Neer Dose Karnataka
Take a fresh look at your lifestyle.

ತಗೋಳಪ್ಪಾ, ಎರಡನೇ ಮಗುವಿಗೆ ನಾಮಕರಣ ಆಗುವ ಮುನ್ನ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ಕರೀನಾ, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕರೀನಾ ಕಪೂರ್ ಖಾನ್ ಬಾಲಿವುಡ್ ನ ಬೆಬೂ ಎಂದೇ ಪ್ರಸಿದ್ಧರಾದವರು. ಸಾಮಾನ್ಯವಾಗಿ ಕರೀನಾ ನಟಿಸಿರುವ ಎಲ್ಲಾ ಚಿತ್ರಗಳು ಹಿಟ್ ಆಗಿವೆ. ಬಾಲಿವುಡ್ ನ ಸಾಕಷ್ಟು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಕರೀನಾ ಕಪೂರ್ ಖಾನ್ ಕಳೆದ ಒಂದು ವರ್ಷದಿಂದ ತನ್ನ ಎರಡನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದು ಯಾವ ಚಿತ್ರಗಳನ್ನೂ ಮಾಡಿಲ್ಲ. ಇದಿಗ ಕರೀನಾ ಅವರಿಗೆ ಮೊದಲ ಮಗು ತೈಮೂರ್ ಜೊತೆ ಇನ್ನೊಂದು ಗಂಡು ಮಗುವೂ ಆಗಿದೆ. ಆದರೆ ಈ ಮಗುವಿನ ಪೋಟೊಗಳಾಗಲಿ, ಮಗುವಿನ ಬಗ್ಗೆಯಾಗಲಿ ಸೈಫ್ ಅಲಿ ಝಾನ್ ಅಥವಾ ಕರೀನಾ ಯಾರೊಬ್ಬರೂ ಹೇಳಿಕೊಂಡಿಲ್ಲ.

ಇನ್ನೂ ಎರಡನೇ ಮಗುವಿಗೆ ಹೆಸರಿಟ್ಟಿಲ್ಲ ಎಂದು ಹೇಳಲಾಗುತ್ತಿದ್ದರೂ ಸೈಫ್ ಅಲಿ ಖಾನ್ ಅವರ ಅಪ್ಪ, ಕ್ರಿಕೆಟಿಗ ಮಾನ್ಸೂರ್ ಅಲಿ ಖಾನ್ ಪಟೌಡಿ ಯ ಮನ್ಸೂರ್ ಎಂದೂ ಜೆ ಎಂದು ಕರೆಯುತ್ತಾರೆ ಎಂದು ಬಾಲಿವುಡ್ ನಲ್ಲಿ ಮಾತುಗಳು ಹರಿದಾಡುತ್ತಿವೆ. ಇಷ್ಟು ಪುಟ್ಟ ಮಗು ಇರುವಾಗಲೇ ಕರೀನಾಗೆ ಇನ್ನೊಂದು ಮಗುವೇ ಎಂದು ಶಾಕ್ ಆದಿರಾ? ಇಲ್ಲ, ಕರೀನಾ ಇಲ್ಲಿ ಪರಿಚಯಿಸುತ್ತಿರುವ ಮೂರನೇ ಮಗು, ಅದು ಆಕೆ ಬರೆದ ಪುಸ್ತಕ. ಹೌದು ಕರಿನಾ 2 ಗರ್ಭಾವಸ್ಥೆಯನ್ನು ಕಂಡವರು.

ಹಾಗಾಗಿ ಗರ್ಭಾವಸ್ಥೆಯ ನೀವು, ನಲಿವು, ಆಹಾರೋಪಚಾರಗಳು, ಬದುಕುವ ರೀತಿ ಇವೆಲ್ಲವುದರ ಬಗ್ಗೆ ತಾವೇ ಸ್ವತಃ ಪುಸ್ತಕವೊಂದನ್ನು ಬರೆದಿದ್ದಾರಂತೆ. ತನ್ನ ಪುಸ್ತಕದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿರುವ ಕರೀನಾ ಆ ಪುಸ್ತಕಕ್ಕೆ “ಮೈ ಪ್ರೆಗ್ನೆಸಿ ಬೈಬಲ್” ಎಂದು ನಾಮಕರಣ ಮಾಡಿದ್ದಾರಂತೆ. ಇನ್ನು ತಮ್ಮ ಯೋಗ, ಫಿಟ್ನೆಸ್ ಗಳ ಬಗ್ಗೆ ಆಗಾಗ ಪೋಸ್ಟ್ ಗಳನ್ನು ಹಂಚಿಕೊಳ್ಳುತ್ತಿರುತ್ತಾರೆ ಕರೀನಾ. ಕರೀನಾ ಸಧ್ಯ ತನ್ನ ಪುಟ್ಟ ಮಗುವಿನ ಲಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಕರೀನಾ ರಾಮಾಯಣದ ಸೀತಾ ಪಾತ್ರಕ್ಕೆ 12 ಕೋಟಿ ಸಂಬಾವನೆ ಕೇಳಿದ್ದಾರೆ ಎಂಬ ಕಾರಣಕ್ಕೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದಲ್ಲಿ ಕರೀನಾ ಅಮೀಕ್ ಖಾನ್ ಅವರಿಗೆ ಜೋಡಿಯಾಗಿದ್ದು ನಿಮಗೆಲ್ಲಾ ಗೊತ್ತೇ ಇದೆ.

Comments are closed.