Neer Dose Karnataka
Take a fresh look at your lifestyle.

ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಫೈನಲ್ ಪ್ರಸಾರಕ್ಕೆ ಹೊಸ ಟ್ವಿಸ್ಟ್ ಏನು ಗೊತ್ತೇ?? ಇದೀಗ ಕೊಂಚ ಮನರಂಜನೆ ಹೆಚ್ಚು.

6

ನಮಸ್ಕಾರ ಸ್ನೇಹಿತರೇ ಈಗಾಗಲೇ ಬಿಗ್ ಬಾಸ್ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸಂಚಲನವನ್ನುಂಟು ಮಾಡುತ್ತಿದೆ ಕಾರಣ ಈ ಬಾರಿಯ ಬಿಗ್ ಬಾಸ್ ಸೀಸನ್ ಎಂಟರ ಫಿನಾಲೆ ಇನ್ನೇನು ಹತ್ತಿರ ಬರುತ್ತಿದ್ದಂತೆ ಕಾರ್ಯಕ್ರಮದ ಟಿಆರ್ಪಿ ಕೂಡ ಕಿರುತೆರೆಯಲ್ಲಿ ಎಲ್ಲಾ ಕಾರ್ಯಕ್ರಮಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಇನ್ನು ಇತ್ತೀಚೆಗೆ ಕೊನೆಯ ಮೂರು ಅಭ್ಯರ್ಥಿಗಳು ಎಲಿಮಿನೇಟ್ ಆಗಿ ಮನೆಯಿಂದ ಹೊರಹೋದ ನಂತರ ಟಾಪ್ 5 ಸ್ಪರ್ಧಿಗಳು ಈಗಾಗಲೇ ಫೈನಲ್ಗೆ ತೇರ್ಗಡೆ ಹೊಂದಿದ್ದಾರೆ.

ಇತ್ತೀಚಿಗಷ್ಟೇ ಶುಭಾಪೂಂಜಾ ಶಮಂತ್ ಗೌಡ ಹಾಗೂ ದಿವ್ಯ ಸುರೇಶ್ ರವರು ಎಲಿಮಿನೇಷನ್ ಆಗಿ ಫೈನಲ್ ನಿಂದ ವಂಚಿತರಾಗಿದ್ದಾರೆ. ಇನ್ನು ಫೈನಲ್ಗೆ ಮಂಜು ಪಾವಗಡ ವೈಷ್ಣವಿ ಗೌಡ ಅರವಿಂದ್ ದಿವ್ಯ ಉರುಡುಗ ಹಾಗೂ ಪ್ರಶಾಂತ್ ಸಂಬರ್ಗಿ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಯಾರು ಈ ಬಾರಿಯ ಫೈನಲ್ ಅನ್ನು ಗೆಲ್ಲಬಹುದು ಎಂಬುದಾಗಿ ಚರ್ಚೆಗಳು ಪ್ರಾರಂಭವಾಗಿದೆ. ಇನ್ನು ಈ ಬಾರಿಯ ಫೈನಲ್ ಸಂಚಿಕೆಗಳ ಪ್ರಸಾರದ ಸಮಯ ಕೂಡ ಬದಲಾವಣೆಯಾಗಿದೆ.

ಈ ಬಾರಿಯ ಫೈನಲ್ ಸಮಯದ ಕುರಿತಂತೆ ಕಲರ್ಸ್ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ತಿಳಿಸಿದ್ದಾರೆ. ಹೌದು ಸ್ನೇಹಿತರೆ ಸಾಮಾನ್ಯವಾಗಿ ಬಿಗ್ ಬಾಸ್ ಕನ್ನಡ ಸಂಚಿಕೆ 9:00 ರಿಂದ ಪ್ರಾರಂಭವಾಗುತ್ತಿತ್ತು. ಈಗ ಈ ಬಾರಿಯ ಫೈನಲ್ ಅನ್ನು ಶನಿವಾರ ಹಾಗೂ ಭಾನುವಾರ ಸಂಜೆ 6 ರಿಂದ ಪ್ರಾರಂಭ ಮಾಡಲು ಕಲರ್ಸ್ ಕನ್ನಡ ವಾಹಿನಿ ನಿರ್ಧರಿಸಿದೆ. ನಿಮಗೆ ಏನು ಅನಿಸುತ್ತದೆ ಸ್ನೇಹಿತರೆ ಈ ಬಾರಿ ಕಿಚ್ಚ ಸುದೀಪ್ ರವರು ವಿಜೇತರಾಗಿ ಯಾರ ಕೈಯನ್ನು ಮೇಲೆ ಎತ್ತಿ ಹಿಡಿಯಬಹುದು ಎಂದು.

Leave A Reply

Your email address will not be published.