Neer Dose Karnataka
Take a fresh look at your lifestyle.

ಕೊನೆಗೂ ಜೂನಿಯರ್ ಚಿರು ಸರ್ಜಾ ಗೆ ನಾಮಕರಣ ಫಿಕ್ಸ್, ಹೆಸರೇನು ಗೊತ್ತೇ?? ಹಾಗೂ ಯಾವಾಗ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿ ಮಕ್ಕಳ ಕಲರವ ಜಾಸ್ತಿಯಾಗುತ್ತಿದೆ. ಈ ಹಿಂದೆ ರಾಕಿಂಗ್ ಸ್ಟಾರ್ ಯಶ್ ದಂಪತಿಗಳ ಮಕ್ಕಳು ಈಗ ಮೇಘನಾ ರಾಜ್ ರವರ ಮಗ. ಹೌದು ಸ್ನೇಹಿತರೆ ಮೇಘನಾ ರಾಜ್ ರವರ ಮಗ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರವಲ್ಲದೆ ಕನ್ನಡ ಪ್ರೇಕ್ಷಕರು ಕೂಡ ಅವರ ಮನದಲ್ಲಿ ವಿಶೇಷ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇತ್ತೀಚಿಗಷ್ಟೇ ಕನ್ನಡ ಚಿತ್ರರಂಗದ ಯುವಸಾಮ್ರಾಟ್ ಎಂದೇ ಖ್ಯಾತರಾಗಿದ್ದ ಮೇಘನಾ ರಾಜ್ ರವರ ಪ್ರತಿಯಾಗಿರುವ ಚಿರುಸರ್ಜ ರವರು ಅಕಾಲಿಕವಾಗಿ ನಮ್ಮನ್ನೆಲ್ಲ ಬಿಟ್ಟು ಇಹಲೋಕವನ್ನು ತ್ಯಜಿಸಿದರು.

ಈ ದುಃಖವನ್ನು ಕೊಂಚಮಟ್ಟಿಗೆ ತಗ್ಗಿಸುವುದು ಸಾಧ್ಯವಾಗಿದೆ ಜೂನಿಯರ್ ಚಿರುಸರ್ಜ ರವರ ನಗುವಿನ ಮೂಲಕ. ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜಾ ರವರನ್ನು ಸರ್ಜಾ ಕುಟುಂಬ ಅದ್ದೂರಿಯಾಗಿ ಸ್ವಾಗತ ಮಾಡಿದೆ. ಇನ್ನು ಚಿಕ್ಕಪ್ಪನ ಆಗಿರುವ ಧ್ರುವ ಸರ್ಜಾ ರವರು ಕೂಡ ಮಗು ಹುಟ್ಟುವ ಮುನ್ನವೇ ಬೆಳ್ಳಿಯ ತೊಟ್ಟಿಲನ್ನು ಖರೀದಿಸಿದ್ದರು. ಇನ್ನು ಎಲ್ಲರೂ ಪ್ರೀತಿಯಿಂದ ಸಿಂಬ ಎಂದು ಕರೆಯಲಾಗುವ ಜೂನಿಯರ್ ಚಿರು ಸರ್ಜಾ ರವರ ನಾಮಕರಣ ಸದ್ಯದಲ್ಲೇ ಸದ್ಯದಲ್ಲೇ ನಡೆಯಲಿದ್ದು ಯಾವ ಹೆಸರು ಇಡಲಿದ್ದಾರೆ ಎಂಬುದರ ಕುರಿತಂತೆ ಕೆಲ ಸುದ್ದಿ ಹರಿದು ಬಂದಿದೆ.

ಹೌದು ಸ್ನೇಹಿತರೆ ಜೂನಿಯರ್ ಚಿರು ಸರ್ಜ ಜನ್ಮ ಪಡೆದು ಆಗಸ್ಟ್ ಗೆ 9ತಿಂಗಳು ಆಗುತ್ತದೆ. ಈ ಹಿನ್ನೆಲೆಯಲ್ಲಿ ಗುರುಹಿರಿಯರು ನಾಮಕರಣ ಕಾರ್ಯಕ್ರಮ ಮಾಡಲು ನಿಶ್ಚಯಿಸಿದ್ದಾರೆ. ಚಿರು ಸರ್ಜಾ ರವರ ಆಸೆಯಂತೆ ಹೆಣ್ಣು ಮಗು ಹುಟ್ಟಿದರೆ ಲಕ್ಷ್ಮಿ ಎಂದು ಹಾಗೂ ಗಂಡು ಮಗು ಹುಟ್ಟಿದರೆ ಕಿಶೋರ್ ಸರ್ಜಾ ಎಂಬುದಾಗಿ ನಾಮಕರಣ ನೀಡಲು ನಿರ್ಧರಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ನಾಮಕರಣ ಕಾರ್ಯಕ್ರಮ ನಡೆಯಲಿದ್ದು ಜೂನಿಯರ್ ಚಿರುಸರ್ಜ ಗೆ ಯಾವ ಹೆಸರು ಇಡುತ್ತಾರೆ ಎಂಬುದು ಕಾದು ನೋಡಬೇಕಾಗಿದೆ.

Comments are closed.