Neer Dose Karnataka
Take a fresh look at your lifestyle.

ಸಾವಿರ ವರ್ಷವಾದರೂ ಮೂಳೆ ಸವೆಯದೆ ಇರಲು, ಜಸ್ಟ್ ಹೀಗೆ ಹಾಲಿನಲ್ಲಿ ಮಾಡಿ ಕುಡಿಯಿರಿ, ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿಗೆ ಎಲ್ಲಾ ರೀತಿಯಲ್ಲೂ ಆರೋಗ್ಯ ಸಮಸ್ಯೆ ಕಾಡುತ್ತಿದೆ. ನಮ್ಮ ಪೂರ್ವಜರು ಬದುಕಿದಂಥ ಆರೋಗ್ಯಕರ ಜೀವನವನ್ನು ನಮಗೆ ನಡೆಸಲು ಸಾಧ್ಯವೇ ಇಲ್ಲ. ನಮ್ಮ ಜೀವನ ಶೈಲಿಯೇ ಇದಕ್ಕೊಂದು ಪ್ರಮುಖ ಕಾರಣ ಎನ್ನಬಹುದು. ಇನ್ನು ವರ್ಷ ನಲವತ್ತು ದಾಟುವಷ್ಟರಲ್ಲಿ ಮೂಳೆ ಸವೆತ, ಮಂಡಿ ನೋವು, ಕಣ್ಣು ಮಂಜು ಈ ಎಲ್ಲಾ ಸಮಸ್ಯೆಗಳೂ ದೇಹವನ್ನು ಆಕ್ರಮಿಸಿಕೊಂಡು ಬಿಡುತ್ತವೆ. ಇದಕ್ಕೆ ನಾವು ಮೊದಲು ನಮ್ಮ ಜೀವನ ಶೈಲಿ ಹಾಗೂ ಆಹಾರ ಕ್ರಮವನ್ನು ಸರಿಪಡಿಸಿಕೊಳ್ಳುವುದು ಅತ್ಯಗತ್ಯ.

ನಾವು ನಿತ್ಯವೂ ಬಳಸುವ ಕೆಲವು ಆಹಾರ ಪದಾರ್ಥಗಳಲ್ಲಿ ಅತ್ಯುತ್ತಮ ಆರೋಗ್ಯ ಉಪಯೋಗಗಳು ಇರುತ್ತವೆ. ನಾವು ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಅಷ್ಟೇ. ಅಂಥ ಒಂದು ವಸ್ತು ಬಾದಾಮಿ. ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆ ಆದಾಗ ಮೂಳೆ ಸವೆತ ಉಂಟಾಗುತ್ತದೆ. ಇದು ವಯಸ್ಸಾದವರಲ್ಲಿ ಮಾತ್ರವಲ್ಲ, ಮಕ್ಕಳಲ್ಲಿಯೂ ಕೂಡ ಕಾಡುವಂಥ ಸಮಸ್ಯೆ. ಹಾಗಾಗಿ ಈ ಸಮಸ್ಯೆಯಿಂದ ಮಕ್ಕಳನ್ನು ದೂರ ಇಡಲು ಬಾದಾಮಿಯನ್ನು ತಿನ್ನಲು ಕೊಡುವುದು ಅತ್ಯಂತ ಮುಖ್ಯ.

ಬ್ಬಾದಾಮಿಯಲ್ಲಿರುವ ವಿಟಮಿನ್, ಕ್ಯಾಲ್ಸಿಯಂ ಜೀವಸತ್ವಗಳು ಮೂಳೆಗಳನ್ನು ಬಲವಾಗಿಸುವುದು ಮಾತ್ರವಲ್ಲದೇ ಕಣ್ಣಿನ ಆರೋಗ್ಯಕ್ಕೂ ಅಷ್ಟೇ ಉಪಯುಕ್ತ. ದಿನವೂ ನಾಕೈದು ಬಾದಾಮಿ ಬೀಜಗಳನ್ನು ನೆನೆಸಿಕೊಂಡು ತಿಂದರೆ ಕಣ್ಣಿನ ದೃಷ್ಟಿ ಚುರುಕಾಗುತ್ತದೆ. ಬೇಗ ಕಣ್ಣಿನ ಪೊರೆಯೂ ಬರುವುದಿಲ್ಲ. ಬಾದಾಮಿಯನ್ನು ರಾತ್ರಿ ಇಡೀ ನೆನೆಸಿಟ್ಟು ಬೆಳಗ್ಗೆ ತಿನ್ನಬೇಕು. ಬಾದಾಮಿ ಸಪ್ಪೆಯನ್ನು ಸುಲಿದು ತಿನ್ನುವುದು ತುಂಬಾನೇ ಒಳ್ಳೆಯದು. ಬಾದಾಮಿಯನ್ನು ರಾತ್ರಿ ನೆನೆಸಿಡುವುದರಿಂದ ಅದರ ಸಂಪೂರ್ಣ ಸತ್ವ ನಮ್ಮ ದೇಹಕ್ಕೆ ದೊರೆಯುತ್ತದೆ. ಇನ್ನು ಬಾದಾಮಿ ಪುಡಿಯನ್ನು ಹಾಲಿನಲ್ಲಿ ಬೆರೆಸಿ ಕುಡಿಯುವುದು ಕೂಡ ದೇಹಕ್ಕೆ ತುಂಬಾನೇ ಒಳ್ಳೆಯದು. ಆದರೆ ನೆನಪಿಡಿ, ಬಾದಾಮಿಯನ್ನು ಅತಿಯಾಗಿ ಸೇವಿಸುವುದು ಕೂಡ ಒಳ್ಳೆಯದಲ್ಲ. ಅದು ದೇಹದ ಉಷ್ಣಾಂಶವನ್ನೂ ಕೂಡ ಹೆಚ್ಚಿಸುತ್ತದೆ. ಹಾಗಾಗಿ ಹಿತ ಮಿತವಾದ ಬಾದಾಮಿ ಸೇವನೆ ದೇಹವನ್ನು ಗಟ್ಟುಮುಟ್ಟಾಗಿಸುವುದರಲ್ಲಿ ಸಂಶಯವಿಲ್ಲ.

Comments are closed.