Neer Dose Karnataka
Take a fresh look at your lifestyle.

ಎಲ್ಲ ಬಿಟ್ಟು ದೂರವಿದ್ದರು ವಿನೋದ್ ರಾಜ್ ರವರನ್ನು ಬಿಡದ ಕಾಣದ ಕೈ, ಮತ್ತೊಮ್ಮೆ ಬೇಸರ ವ್ಯಕ್ತ ಪಡಿಸಿದ ವಿನೋದ್ ಅಣ್ಣ, ನಡೆದದ್ದೇನು ಗೊತ್ತೇ??

9

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಪ್ರತಿಭೆ ಇದ್ದರೂ ಸಹ ಅವಕಾಶ ಪಡೆಯಲಾಗದಂತಹ ದುರದೃಷ್ಟವಂತ ನಟ ಎಂದಾಗ ನಮಗೆ ನೆನಪಾಗುವುದು ಎಲ್ಲರ ನೆಚ್ಚಿನ ನಟ ವಿನೋದ್ ರಾಜ್ ರವರು. ಹೌದು ಸ್ನೇಹಿತರೆ ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಡ್ಯಾನ್ಸಿಂಗ್ ಐಕಾನ್ ಆಗಿ ಖ್ಯಾತ ರಾಗಿದ್ದಂತಹ ವಿನೋದ್ ರಾಜುರವರು ಕೆಲವೇ ವರ್ಷಗಳಲ್ಲಿ ಕನ್ನಡ ಚಿತ್ರರಂಗವನ್ನು ಸಂಪೂರ್ಣವಾಗಿ ಬಿಟ್ಟು ಹೋಗುವಂತ ಪರಿಸ್ಥಿತಿ ಬಂದಿತು.

ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಯಾವ ಚಿತ್ರದಲ್ಲಿ ಕೂಡ ವಿನೋದ್ ರಾಜ್ ರವರು ಕಾಣಿಸಿಕೊಳ್ಳುತ್ತಿಲ್ಲ. ಖ್ಯಾತ ಹಿರಿಯ ನಟಿ ಲೀಲಾವತಿಯವರ ಮಗನಾಗಿದ್ದರೂ ಸಹ ಕನ್ನಡ ಚಿತ್ರರಂಗದಲ್ಲಿ ಅವರನ್ನು ಇರಲು ಯಾರೂ ಕೂಡ ಬಿಡಲಿಲ್ಲ. ಇಂದು ಕೂಡ ಕನ್ನಡಿಗರು ವಿನೋದ್ ರಾಜ್ ಅವರನ್ನು ರಿಯಾಲಿಟಿ ಶೋನ ಜಡ್ಜ್ ಆಗಿ ಮಾಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಒತ್ತಾಯಿಸುತ್ತಿರುತ್ತಾರೆ. ಇನ್ನು ಈ ಲಾಕ್ ಡೌನ್ ಸಮಯದಲ್ಲಿ ವಿನೋದ್ ರಾಜ್ ರವರು ತಮ್ಮ ಆಸ್ತಿಯನ್ನು ಮಾರಿ ಬಂದಂತಹ ಹಣದಲ್ಲಿ ಕಾರ್ಮಿಕ ಕುಟುಂಬಗಳಿಗೆ ಆಹಾರ ಪದಾರ್ಥಗಳು ಹಾಗೂ ಆರ್ಥಿಕ ರೀತಿಯಲ್ಲಿ ಸಹಾಯ ಮಾಡಿ ಎಲ್ಲರ ಮನಗೆದ್ದಿದ್ದರು. ಇನ್ನು ಇತ್ತೀಚಿಗಷ್ಟೇ ವಿನೋದರಾಜ ರವರು ಸಾಕಷ್ಟು ಬೇಸರ ದಲ್ಲಿದ್ದಾರೆ.

ಹೌದು ಸ್ನೇಹಿತರೆ ಎಂಟು ತಿಂಗಳ ಹಿಂದಷ್ಟೇ ವಿನೋದ್ ರಾಜ್ ರವರ ಎಡಿಟೆಡ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ರೀತಿಯಲ್ಲಿ ಬಿಂಬಿಸಲಾಗಿತ್ತು, ಕೆಲವೊಂದು ಫೋಟೋ ಎಡಿಟ್ ಮಾಡಿ, ಬಹಳ ಕೆಟ್ಟ ರೀತಿಯಲ್ಲಿ ತೋರಿಸಲಾಗಿತ್ತು. ಯಾರಿಗೂ ಕೆಟ್ಟದ್ದನ್ನು ಬಯಸದ ವಿನೋದ್ ರಾಜ್ ರವರಿಗೆ ಈ ತರಹ ಮಾಡಿರುವುದು ಸಹಿಸಲಾರದ ಆಗಿತ್ತು. ಇವರು ಫೇಸ್ಬುಕ್ ಅಥವಾ ವಾಟ್ಸಪ್ಪ್ ಬಳಸದ ಕಾರಣ ಇವುಗಳನ್ನು ಇವರು ನೋಡಿ ಕೂಡ ಇರಲಿಲ್ಲ. ಆದರೆ ಅಂದು ಈ ವಿಷಯ ತಿಳಿದು ಬಹಳ ಬೇಸರವಾಗಿ ಕೇಸ್ ಹಾಕಿದ್ದರು. ಇದೀಗ ಈ ಕುರಿತಂತೆ ತನಿಖಾ ಹಂತದಲ್ಲಿ ಕೆಲವೊಂದು ಮಾಹಿತಿಗಳು ಸಿಕ್ಕಿದ್ದು, ಇದರ ಹಿಂದೆ ಇರುವ ಕಾಣದ ಕೈ ಯಾರದ್ದು ಎಂದು ಬಯಲಾದರೆ ಸಾಕು ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.