Neer Dose Karnataka
Take a fresh look at your lifestyle.

ಡಾಲಿ ಧನಂಜಯ್ ಜೊತೆ ಸಿನಿಮಾ ಮಾಡಲು ತಮಿಳಿನಿಂದ ಬಂದ ಚೆಲುವೆ, ಯಾರು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ನಟ ಡಾಲಿ ಧನಂಜಯ್, ಜಯನಗರ 4th ಬ್ಲಾಕ್ ಎಂಬ ಶಾರ್ಟ್ ಸಿನಿಮಾದ ಮೂಲಕ ಶುರುವಾದ ಇವರ ಸಿನಿಜರ್ನಿ, ಹಿರಿತೆರೆಗೆ ಬಂದಿದ್ದು ಡೈರೆಕ್ಟರ್ಸ್ ಸ್ಪೆಶಲ್ ಚಿತ್ರದ ಮೂಲಕ. ಮೊದಲ ಸಿನಿಮಾದಲ್ಲೇ ಪ್ರತಿಭಾನ್ವಿತ ನಟನೆ ತೋರಿದ್ದ ಧನಂಜಯ್ ಗೆ ಮುಂದೆ ಹಲವಾರು ಸಿನಿಮಾಗಳ ಅವಕಾಶ ಬಂದವು. ರಾಟೆ, ಬಾಕ್ಸರ್, ಬದ್ಮಾಷ್, ಹೀಗೆ ಹಲವಾರು ಸಿನಿಮಾಗಳು ಬಂದರೂ ನಟ ಧನಂಜಯ್ ಕೈಯನ್ನ ಯಾವ ಸಿನಿಮಾವೂ ಹಿಡಿಯಲಿಲ್ಲ.

ಕೊನೆಗೆ ಸೂರಿ ನಿರ್ದೇಶನದ ಟಗರು ಸಿನಿಮಾದಲ್ಲಿನ ಡಾಲಿ ಪಾತ್ರ ಧನಂಜಯ್ ರವರಿಗೆ ಮರುಹುಟ್ಟು ನೀಡಿತು. ಕೇವಲ ಧನಂಜಯ್ ಆಗಿದ್ದವರು, ಡಾಲಿ ಧನಂಜಯ್ ಆದರು. ಹಲವಾರು ಸಿನಿಮಾಗಳ ಲೀಡ್ ರೋಲ್ ಡಾಲಿಗೆ ದೊರೆಯಿತು. ಮುಂದುವರೆದು ಡಾಲಿ ಪಿಚ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯನ್ನ ಹುಟ್ಟುಹಾಕಿದ ಧನಂಜಯ್ ಶಂಕರ್ ಗುರು ಎಂಬ ಸಿನಿಮಾದ ಮೂಲಕ ನಿರ್ಮಾಪಕರಾದರು. ಸಿನಿಮಾ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಕೋರೋನ ಮುಗಿದ ನಂತರ ತೆರೆಗೆ ಬರಬಹುದು.

ಈ ಮಧ್ಯೆ ಡಾಲಿ ಧನಂಜಯ್ ಹೊಸ ಸಿನಿಮಾವೊಂದಕ್ಕೆ ಸಹಿ ಹಾಕಿದ್ದರು. ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಜೊತೆ ಒಪ್ಪಂದ ಮಾಡಿಕೊಂಡಿರುವ ಡಾಲಿ ಧನಂಜಯ್ ರತ್ನನ್ ಪ್ರಪಂಚ ಎಂಬ ಹೊಸ ಸಿನಿಮಾವೊಂದರಲ್ಲಿ ನಟಿಸುವ ವಿಷಯ ತಿಳಿದಿದೆ. ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್ ಎಲ್.ಐ.ಸಿ ಏಜೆಂಟ್ ಪಾತ್ರದಲ್ಲಿ ನಟಿಸುತ್ತಿದ್ದು, ಒಂದು ಮಧ್ಯಮ ವರ್ಗದ ಪಾತ್ರದ ಕತೆ ಈ ಸಿನಿಮಾದ್ದಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಸದ್ಯ ಈ ಸಿನಿಮಾಕ್ಕೆ ಹೊಸ ನಟಿಯೊಬ್ಬರು ಆಗಮಿಸಿದ್ದಾರೆ. ಅವರೇ ರೇಬಾ ಜಾನ್. ಕೇರಳ ಮೂಲದ ರೇಬಾ ಜಾನ್ ಹಲವಾರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೇ ಮೊದಲ ಭಾರಿಗೆ ಕನ್ನಡದಲ್ಲಿ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ನಟಿ ಅನು ಪ್ರಭಾಕರ್, ಉಮಾಶ್ರೀ, ಮುಂತಾದವರು ಕಾಣಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಈ ಸಿನಿಮಾ ಸಹ ಶೀಘ್ರದಲ್ಲೇ ಬಿಡುಗಡೆಯಾಗುತ್ತದೆಯೆಂದು ಹೇಳಲಾಗಿದೆ. ಡಾಲಿ ಧನಂಜಯ್ ರವರ ರತ್ನನ್ ಪ್ರಪಂಚ ಸಿನಿಮಾ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ನಮಗೆ ತಿಳಿಸಿ.

Leave A Reply

Your email address will not be published.