Neer Dose Karnataka
Take a fresh look at your lifestyle.

ಫೈನಲ್ ವಾರದ ಕೊನೆಯ ವರೆಗೂ ತಲುಪಿ ಹೊರಬಂದ ದಿವ್ಯ ರವರಿಗೆ ಸಿಕ್ಕ ದುಡ್ಡೆಷ್ಟು ಗೊತ್ತೇ?? ಇಷ್ಟೇನಾ ಕೊಡೋದು??

4

ನಮಸ್ಕಾರ ಸ್ನೇಹಿತರೇ ಅಂತು ಇಂತು ಬಿಗ್ ಬಾಸ್ ಕನ್ನಡ ಸೀಸನ್ 8ರ ಫಿನಾಲೆಗೆ ಇನ್ನು ಕೇವಲ ಮೂರು ದಿನಗಳಷ್ಟೇ ಬಾಕಿ ಉಳಿದಿದೆ. ಈಗಾಗಲೇ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದೆಂಬ ಕುರಿತಂತೆ ಚರ್ಚೆಗಳು ಹಾಗೂ ನಿರೀಕ್ಷೆಗಳು ಸಾಮಾಜಿಕ ಜಾಲತಾಣಗಳಲ್ಲಿ ಗಗನದೆತ್ತರಕ್ಕೆ ಮುಟ್ಟಿದೆ. ಇನ್ನೂ ಇವೆಲ್ಲದರ ನಡುವೆ ಕಳೆದ ಶನಿವಾರ ಹಾಗೂ ಭಾನುವಾರ ಶಮಂತ್ ಗೌಡ ಹಾಗೂ ಶುಭಾ ಪೂಂಜಾ ರವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದರು. ನಂತರದ ದಿನಗಳಲ್ಲಿ ಒಂದು ಎಲಿಮಿನೇಷನ್ ಬಾಕಿ ಇತ್ತು.

ಈಗ ಬಂದಿರುವ ಸುದ್ದಿಯ ಪ್ರಕಾರ ನಟಿ ದಿವ್ಯ ಸುರೇಶ್ ಅವರು ಆ ಕೊನೆಯ ಎಲಿಮಿನೇಷನ್ ನ ಸ್ಪರ್ಧಿಯಾಗಿದ್ದಾರೆ. ಹೌದು ಸ್ನೇಹಿತರೆ ದಿವ್ಯ ಸುರೇಶ್ ರವರು ಮೀಟ್ ವೀಕ್ ಎಲಿಮಿನೇಷನ್ ಗೆ ಗುರಿಯಾಗಿ ಈಗ ಮನೆಯಿಂದ ಹೊರ ಹೋಗಿದ್ದಾರೆ. ಬಿಗ್ ಬಾಸ್ ಮನೆಗೆ ಬರಬೇಕಾದರೆ ಕನ್ನಡ ಚಿತ್ರರಂಗದಲ್ಲಿ ನನಗೆ ಪ್ರತಿಭೆಗೆ ಅವಕಾಶ ದೊರೆಯುತ್ತಿಲ್ಲ ಎಂಬುದಾಗಿ ಹೇಳಿಕೊಂಡಿದ್ದ ದಿವ್ಯ ಸುರೇಶ್ ರವರು ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಲವಲವಿಕೆಯಿಂದಲೇ ಗಳಲ್ಲಿ ಕೂಡ ಭಾಗವಹಿಸಿದ್ದರು. ಮೊದಲಿಗೆ ಆಗಾಗ ಮಂಜು ಪಾವಗಡ ರವರ ಜೊತೆಗೆ ಕಾಣಿಸಿಕೊಳ್ಳುತ್ತಿದ್ದ ಅವರು ನಂತರದ ದಿನಗಳಲ್ಲಿ ಅವರಿಂದ ದೂರವಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ದಿವ್ಯ ಸುರೇಶ್ ರವರು ಒಟ್ಟು 17 ವಾರಗಳನ್ನು ಪೂರ್ಣಗೊಳಿಸಿದ್ದಾರೆ.

ಇನ್ನು ದಿವ್ಯ ಸುರೇಶ್ ರವರು ಮನೆಯಿಂದ ಹೊರಬರಬೇಕಾದರೆ ತಾವಿದ್ದ 17 ವಾರ ಗಳಿಗೆ ಎಷ್ಟು ಸಂಭಾವನೆ ಪಡೆದಿದ್ದಾರೆ ಎಂದು ಗೊತ್ತಾ ಸ್ನೇಹಿತರೆ. ಬನ್ನಿ ನಾವು ದಿವ್ಯ ಸುರೇಶ್ ರವರು ಪಡೆದುಕೊಂಡಂತಹ ಸಂಭಾವನೆಯ ಕುರಿತಂತೆ ಹೇಳುತ್ತೇವೆ. ಹೌದು ಸ್ನೇಹಿತರೆ ದಿವ್ಯ ಸುರೇಶ ಗೌಡ್ರು ಬಿಗ್ ಬಾಸ್ ಮನೆಯಲ್ಲಿ ಬರೋಬ್ಬರಿ 17 ವಾರಗಳ ಕಾಲ ಇದ್ದರು. ಪ್ರತಿ ವಾರಕ್ಕೆ ತಲಾ 30 ಸಾವಿರ ರೂಪಾಯಿಯಂತೆ ಒಟ್ಟು 5 ಲಕ್ಷದ 10 ಸಾವಿರ ರೂಪಾಯಿಗಳನ್ನು ಕಲರ್ಸ್ ಕನ್ನಡ ವಾಹಿನಿಯ ಮುಖಾಂತರ ಪಡೆದುಕೊಂಡಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಅನ್ನು ಯಾರು ಗೆಲ್ಲಬಹುದೆಂಬ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವುದರ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.