎವರ್ ಗ್ರೀನ್, ಚಿರ ಯುವ ನಾಯಕನಟ!

ಇನ್ನು ಶಿವಣ್ಣ ಅವರ ಸಿನಿಮಾ ವಿಷಯಕ್ಕೆ ಬಂದ್ರೆ, ಶಿವರಾಜ್ ಕುಮಾರ್ ಸೆಂಚುರಿ ಸ್ಟಾರ್ ಎಂಬುದು ಎಲ್ಲರಿಗೂ ಗೊತ್ತು. ಈ ಹಿಂದೆ ಶಿವರಾಜ್ ಕುಮಾರ್ ಅವರ 123 ನೇ ಚಿತ್ರದ ಬಗ್ಗೆ ಮಾಹಿತಿ ನೀಡಲಾಗಿತ್ತು. ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಆದರೆ ಚಿತ್ರದ ಹೆಸರು ಮಾತ್ರ ಜುಲೈ 12 ರಂದು ಬಿಡುಗಡೆ ಮಾಡಲಾಗುತ್ತದೆ. ಈ ಖುಷಿಯನ್ನು ದುಪ್ಪಟ್ಟಾಗಿಸಿದೆ ಇನ್ನೊಂದು ಅಪ್ಡೆಡ್.

ಯೆಸ್. ಶಿವಣ್ಣ ಅವರ 126 ನೇ ಚಿತ್ರದ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಜಯ್ ಮಿಲ್ಟನ್ ಜೊತೆಗೆ ಒಂದು ಚಿತ್ರ ನಿರ್ಮಾಣವಾಗುತ್ತಿದೆ. ಜಯಣ್ಣ- ಭೋಗೇಂದ್ರ ಅವರೊಂದಿಗೆ ಬಜರಂಗಿ-2 ಚಿತ್ರ ನಿರ್ಮಾಣವಾಗುತ್ತಿದೆ. ಇದರ ಬೆನ್ನಲ್ಲೇ 126 ಚಿತ್ರವನ್ನು ರಿಷಭ್ ಶೆಟ್ಟಿ ನಿರ್ದೇಶನ ಮಾಡಲಿದ್ದಾರಂತೆ. ಶಿವಣ್ಣನ ಹುಟ್ಟುಹಬ್ಬದ ನಂತರ ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಬಹುದು.

ಡಾ. ಶಿವರಾಜ್ ಕುಮಾರ್ ಲಕ್ಕಿ ಗೋಪಾಲ್ ಜೊತೆಗೆ ’ಎಸ್ ಆರ್ ಕೆ’ ಸಿನಿಮಾ ಮಾಡಲಿದ್ದಾರೆ. ಈ ಚಿತ್ರಕ್ಕೆ ಕಿರಣ್ ಕುಮಾರ್ ಸಿ ಗೌಡ ಮತ್ತು ಅರವಿಂದ್ ಬಿ ಗೌಡ ದುಡ್ಡು ಹಾಕಲಿದ್ದಾರೆ. ಈ ಸಿನಿಮಾ ಬಗ್ಗೆಯೂ ಇನ್ನಷ್ಟು ವಿವರಗಳು ಸಿಗಬೇಕಿದೆ. ಬಜರಂಗಿ 2 ಚಿತ್ರ ಮುಗಿಸಿರುವ ಶಿವಣ್ಣ ಹರ್ಷ ಅವರೊಂದಿಗೆ ಇನ್ನೊಂದು ಚಿತ್ರದಲ್ಲಿ ನಟಿಸಲಿದ್ದಾರೆ. ಇದು ಶಿವಣ್ಣ ಅವರ 125 ನೇ ಚಿತ್ರವಾಗಿದ್ದು ಚಿತ್ರದ ಹೆಸರು ’ವೇದ’. ಶಿವರಾಜ್ ಕುಮಾರ್ ವರ್ಷವರ್ಷವೂ ಇನ್ನಷ್ಟು ಹೊಸ ಚಿತ್ರಗಳಲ್ಲಿ ನಟಿಸಲಿ ಎಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಹಾರೈಕೆ!

Leave A Reply

Your email address will not be published.