Neer Dose Karnataka
Take a fresh look at your lifestyle.

’ವಿಕ್ರಾಂತ್ ರೋಣ’ ಕ್ಕೆ ಮೇಕಿಂಗ್ ನೋಡಿ ಬಾಲಿವುಡ್ ಅಪ್ಸರೆ ಸುಸ್ತೋ ಸುಸ್ತು, ಇದು ಕನ್ನಡ ಚಿತ್ರದ ಹವಾ. ಹೇಗಿದೆ ಗೊತ್ತಾ ಮೇಕಿಂಗ್??

5

ನಮಸ್ಕಾರ ಸ್ನೇಹಿತರೇ ಬಾಲಿವುಡ್ ಅಂಗಳದಲ್ಲಿ ಮಿನುಗುತ್ತಿರುವ ಚೆಲುವೆ ಜಾಕ್ವೆಲಿನ್ ಫರ್ನಾಂಡಿಸ್ ನ್ನು ನೀವೆಲ್ಲ ನೋಡೇ ಇರ್ತಿರ. ಅವರ ಕ್ಯೂಟ್ ಆಕ್ಟಿಂಗ್ ಜನರಿಗೆ ಸಾಕಷ್ಟು ಇಷ್ಟವಾಗತ್ತೆ. ಶ್ರೀಲಂಕಾದ ದ್ವೀಪವೊಂದರ ಓನರ್, ಜಾಕ್ವೆಲಿನ್ ಇದೀಗ ಬೆಂಗಳೂರಿಗೆ ಬಂದಿದ್ದಾರೆ. ಯಾಕೆ ಅಂತಿರಾ! ಕಿಚ್ಚ ಸುದೀಪ್ ಜೊತೆ ಹಾಡೊಂದಕ್ಕೆ ಹೆಜ್ಜೆ ಹಾಕುವುದಕ್ಕೆ!

ಶ್ರೀಲಂಕಾ ಬೆಡಗಿ, ಬಾಲಿವುಡ್ ನಟಿ ಜಾಕ್ವೆಲಿನ್ ಸುದೀಪ್ ಅವರ ಬಹು ನಿರೀಕ್ಷೆಯ ’ವಿಕ್ರಾಂತ್ ರೋಣ’ ಚಿತ್ರದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ. ಈ ಹಾಡಿನ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಆಗಮಿಸಿರುವ ಜಾಕ್ವೆಲಿನ್ ನನ್ನು ವಿಕ್ರಾಂತ್ ರೋಣ ಚಿತ್ರ ನಿರ್ಮಾಪಕ ಜಾಕ್ ಮಂಜು ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಜಾಕ್ವಾಲಿನ್, ವಿಕ್ರಾಂತ್ ರೋಣ ಚಿತ್ರದ ಮೇಕಿಂಗ್ ನೋಡಿ ಬೆರಗಾಗಿದ್ದಾರಂತೆ. ಸ್ಟೂಡಿಯೋದಲ್ಲಿ ಚಿತ್ರದ ಮೇಕಿಂಗ್ ವೀಕ್ಷಿಸಿದ್ದು ನಿರ್ದೇಶಕ ಅನೂಪ್ ಭಂಡಾರಿ ಅವರೊಂದಿಗೆ ಚಿತ್ರದ ಬಗ್ಗೆ ಮಾಹಿತಿ ಪಡೆಸಿದ್ದಾರೆ ಜಾಕ್ವೆಲಿನ್ ಫರ್ನಾಂಡಿಸ್.

ಇನ್ನು ಈ ಚಿತ್ರದಲ್ಲಿ ಸುದೀಪ್ ಜೊತೆ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಜಾಕ್ವೆಲಿನ್. ವಿಕ್ರಮ್ ರೋಣ ಚಿತ್ರ ದುಬಾರಿ ನಿರ್ಮಾಣವಾಗಿದ್ದು ಜಾಕ್ಚೆಲಿನ್ ಹೆಜ್ಜೆಹಾಕಲಿರುವ ಹಾಡಿಗೂ ಕೋಟಿಗಟ್ಟಲೆ ಖರ್ಚು ಮಾಡುತ್ತಿದ್ದಾರಂತೆ ಜಾಕ್ ಮಂಜು. ಕೇವಲ ಈ ಹಾಡೊಂದಕ್ಕೆ ಸುಮಾರು 3 ಕೋಟಿ ಖರ್ಚು ಮಾಡಲಾಗುತ್ತಿದ್ದು ಒಂದು ಕೋಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರ ಸಂಭಾವನೆ ಎನ್ನುತ್ತಿವೆ ಬಲ್ಲ ಮೂಲಗಳು. ವಿಕ್ರಾಂತ್ ರೋಣ ಚಿತ್ರದ ಚಿತ್ರೀಕರಣ ಮುಗಿದು ಡಬ್ಬಿಂಗ್ ಕೂಡ ಭಾಗಶಃ ಮುಗಿದಿದೆ. ಇನ್ನು ಜಾಕ್ವೆಲಿನ್ ನೃತ್ಯ ಮಾಡುತ್ತಿರುವ ಹಾಡಿನ ಚಿತ್ರೀಕರಣವೊಂದು ಮುಗಿದರೆ ಚಿತ್ರೀಕಣ ಪೂರ್ಣಗೊಂಡಂತಾಗುತ್ತದೆ. ಕನ್ನಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಕಿಚ್ಚಾ ಸುದೀಪ್ ಅವರ ಜೊತೆಯಲ್ಲಿ ಮೂಡಿಬರುತ್ತಿರುವ ಈ ಹಾಡನ್ನು ನೋಡಲು ಪ್ರೇಕ್ಷಕರು ಕಾತುರರಾಗಿದ್ದಾರೆ.

Leave A Reply

Your email address will not be published.