Neer Dose Karnataka
Take a fresh look at your lifestyle.

ತನ್ನ ಕನಸಿನಿಂದ ಸುಂದವಾದ ಮನೆಗೆ ಟಾಪ್ ನಟ ಶಿವ ರಾಜ್ ಕುಮಾರ್ ರವರು ಇಟ್ಟಿರುವ ವಿಶೇಷ ಹೆಸರು ಏನು ಗೊತ್ತೇ??

0

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದಾಗ ನಮಗೆ ನೆನಪಾಗುವುದು ಡಾಕ್ಟರ್ ರಾಜಕುಮಾರ್ ಅವರ ಕುಟುಂಬ. ಕನ್ನಡ ಚಿತ್ರರಂಗದ ನಟ ಸಾರ್ವಭೌಮ ರಾಗಿರುವ ರಾಜಕುಮಾರ್ ಅವರು ನಮ್ಮ ಕನ್ನಡ ಚಿತ್ರ ರಂಗಕ್ಕೆ ಮೂರು ಮುತ್ತುಗಳನ್ನು ನೀಡಿದ್ದಾರೆ. ಅವರೇ ಶಿವಣ್ಣ ರಾಘಣ್ಣ ಹಾಗೂ ನಮ್ಮ ಪ್ರೀತಿಯ ಅಪ್ಪು.

ನಾವು ಇಂದು ಸೆಂಚುರಿಸ್ಟಾರ್ ಶಿವಣ್ಣರವರ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಮುಂಬೈನಲ್ಲಿ ತರಬೇತಿಯನ್ನು ಪಡೆದು ಆನಂದ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶಿವಣ್ಣ ನಂತರ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಮೂರು ಚಿತ್ರಗಳ ಶ’ತದಿನೋತ್ಸವವನ್ನು ಪರಿಗಣಿಸಿಕೊಂಡು ಅಭಿಮಾನಿಗಳು ಇವರಿಗೆ ಹ್ಯಾಟ್ರಿಕ್ ಹೀರೋ ಎಂಬುದಾಗಿ ನಾಮಕರಣ ಮಾಡುತ್ತಾರೆ.

ಅಂದಿನ ದಿನಗಳಲ್ಲಿ ಅವರ ತಂದೆಗೆ ಪೈಪೋಟಿ ನೀಡಿದಂತಹ ಅದ್ಭುತ ನಟನಾಗಿದ್ದರು ನಮ್ಮ ಶಿವರಾಜ್ ಕುಮಾರ್. ಅಂದಿನ ಕಾಲದ ಜೀವ ಉದಯೋನ್ಮುಖ ನಟರಲ್ಲಿ ಅಗ್ರಗಣ್ಯನಾಗಿ ಶಿವಣ್ಣನವರು ತಮ್ಮ ನಟನೆಯ ಮೂಲಕ ಕರ್ನಾಟಕದಾದ್ಯಂತ ಪ್ರೇಕ್ಷಕರ ಮನಗೆದ್ದಿದ್ದರು. ಶಿವಣ್ಣನವರ ಡ್ಯಾನ್ಸಿಂಗ್ ಸ್ಕಿಲ್ಸ್ ಹಾಗೂ ನಟನೆ ಮತ್ತು ದೃಶ್ಯಗಳು ಮೂಲಕ ತಾವು ಎಲ್ಲರಿಗಿಂತ ವಿಭಿನ್ನ ಎಂಬುದಾಗಿ ಶಿವಣ್ಣನವರು ತಮ್ಮನ್ನು ತಾವು ರೂಪಿಸಿಕೊಂಡರು. ಇಂದಿಗೂ ಕೂಡ ವಯಸ್ಸು 59 ಆದರೂ ಕೂಡ ಯುವ ನಟರು ನಾಚುವಂತೆ ಪ್ರದರ್ಶನ ನೀಡುತ್ತಾರೆ ನಮ್ಮ ಶಿವಣ್ಣ. ಇನ್ನು ಶಿವಣ್ಣನವರು ತಮ್ಮ ಮನೆಯನ್ನು ನಾಗವಾರದಲ್ಲಿ ಕೆಲವು ವರ್ಷಗಳ ಹಿಂದಷ್ಟೇ ಕಟ್ಟಿದ್ದಾರೆ.

ಈ ಮನೆಗೆ ಏನೆಂದು ಹೆಸರಿಟ್ಟಿದ್ದಾರೆ ಗೊತ್ತಾ ಸ್ನೇಹಿತರೆ. ಹೌದು ಸ್ನೇಹಿತರೆ ನಾಗವಾರದಲ್ಲಿ ಐಷಾರಾಮಿಯಾಗಿ ನಿರ್ಮಿಸಿರುವ ಈ ಮನೆಗೆ ಶಿವಣ್ಣನವರು ತಂದೆ ಡಾ ರಾಜಕುಮಾರ್ ಅವರ ಜ್ಞಾಪಕಾರ್ಥವಾಗಿ ಶ್ರೀಮುತ್ತು ಎಂಬುದಾಗಿ ನಾಮಕರಣ ಮಾಡಿದ್ದಾರೆ. ಮುತ್ತುರಾಜ್ ಎನ್ನುವುದು ಡಾ ರಾಜಕುಮಾರ್ ಅವರ ಮೂಲ ಹೆಸರಾಗಿದೆ. ಹಾಗಾಗಿ ಸದಾಕಾಲ ತಂದೆಯ ನೆನಪಾಗುವಂತೆ ಈ ಮನೆ ಹೆಸರು ಅವರ ಹೆಸರಿನಲ್ಲಿ ಇಡಲಾಗಿದೆ. ಇಂದು ತಂದೆಯಂತೆ ಕನ್ನಡ ಚಿತ್ರರಂಗವನ್ನು ನಾಯಕನಾಗಿ ಮುಂದೆ ನಿಂತು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಿಜವಾದ ದೊಡ್ಡಮನೆಯ ದೊಡ್ಡಮಗ ಎಂಬುದಾಗಿ ನಿರೂಪಿಸಿದ್ದಾರೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.