Neer Dose Karnataka
Take a fresh look at your lifestyle.

ಮಂಜು ಪಾವಗಡ ಮದುವೆಗೆ ರೆಡಿ?? ದಿವ್ಯ ಸುರೇಶ್ ರವರಿಗೆ ಮಂಜು ತಂದೆ ತಾಯಿಯಿಂದ ಸಿಕ್ಕ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೆ ಈಗಾಗಲೇ ಬಿಗ್ ಬಾಸ್ ಫಿನಾಲೆ ಮುಗಿದು ಮಂಜು ಪಾವಗಡ ರವರು ವಿಜೇತರು ಎಂಬುದು ಈಗಾಗಲೇ ಘೋಷಣೆಯಾಗಿದೆ. ಪಾವಗಡ ದಿಂದ ಬೆಂಗಳೂರಿಗೆ ಜೆಪಿನಗರದ ಪೆಟ್ರೋಲ್ ಬಂಕಿನಲ್ಲಿ ಕೆಲಸ ಮಾಡಿ ನಂತರ ಮಜಾಭಾರತದಲ್ಲಿ ಎಲ್ಲರನ್ನೂ ನಕ್ಕು ನಲಿಸಿ ನಂತರ ಬಿಗ್ ಬಾಸ್ ನಲ್ಲಿ ಬಂದು ಈಗ ಬಿಗ್ ಬಾಸ್ ಕನ್ನಡ ಸೀಸನ್ ಎಂಟರ ವಿಜೇತರಾಗಿ ಎಲ್ಲರ ಮನಗೆದ್ದಿದ್ದಾರೆ ಮಂಜು ಪಾವಗಡ.

ಹೌದು ಸ್ನೇಹಿತರೆ ಇನ್ನು ಬಿಗ್ ಬಾಸ್ ಫಿನಾಲೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಂಜು ಪಾವಗಡ ರವರ ಮದುವೆ ವಿಷಯ ಸಾಕಷ್ಟು ಚರ್ಚೆಯಾಗಿದೆ. ಈ ಕುರಿತಂತೆ ಕಿಚ್ಚ ಸುದೀಪ್ ರವರು ಪ್ರಶ್ನೆ ಕೇಳಿದಾಗ ಸ್ವತಹ ಮಂಜು ಪಾವಗಡ ರವರು ಹೌದು ಸರ್ ನನಗೆ ಈಗಾಗಲೇ 34 ವರ್ಷವಾಗಿದೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುತ್ತಿದ್ದಂತೆ ಆದಷ್ಟು ಬೇಗ ಮದುವೆಯಾಗಬೇಕು ಎಂದು ಹೇಳಿಕೊಂಡರು. ಇನ್ನು ಈ ಕುರಿತಂತೆ ಇದೇ ಪ್ರಶ್ನೆಯನ್ನು ಕಿಚ್ಚ ಸುದೀಪ್ ರವರು ದಿವ್ಯ ಸುರೇಶ್ ಅವರಿಗೆ ಕೇಳಿದಾಗ ಏನು ಹೇಳಿದ್ರು ಗೊತ್ತಾ.

ಈ ಪ್ರಶ್ನೆಗೆ ದಿವ್ಯ ಸುರೇಶ್ ರವರು ಹೌದು ಸರ್ ನಾನು ಕೂಡ ಮಂಜು ಅಪ್ಪ-ಅಮ್ಮನನ್ನು ಭೇಟಿಯಾಗಿ ಈ ಕುರಿತಂತೆ ಮಾತನಾಡಿದ್ದೇನೆ ಅವರು ಕೂಡ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಿದರು. ಅಂದರೆ ಇನ್ನೇನು ಬಿಗ್ ಬಾಸ್ ಮನೆಯಿಂದ ಹೊರಬಂದ ಕೆಲವೇ ಸಮಯದಲ್ಲಿ ಮಂಜು ಪಾವಗಡ ರವರು ಮದುವೆಯಾಗುವುದಂತೂ ಕನ್ಫರ್ಮ್. ಇನ್ನು ಈ ಬಾರಿಯ ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರು ಬಹಳಷ್ಟು ಕ್ಲೋಸ್ ಆಗಿ ಇದ್ದಿದ್ದು ನಂತರ ಭಿನ್ನಾಭಿಪ್ರಾಯಗಳಿಂದ ದೂರವಾಗಿ ಮತ್ತೆ ಹತ್ತಿರವಾಗಿದ್ದು ನೋಡಿದರೆ ಇವರಿಬ್ಬರ ಕಲ್ಯಾಣ ಆಗುತ್ತಾ ಮಂಜು ಪಾವಗಡ ರವರು ಇನ್ಯಾರನ್ನು ಮದುವೆ ಆಗುತ್ತಾರೆ ಎಂದು ಕಾದುನೋಡಬೇಕಾಗಿದೆ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮಗೆ ಹಂಚಿಕೊಳ್ಳಿ ಸ್ನೇಹಿತರೆ.

Comments are closed.