Neer Dose Karnataka
Take a fresh look at your lifestyle.

ಕನ್ನಡ ಪ್ರಖ್ಯಾತ ಮಾಧ್ಯಮ ವಾಹಿನಿ ಪಬ್ಲಿಕ್ ಟಿವಿ ಓನರ್ ರಂಗಣ್ಣ ಅಲ್ಲ, ಇನ್ಯಾರು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕಿರುತೆರೆಯಲ್ಲಿ ಚಾನೆಲ್ ಗಳ ಸಂಖ್ಯೆ ವಿಪರೀತವಾಗಿ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಚಾನೆಲ್ಗಳ ಸಂಖ್ಯೆ ಹೆಚ್ಚುತ್ತಲಿವೆ. ಅದರಲ್ಲೂ ನ್ಯೂಸ್ ಚಾನೆಲ್ ಗಳ ಸಂಖ್ಯೆಯಂತೂ ಕೇಳುವುದೇ ಬೇಡ ನಿನ್ನೆ 5 ಚಾನಲ್ ಗಳಿದ್ದರೆ ಇವತ್ತು 10 ಚಾನಲ್ ಗಳಾಗಿ ಪರಿವರ್ತನೆಯಾಗುತ್ತಿದೆ. ಇನ್ನು ಇವೆಲ್ಲ ಚಾನೆಲ್ಗಳಲ್ಲಿ ಕೆಲಸಗಳು ಮಾತ್ರ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮೊದಲ ಪ್ರಾಶಸ್ತ್ಯ ದಲ್ಲಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೆಸರು ಹಾಗೂ ಚರ್ಚೆಗೆ ಗ್ರಾಸವಾಗಿರುವ ಕಿರುತೆರೆಯ ಚಾನಲ್ ಎಂದರೆ ಅದು ಪಬ್ಲಿಕ್ ಟಿವಿ. ಪಬ್ಲಿಕ್ ಟಿವಿ ಎಂದಾಕ್ಷಣ ನೆನಪಿಗೆ ಬರುವುದು ಪಬ್ಲಿಕ್ ಟಿವಿ ರಂಗಣ್ಣ ಅಥವಾ ಎಚ್ಆರ್ ರಂಗನಾಥ್. ಇವರ ನೇರ ಹಾಗೂ ತೀಕ್ಷ್ಣ ನುಡಿ ಪ್ರೇಕ್ಷಕರ ಮನಸ್ಸಿನಲ್ಲಿ ವಿಪರೀತವಾಗಿ ಪರಿಣಾಮ ಬೀರಿದೆ ಹಾಗಾಗಿ ಇವರ ಚಾನಲನ್ನು ಪ್ರಾರಂಭವಾದಾಗಿನಿಂದಲೂ ಮೆಚ್ಚುತ್ತಲೇ ಇದ್ದಾರೆ. ಪಬ್ಲಿಕ್ ಟಿವಿ ಎಂದಾಕ್ಷಣ ರಂಗಣ್ಣನೇ ಓನರ್ ಎಂದು ನಿಮಗೆ ಅನಿಸಿರಬಹುದು ಆದರೆ ನಿಜವಾದ ವಿಷಯ ಅದಲ್ಲ.

ಹೌದು ಸ್ನೇಹಿತರೆ ಹಿರಿಯ ಪತ್ರಕರ್ತರಾಗಿರುವ ರಂಗಣ್ಣ ಅಥವಾ ಎಚ್ಆರ್ ರಂಗನಾಥ್ ರವರ ಪಬ್ಲಿಕ್ ಟಿವಿಯ ಓನರ್ ಮೂವರು ಮಂದಿ ಇದ್ದಾರೆ. ಅವರು ಯಾರನ್ನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಮನೋಹರನ್ ಗೋವಿಂದಸ್ವಾಮಿ ನಾಯ್ಡು. ಇವರು ಪಬ್ಲಿಕ್ ಟಿವಿಯ ಮೊದಲ ಓನರ್. ಹೌದು ಸ್ನೇಹಿತರೆ ಇವರು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ಆಡಿಯೋ ಕಂಪನಿ ಯಾಗಿರುವ ಲಹರಿ ಸಂಸ್ಥೆಯ ವೇಲು ರವರ ಸಹೋದರ ಕೂಡ ಹೌದು. ಇನ್ನು ಇವರು ಪಬ್ಲಿಕ್ ಟಿವಿಯಲ್ಲಿ 22% ಪಾಲುದಾರಿಕೆ ಹೊಂದಿದ್ದಾರೆ. ಇನ್ನು ಎರಡನೇ ಓನರ್ ರಾಕ್ ಲೈನ್ ವೆಂಕಟೇಶ್. ಕೇವಲ ಕನ್ನಡ ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಸಿನಿಮಾವನ್ನು ನಿರ್ಮಾಣ ಮಾಡುವ ತಾಕತ್ತನ್ನು ಹೊಂದಿರುವ ಕನ್ನಡದ ಖ್ಯಾತಿಯ ನಿರ್ಮಾಪಕ. ಇವರು ಕೂಡ ಪಬ್ಲಿಕ್ ಟಿವಿಯಲ್ಲಿ 22% ಪಾಲುದಾರಿಕೆ ಹೊಂದಿದ್ದಾರೆ. ಇನ್ನು ಮೂರನೇ ಓನರ್ ಸ್ವತಹ ಎಚ್ಆರ್ ರಂಗನಾಥ್ ಅವರೇ. ತಾತ ಹಾಗೂ ಹಿರಿಯ ಪತ್ರಕರ್ತರಾಗಿ ಮಾಧ್ಯಮ ಕ್ಷೇತ್ರದಲ್ಲಿ ಸುದ್ದಿ ಮಾಡಿರುವ ರಂಗಣ್ಣನವರು ಪಬ್ಲಿಕ್ ಟಿವಿ 54% ಪಾಲುದಾರಿಕೆ ಹೊಂದಿದ್ದಾರೆ.

Comments are closed.