Neer Dose Karnataka
Take a fresh look at your lifestyle.

ಈ ಕೆಲಸ ಮುಗಿಸಿದ್ದರಷ್ಟೇ ಬನ್ನಿ – ಐಪಿಎಲ್ ಫ್ರಾಂಚೈಸಿಗಳಿಗೆ ಬಿಸಿಸಿಐ ರವಾನಿಸಿದ ಖಡಕ್ ಸಂದೇಶ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಏಪ್ರೀಲ್ – ಮೇ ತಿಂಗಳಲ್ಲಿ ನಡೆಯುತ್ತಿದ್ದ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಸ್ಕ್ಯಾನಿಂಗ್ ಸಲುವಾಗಿ ಬಯೋ ಬಬಲ್ ತೊರೆದಿದ್ದರು. ಆದರೇ ವಾಪಸ್ ಬಂದ ನಂತರ ಅವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಕಾರಣ ಸಂಪೂರ್ಣ ಐಪಿಎಲ್ ನ ಸರಣಿಯನ್ನೆ ಅರ್ಧಕ್ಕೆ ನಿಲ್ಲಿಸಲಾಗಿತ್ತು. ಐಪಿಎಲ್ ನ ಇತಿಹಾಸದಲ್ಲಿಯೇ ಇದು ಮೊದಲು ಎಂಬಂತಾಗಿತ್ತು. ಇನ್ನು ಬಾಕಿ ಉಳಿದಿದ್ದ 32 ಐಪಿಎಲ್ ಪಂದ್ಯಗಳನ್ನ ಬಿಸಿಸಿಐ ದುಬೈ, ಅಬುಧಾಬಿ, ಯುಎಇ ಯಲ್ಲಿ ಇದೇ ಸೆಪ್ಟೆಂಬರ್ 19 ರಿಂದ ಐಪಿಎಲ್ ನ ಮುಂದುವರಿದ ಚರಣ ನಡೆಯಲಿದೆ.

ಸೆಪ್ಟೆಂಬರ್ 19 ರಿಂದ ನಡೆಯುವ ಈ ಐಪಿಎಲ್ ಟೂರ್ನಿ 27 ದಿನಗಳ ಕಾಲ ನಡೆಯಲಿದ್ದು, ಈ ಮಹತ್ವದ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು, ಕೋಚ್ ಗಳು, ತಂಡದ ಸಹಾಯಕ ಸಿಬ್ಬಂದಿಗಳು, ಫ್ರಾಂಚೈಸಿ ಕಡೆಯವರು, ಆಟಗಾರರ ಸ್ನೇಹಿತರು ಹಾಗೂ ಕುಟುಂಬದವರು ಹೀಗೆ ಪ್ರತಿಯೊಬ್ಬರು ಎರಡು ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳುವುದನ್ನು ಕಡ್ಡಾಯ ಮಾಡಿದೆ. ಈ ಬಗ್ಗೆ ಎಲ್ಲಾ ಫ್ರಾಂಚೈಸಿಗಳೊಂದಿಗೆ ಸಭೆ ನಡೆಸಿದ ಬಿಸಿಸಿಐ, ನಿಮ್ಮ ಕಡೆಯವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೇ ಮಾತ್ರ ಐಪಿಎಲ್ ಗೆ ಕರೆತನ್ನಿ ಇಲ್ಲವಾದರೇ ಹತ್ತಿರಕ್ಕೂ ಸೇರಿಸಬೇಡಿ ಎಂಬ ಖಡಕ್ ಸೂಚನೆಯನ್ನು ನೀಡಿದೆ ಎಂದು ಮೂಲಗಳು ಹೇಳುತ್ತಿವೆ.

ಆಟಗಾರರು ಎರಡು ಡೋಸ್ ಲಸಿಕೆ ಹಾಕಿಸಿಕೊಂಡರೇ, ದುಬೈಗೆ ತೆರಳಿದರೆ ಅಲ್ಲಿ ಏಳು ದಿನಗಳ ಕ್ವಾರಂಟೈನ್ ಸಾಕಾಗುತ್ತದೆ. ನಂತರ ಅವರು ಅಭ್ಯಾಸ ನಡೆಸಬಹುದು. ಈ ಭಾರಿಯ ಐಪಿಎಲ್ ನಲ್ಲಿ ಯಾವುದೇ ಅಡಚಣೆಗಳಾಗಬಾರದು. ಹಾಗಾಗಿ ಪ್ರತಿ ಆಟಗಾರರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಬಿಸಿಸಿಐ ಸೂಚಿಸಿದೆ.

ಮುಂದುವರಿದ ಐಪಿಎಲ್ ನ ಮೊದಲ ಪಂದ್ಯ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಮಧ್ಯ ನಡೆಯಲಿದೆ. ಈ ತಂಡಗಳು ಈ ಹಿಂದೆ ಪರಸ್ಪರ ಸೆಣೆಸಿದಾಗ ಕೀರನ್ ಪೋಲಾರ್ಡ್ ರ ಸಾಹಸಮಯಿ ಇನ್ನಿಂಗ್ಸ್ ನಿಂದ ಮುಂಬೈ ಗೆದ್ದಿತ್ತು. ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ತಂಡದ ಕೆಲವು ಪ್ರಮುಖ ಆಟಗಾರರು ಈ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಅವರು ಭಾಗವಹಿಸದಿದ್ದರೇ, ಭಾರತೀಯ ಐಪಿಎಲ್ ಆಟಗಾರರಿಗೆ ಹೆಚ್ಚಿನ ಅವಕಾಶಗಳು ಸಿಗುವ ನೀರಿಕ್ಷೆ ಇದೆ. ಬಿಸಿಸಿಐ ನ ವಿಶೇಷ ಮನವಿಯ ಮೇರೆಗೆ ಆ ದೇಶದ ಆಟಗಾರರು ಕೊನೆಯ ಕ್ಷಣದಲ್ಲಿ ಐಪಿಎಲ್ ನಲ್ಲಿ ಭಾಗವಹಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನ ಕಮೆಂಟ್ ಮೂಲಕ ನಮಗೆ ತಿಳಿಸಿ.

Comments are closed.