Neer Dose Karnataka
Take a fresh look at your lifestyle.

ಎಲ್ಲಾ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಜಮೀರ್ ಅಹಮ್ಮದ್ ರವರಿಗೆ ಮತ್ತೊಂದು ಬಿಗ್ ಶಾಕ್, ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಜಮೀರ್ ಅಹ್ಮದ್ ಖಾನ್ ರವರ ಮನೆಯ ಮೇಲೆ ಇ.ಡಿ ಅದಿಕಾರಿಗಳ ಕಣ್ಣು ಬಿದ್ದಿತ್ತು. ಮನೆಯಲ್ಲಿ ಚಿನ್ನವನ್ನು ಅಲಂಕಾರಿಕ ವಸ್ತುವಾಗಿ ಬಳಸಿರುವ ಜಮೀರ್ ಅಹಮದ್ ಖಾನ್ ರವರು ಅಲ್ಲಲ್ಲಿ ಚಿನ್ನದ ಲೇಪನಗಳನ್ನು ಲೇಪಿಸಿ ನಿರ್ಮಾಣ ಮಾಡಿರುವ ಅರಮನೆ ಯಂತಿರುವ ಮನೆಯ ಮೇಲೆ ಇಡಿ ಅಧಿಕಾರಿಗಳು ರೆಡ್ ಮಾಡಿದರು, ಸಾವಿರಾರು ದಾಖಲೆಗಳನ್ನು ಪರೀಕ್ಷಿಸಿ, ತದನಂತರ ಬರೋಬ್ಬರಿ 24 ಗಂಟೆಗಳ ನಂತರ ವಾಪಸ್ ಆಗಿದ್ದರು.

ಇದಾದ ಬಳಿಕ ಮಾತನಾಡಿದ್ದ ಜಮೀರ್ ಅಹ್ಮದ್ ಖಾನ್ ರವರು, ನನ್ನ ಯಾವುದೇ ಅಕ್ರಮ ಆಸ್ತಿಗಳ ಕುರಿತು ಯಾವುದೇ ಮಾಹಿತಿ ಸಿಕ್ಕಿಲ್ಲ ಆದ ಕಾರಣ ಅಧಿಕಾರಿಗಳು ವಾಪಸ್ ಹೋಗಿದ್ದಾರೆ, ಎಲ್ಲವನ್ನೂ ಸಂಪೂರ್ಣವಾಗಿ ಕುಲಂಕುಶವಾಗಿ ಪರೀಕ್ಷಿಸಿದ ನಂತರ ಅಧಿಕಾರಿಗಳಿಗೆ ಯಾವುದೇ ಹೆಚ್ಚಿನ ಹಣ ಸಿಕ್ಕಿಲ್ಲ ಎಂದು ಬಹಳ ಆತ್ಮವಿಶ್ವಾಸದಿಂದ ಉತ್ತರ ನೀಡಿದ್ದರು, ನನ್ನ ಎಲ್ಲಾ ವ್ಯವಹಾರ ಸಕ್ರಮವಾಗಿದೆ ಎಂದು ಕೂಡ ಹೇಳಿದ್ದರು.

ಆದರೆ ಇಂದು ಬೆಳ್ಳಂಬೆಳಗ್ಗೆ ಜಮೀರ್ ಅಹಮದ್ ಖಾನ್ ರವರಿಗೆ ಶಾಕ್ ನೀಡಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ ಎಂಬ ವಿಚಾರ ಬಯಲಾಗಿದ್ದು, ಸಾಕಷ್ಟು ದಾಖಲೆಗಳಲ್ಲಿ ಅನುಮಾನ ವಿರುವ ಕಾರಣ ಅಧಿಕಾರಿಗಳು ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ ವಿಚಾರಣೆಗೆ ಕರೆದು ಅಲ್ಲಿಯೇ ಜಮೀರ್ ಅಹಮದ್ ಅವರನ್ನು ವಶಕ್ಕೆ ಪಡೆದು ಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಇದೇ ರೀತಿ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೆ ಎಂದು ಕರೆಸಿ ನೀಡಿ ತನ್ನ ವಶಕ್ಕೆ ಪಡೆದುಕೊಂಡಿತ್ತು ಹಾಗೂ ಡಿಕೆ ಶಿವಕುಮಾರ್ ಅವರು ಇದೇ ಸಮಯದಲ್ಲಿ ತಿಹಾರ್ ಜೈಲಿನಲ್ಲಿ ಕೂಡ ಹಲವಾರು ದಿನ ಇರಬೇಕಾಗಿತ್ತು.

Comments are closed.