Neer Dose Karnataka
Take a fresh look at your lifestyle.

ಕಾಮಿಡಿ ಕಿಲಾಡಿಗಳು ಸಂಜು ಬಸಯ್ಯ ಅವರ ಪ್ರೇಯಸಿ ಹೇಗಿದ್ದಾರೆ ಗೊತ್ತಾ?? ಹೇಗಿದೆ ನೋಡಿ ಕ್ಯೂಟ್ ಜೋಡಿ

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ವಾಹಿನಿಯಲ್ಲಿ ಮೂಡಿಬರುತ್ತಿರುವ ಕಾಮಿಡಿ ಪ್ರೋಗ್ರಾಮ್ ಗಳು ಸಾಕಷ್ಟು ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದಿವೆ. ಅದರಲ್ಲಿ ಒಂದು ಕಾರ್ಯಕ್ರಮ ಜೀ ಕನ್ನಡ ವಾಹಿನಿಯ ಕಾಮಿಡಿ ಕಿಲಾಡಿಗಳು ಪ್ರೋಗ್ರಾಮ್ ಕೂಡ ಸಾಕಷ್ಟು ಜನ ಮನ್ನಣೆಯನ್ನೂ ಗಳಿಸಿಕೊಂಡಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ನಿಮಗೆ ಸಂಜುಬಸಯ್ಯ ರವರ ಪರಿಚಯವಿರಬಹುದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಇವರು ಕುಬ್ಜ ದೇಹಿ ಆದರೂ ಕೂಡ ಇವರು ಮನೋರಂಜನೆ ನೀಡುವುದರಲ್ಲಿ ಎಲ್ಲರಿಗಿಂತಲು ಎತ್ತಿದ ಕೈ.

ಹೀಗೆ ಇವರು ಬಂದಿದ್ದು ಮಾತ್ರ ನಾಟಕ ಮಂಡಳಿಯ ಸಂಸ್ಥೆಯಿಂದ. ಉತ್ತರ ಕರ್ನಾಟಕದ ನಾಟಕ ಮಂಡಳಿ ಸಂಸ್ಥೆಯಿಂದ ತಮ್ಮ ಪ್ರತಿಭೆಯ ಮೂಲಕ ಕನ್ನಡ ಕಿರುತೆರೆಯ ವಾಹಿನಿಯಾದ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ಪ್ರೋಗ್ರಾಮ್ ಗೆ ಬಂದು ಎಲ್ಲರ ಮನಗೆದ್ದು ಈಗ ಕಿರುತೆರೆಯ ಸೂಪರ್ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಮಾತ್ರವಲ್ಲದೆ ಇವರ ಬಳಿ ಹಲವಾರು ಚಿತ್ರಗಳ ಅವಕಾಶ ಕೂಡ ಕೈಯಲ್ಲಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಶ್ಮಿಕ ಮಂದಣ್ಣ ನಟನೆಯ ಸೂಪರ್ ಹಿಟ್ ಚಿತ್ರ ಯಜಮಾನ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇನ್ನು ಇತ್ತೀಚಿಗಷ್ಟೇ ಸಂಜುಬಸಯ್ಯ ರವರ ಪ್ರೇಯಸಿಯ ಕುರಿತಂತೆ ಕಾಮಿಡಿ ಕಿಲಾಡಿಗಳು ಪ್ರೋಗ್ರಾಮ್ ನಲ್ಲಿ ಅನಾವರಣಗೊಂಡಿದೆ.

ಹೌದು ಸ್ನೇಹಿತರೆ ಈ ಕುರಿತಂತೆ ಸಂಜುಬಸಯ್ಯ ಅವರನ್ನು ಕೇಳಿದಾಗ ಅವರು ಐದು ವರ್ಷಗಳ ಹಿಂದೆ ನಾಟಕ ಮಂಡಳಿ ಇದ್ದಾಗ ಒಟ್ಟಿಗೆ ನಟಿಸಿದ್ದರು. ಆಗಲೇ ಪ್ರಪೋಸ್ ಮಾಡಿದಾಗ ಅವರ ಪ್ರೇಯಸಿ ಒಪ್ಪಿಕೊಂಡಿದ್ದರು. ಸಂಜು ಬಸಯ್ಯ ರವರ ಪ್ರೇಯಸಿ ನೋಡಲು ಯಾವ ಹೀರೋಯಿನ್ ಗಿಂತಲೂ ಕಮ್ಮಿ ಇಲ್ಲ. ಅಷ್ಟೊಂದು ಸೌಂದರ್ಯವತಿ ಹಾಗೂ ಪ್ರತಿಭಾವಂತ ಯಾಗಿದ್ದಾರೆ. ಇನ್ನು ಇವರಿಬ್ಬರು ಕಾಮಿಡಿ ಕಿಲಾಡಿಗಳು ವೇದಿಕೆಯಲ್ಲಿ ಕೂಡ ಒಟ್ಟಾಗಿ ಡ್ಯಾನ್ಸ್ ಕೂಡ ಮಾಡಿದ್ದಾರೆ. ಇನ್ನು ಸಂಜು ಬಸಯ್ಯ ಅವರ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.