Neer Dose Karnataka
Take a fresh look at your lifestyle.

ಮಂಜು ವಿರುದ್ಧ ಸೋತ ಅರವಿಂದ್ ರವರ ಅಸಲಿ ಮನೆ ಹೇಗಿದೆ ಗೊತ್ತೇ?? ಇದು ನಿಜವಾದ ಅರವಿಂದ್ ರವರ ಮನೆ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ಗೊತ್ತಿರುವಂತೆ ಈ ಬಾರಿಯ ಬಿಗ್ ಬಾಸ್ ಮುಗಿದಿದ್ದು ಮಂಜು ಪಾವಗಡ ರವರು ಮೊದಲನೇ ಸ್ಥಾನದಲ್ಲಿ ಅರವಿಂದ ಕೆಪಿ ಅವರು ಎರಡನೇ ಸ್ಥಾನದಲ್ಲಿ ದಿವ್ಯ ರವರ ಮೂರನೇ ಸ್ಥಾನದಲ್ಲಿ ವೈಷ್ಣವಿ ಗೌಡರವರು ನಾಲ್ಕನೇ ಸ್ಥಾನದಲ್ಲಿ ಹಾಗೂ ಉದ್ಯಮಿ ಪ್ರಶಾಂತ್ ಸಂಬರ್ಗಿ ಅವರು 5 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿನ ವಿಷಯದಲ್ಲಿ ನಾವು ಅರವಿಂದ್ ಕೆಪಿ ಅವರ ಕುರಿತಂತೆ ತಿಳಿಯೋಣ ಬನ್ನಿ ಸ್ನೇಹಿತರೆ. ಹೌದು ಸ್ನೇಹಿತರೆ ಅರವಿಂದ್ ಕೆಪಿ ಅವರು ಮೂಲತಹ ಉಡುಪಿಯವರು.

2006 ರಿಂದ ಪ್ರೊಫೆಷನಲ್ ಬೈಕ್ ರೇಸರ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಡರ್ಟ್ ಟ್ರ್ಯಾಕ್ಸ್ ರೇಸಿಂಗ್ ನಲ್ಲಿ ಅರವಿಂದ್ ಕೆಪಿ ರವರು 17 ಬಾರಿ ಚಾಂಪಿಯನ್ ಆಗಿ ಗೆದ್ದಿದ್ದಾರೆ. ಇನ್ನು ಮೋಟಾರ್ ರೇಸಿಂಗ್ ನಲ್ಲಿ ಒಂದು ಬಾರಿ ಇಂಟರ್ನ್ಯಾಷನಲ್ ಟ್ರೋಫಿಯನ್ನು ಕೂಡ ಗೆದ್ದಿದ್ದಾರೆ. ಇನ್ನು 2019 ರಲ್ಲಿ ಡಕರ್ ರಾಲಿಯಲ್ಲಿ 37ನೇ ಸ್ಥಾನ ಪಡೆಯುವ ಮೂಲಕ ಸ್ಥಾನಮಾನವನ್ನು ಗೆದ್ದಂತ ಏಕೈಕ ಭಾರತೀಯನಾಗಿ ಮೂಡಿಬಂದರು. 2019 ರಲ್ಲಿ ಮೋಟಾರ್ ರೇಸಿಂಗ್ ನಲ್ಲಿ ಬೆಸ್ಟ್ ಸ್ಪೋರ್ಟ್ಸ್ ಪರ್ಸನ್ ಎಂಬ ಪ್ರಶಸ್ತಿಯನ್ನು ಕೂಡ ಪಡೆದರು.

ಇನ್ನು ಮಲಯಾಳಂ ಚಿತ್ರದ ಸ್ಟಾರ್ ನಾಯಕನಟನ ಆದಂತಹ ದುಲ್ಕರ್ ಸಲ್ಮಾನ್ ರವರ ಬೆಂಗಳೂರು ಡೇಸ್ ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಇನ್ನು ಅದಾದನಂತರ ಈಗ ಅವರು ಬಿಗ್ ಬಾಸ್ ಸೀಸನ್ ಎಂಟರ ರನ್ನರ್-ಅಪ್ ಆಗಿರೋದು ನಿಮಗೆಲ್ಲ ಗೊತ್ತೇ ಇದೆ. ಇನ್ನು ಉಡುಪಿಯಲ್ಲಿರುವ ಅರವಿಂದ್ ಕೆಪಿ ಅವರ ಮನೆ ಹೇಗಿದೆ ಗೊತ್ತ ಸ್ನೇಹಿತರೆ. ಕರಾವಳಿ ಉಡುಪಿಯ ಹಸಿರು ಹಾಗೂ ಜಲರಾಶಿಯ ನಡುವೆ ಇರುವ ಈ ಸುಂದರ ಮನೆ ಖಂಡಿತವಾಗಿ ನಿಮಗೆ ಇಷ್ಟವಾಗುತ್ತದೆ ಈ ಕೆಳಗಿನ ವಿಡಿಯೋದಲ್ಲಿ ನೀವು ಕೂಡ ನೋಡಬಹುದು.

Comments are closed.